Union Bank Of India Recruitment 2025 : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 500 ಹುದ್ದೆಗಳ ಭರ್ತಿ ಅಧಿಸೂಚನೆ ಹೊರಡಿಸಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 500 ಸ್ಪೆಷಲಿಟಿ ಆಫೀಸರ್ ಹುದ್ದೆಗಳನ್ನೂ ಭರ್ತಿ ಮಾಡಲು ಅರ್ಹ ಪದವೀಧರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಮೇ 2025 ಆಗಿರುತ್ತದೆ. 250 ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ ಹಾಗೂ 250 ಅಸಿಸ್ಟೆಂಟ್ ಮ್ಯಾನೇಜರ್ ಐಟಿ ಹುದ್ದೆಗಳಿವೆ. ಕೊನೆಯ ದಿನಾಂಕ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಕೊನೆಯಲ್ಲಿ ಎಲ್ಲರೂ ಅರ್ಜಿ ಸಲ್ಲಿಸುವ ಕಾರಣ ವೆಬ್ಸೈಟ್ ಬ್ಯುಸಿ ಅಥವಾ ತಾಂತ್ರಿಕ ತೊಂದರೆ ಆಗಬಹುದು. ಹಾಗಾಗಿ ಸೇಫ್ಟಿ ದೃಷ್ಟಿಯಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಸಂಬಂದಿಸಿದ ಎಲ್ಲಾ ಮಾಹಿತಿ, ಅಂದರೆ ಅರ್ಜಿ ಸಲ್ಲಿಸುವ ವಿಧಾನ, ಎಲ್ಲಿ, ಹೇಗೆ ಮತ್ತು ಪ್ರಮುಖ ದಾಖಲೆಗಳು, ಅರ್ಜಿ ಶುಲ್ಕ, ವೇತನ ಶ್ರೇಣಿ ಹಾಗೂ ವಿದ್ಯಾರ್ಹತೆ ಮತ್ತು ವಯೋಮಿತಿ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Union Bank Of India Recruitment 2025 : ಸಂಪೂರ್ಣ ಮಾಹಿತಿ.

Union Bank Of India Recruitment 2025 : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 250 ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ ಹಾಗೂ 250 ಅಸಿಸ್ಟೆಂಟ್ ಮ್ಯಾನೇಜರ್ ಐಟಿ ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
- ಬ್ಯಾಂಕ್ ಹೆಸರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank Of India).
- ಹುದ್ದೆಯ ಹೆಸರು : ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ (Assistant Manager Credit) : 250 ಹುದ್ದೆಗಳು.
- ಅಸಿಸ್ಟೆಂಟ್ ಮ್ಯಾನೇಜರ್ ಐಟಿ (Assistant Manager IT ) : 250 ಹುದ್ದೆಗಳು.
- ಒಟ್ಟು ಹುದ್ದೆಗಳು : 500.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 24/04/2025.
- ಕೊನೆಯ ದಿನಾಂಕ : 20/05/2025.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (Online).
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಮೇ 2025 ಆಗಿರುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಯೂನಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Union Bank Of India Recruitment 2025 : ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 500 ಸ್ಪೆಷಲಿಟಿ ಆಫೀಸರ್ ಹುದ್ದೆಗಳನ್ನೂ ಭರ್ತಿ ಮಾಡಲು ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಶೈಕ್ಷಣಿಕ ವಿವರ (Education Qualification).
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ CA ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- CMA ಮತ್ತು CS ಪದವಿ.
- ಹಣಕಾಸು ವಿಷಯದಲ್ಲಿ ಶೇಕಡಾ 60% ಅಂಕಗಳೊಂದಿಗೆ MBA ಪದವಿ.
- ಹಾಗೂ MMS ಪದವಿ.
- PGDM ಪದವಿ.
- PGDBM ಪದವೀಧರರು.
ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ (Assistant Manager Credit) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಯೂನಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಎಲ್ಲಿ ಕ್ಲಿಕ್ ಮಾಡಿ.
- ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ.
- ಇಲೆಕ್ಟ್ರಾನಿಕ್ ಮತ್ತು ಐಟಿ.
- ಇಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್.
- ಡೇಟಾ ಸೈನ್ಸ್.
- ಮೆಷನ್ ಲರ್ನಿಂಗ್ ಅಂಡ್ ಎಐ.
- ಸೈಬರ್ ಸೆಕ್ಯೂರಿಟಿ.
- ಈ ಮೇಲಿನ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ.
- ಅಥವಾ BE / B.Tech.
- ಎಂಸಿಎ(MCA).
- ಎಂಎಸ್ಸಿ (M.SC).
- ಎಂ.ಟೆಕ್ (M.Tech).
ಈ ಪದವೀಧರ ಅಭ್ಯರ್ಥಿಗಳು ಅಸಿಸ್ಟೆಂಟ್ ಮ್ಯಾನೇಜರ್ ಐಟಿ (Assistant Manager IT ) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ ವಿವರ (Age Qualification).
ವಯಸ್ಸಿನ ಮಿತಿಯನ್ನು ನೋಡುವುದಾದರೆ,
- ಕನಿಷ್ಠ 22 ವರ್ಷಗಳು.
- ಗರಿಷ್ಠ 30 ವರ್ಷಗಳು.
ಈ ವಯೋಮಿತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
Union Bank Of India Recruitment 2025 : ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 250 ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ ಹಾಗೂ 250 ಅಸಿಸ್ಟೆಂಟ್ ಮ್ಯಾನೇಜರ್ ಐಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಹೀಗಿವೆ.
- ಆಧಾರ್ ಕಾರ್ಡ್(AAdhar Card).
- ಚುನಾವಣಾ ಗುರುತಿನ ಚೀಟಿ(Election Identity Card).
- ಆದಾಯ ದೃಡೀಕರಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ(SSLC Marks Card).
- ಪಿಯುಸಿ ಅಂಕಪಟ್ಟಿ (PUC Marks Card).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Marks Card).
ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Union Bank Of India Recruitment 2025 : ಅರ್ಜಿ ಸಲ್ಲಿಸುವ ವಿಧಾನ.

Union Bank Of India Recruitment 2025 : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 500 ಸ್ಪೆಷಲಿಟಿ ಆಫೀಸರ್ ಹುದ್ದೆಗಳನ್ನೂ ಭರ್ತಿ ಮಾಡಲು ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ (Union Bank of India) ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ “ಸ್ಪೆಷಲಿಟಿ ಆಫೀಸರ್(SO)” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಹಾಕಿ ರಿಜಿಸ್ಟರ್ ಆಗಿ.
- ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಬೇಕು.
- ಲಾಗಿನ್ ಆದಮೇಲೆ,ಅಪ್ಲಿಕೇಶನ್ ತೆರೆದ ನಂತರ ನಿಮ್ಮ ವೈಯಕ್ತಿಕ ವಿವರ ಎಂಟ್ರಿ ಮಾಡಿ.
- ಹೆಸರು, ವಿಳಾಸವನ್ನು ಸರಿಯಾಗಿ ನಮೂದಿಸಿ.
- ನಂತರ ನಿಮ್ಮ ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಎಲ್ಲಾ ವಿವರಗಳನ್ನು ಎಂಟ್ರಿ ಮಾಡಿದ ಮೇಲೆ ಅರ್ಜಿ ಶುಲ್ಕ ಪಾವತಿ ಮಾಡಬೇಕು.
- ಆಮೇಲೆ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಹಾಗೆ ಅರ್ಜಿ ಶುಲ್ಕದ ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಕೊನೆಗೆ ಸಲ್ಲಿಸಿದ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.
- ಸರಿಯಾಗಿ ಇದ್ದರೆ submit ಬಟನ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಮಾಡುವಾಗ ನೀಡಿರುವ ಇಮೇಲ್ ಐಡಿ(Email ID)ಮತ್ತು ಪಾಸ್ ವರ್ಡ್ (Password) ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಥವಾ ಯಾವುದಾದರು ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದೆ ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದಾಗ ಪ್ರಿಂಟ್ ತೆಗೆಯಲು ಲಾಗಿನ್ ಮಾಡುವ ಸಂದರ್ಭದಲ್ಲಿ ಬೇಕಾಗುತ್ತದೆ.
Union Bank Of India Recruitment 2025 : ಅರ್ಜಿ ಶುಲ್ಕದ ವಿವರ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 250 ಅಸಿಸ್ಟೆಂಟ್ ಮ್ಯಾನೇಜರ್ ಕ್ರೆಡಿಟ್ ಹಾಗೂ 250 ಅಸಿಸ್ಟೆಂಟ್ ಮ್ಯಾನೇಜರ್ ಐಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಜಿ ಶುಲ್ಕ ಪಾವತಿಸಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.177 ಅರ್ಜಿ ಶುಲ್ಕ ಪಾವತಿಸಬೇಕು.
- PWD ಅಭ್ಯರ್ಥಿಗಳು ರೂ.177 ಶುಲ್ಕ ನೀಡಬೇಕು.
- ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ.1,180 ಶುಲ್ಕ ಪಾವತಿ ಮಾಡಬೇಕು.
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ ಮತ್ತು ಆನ್ಲೈನ್ ಮೂಲಕ ಪಾವತಿ ಮಾಡಬಹುದು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.