UG CET 2025 ಅಂಕ ದಾಖಲಿಸಲು ಲಿಂಕ್ ಬಿಡುಗಡೆ.

UG CET 2025

UG CET 2025 ಫಲಿತಾಂಶ ಪ್ರಕಟವಾಗದೆ ಇದ್ದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು CET ಫಲಿತಾಂಶವನ್ನು ಮೇ 24 ರಂದು ಪ್ರಕಟ ಮಾಡಿತ್ತು. ಆದರೇ ಕೆಲವು ವಿದ್ಯಾರ್ಥಿಗಳು ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಎಂಟ್ರಿ ಮಾಡಿರದ ಕಾರಣ ಅವರ ಸಿಇಟಿ 2025’ರ ಫಲಿತಾಂಶವನ್ನು ತಡೆ ಹಿಡಿದಿತ್ತು. ರಿಸಲ್ಟ್ ತಡೆಹಿಡಿದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು 26 ಮೇ 2025 ರಂದು ಲಿಂಕ್ ಬಿಡುಗಡೆ ಮಾಡಲಾಗಿದೆ. ಈ ಲಿಂಕ್ ನ ಮೂಲಕ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಪಿಯುಸಿ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸಿದ ಅಂಕ ಮತ್ತು ಅಂಕಪಟ್ಟಿಯನ್ನು ಪರೀಕ್ಷಾ ಪ್ರಾಧಿಕಾರದಿಂದ ಪರಿಶೀಲನೆ ಮಾಡಿದ ನಂತರ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು KEA ದ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಲೇಖನ ಪೂರ್ತಿಯಾಗಿ ಓದಿ ಸಂಪೂರ್ಣ ಮಾಹಿತಿ ತಿಳಿಯಿರಿ.

UG CET 2025 ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು ಲಿಂಕ್ ನ ಮಾಹಿತಿ ಇಲ್ಲಿದೆ.

UG CET 2025
UG CET 2025

UG CET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(KEA) ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಸಿಇಟಿ 2025 ರ ಫಲಿತಾಂಶವನ್ನು 24 ಮೇ 2025 ರಂದು ಪ್ರಕಟ ಮಾಡಿತ್ತು. ಆದರೇ ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಕಾರಣ ಈ ವಿದ್ಯಾರ್ಥಿಗಳು ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಎಂಟ್ರಿ ಮಾಡಿಲ್ಲ. ರಿಸಲ್ಟ್ ತಡೆಹಿಡಿದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು 26 ಮೇ 2025 ರಂದು ಲಿಂಕ್ ಬಿಡುಗಡೆ ಮಾಡಲಾಗಿದೆ.

ಇಲಾಖೆ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA).

ಪರೀಕ್ಷೆ ಹೆಸರು : ಸಿಇಟಿ (CET) 2025.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು : 3,30,000.

ಪರೀಕ್ಷೆಗೆ ಹಾಜರಾದವರು : 3,11,000.

ಉತ್ತಿರ್ಣ ಆದವರು : 2,75,677.

ಫಲಿತಾಂಶ ದಿನಾಂಕ : 24 ಮೇ 2025.

ಕೆಇಎ(KEA) cet 2025 ರ ಫಲಿತಾಂಶ ಪ್ರಕಟ ಮಾಡಿದ್ದು, ಈ ಭಾರಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. ಸಾದಾರಣವಾಗಿ ಎಲ್ಲಾ ವಿಭಾಗದಲ್ಲಿ ಸಹ ಬಾಲಕರು ಸಾಧನೆ ಮಾಡಿದ್ದಾರೆ. ಸುಮಾರ ಮೂರು ಲಕ್ಷದ ಮೂವತ್ತು ಸಾವಿರ ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಅರ್ಜಿಗಳನ್ನು ಸಲ್ಲಿಸಿದ್ದರು. ಅದರಲ್ಲಿ ಸುಮಾರು ಮೂರು ಲಕ್ಷದ ಹನ್ನೊಂದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಎರಡು ಲಕ್ಷದ 75 ಸಾವಿರದ 677 ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ.

ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಭವೇಶ್ ಜಯಂತಿ ಮೊದಲ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಸಾತ್ವಿಕ್ ಬಿರಾದಾರ್, ಉತ್ತರಹಳ್ಳಿ, ಕನಕಪುರ ರಸ್ತೆಯಲ್ಲಿ ಇರುವ ಚೈತನ್ಯ ಟೆಕ್ನೋ ಶಾಲೆ. ಹಾಗೆ ಮೂರನೇ ಸ್ಥಾನವನ್ನು ದಿನೇಶ್ ಗೊಮತಿ ಎಂಬ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. UG CET 2025 ರಲ್ಲಿ ವಿಭಾಗವರು Rank ಪಡೆದವರ ಪಟ್ಟಿಯನ್ನು ಮುಂದೆ ನೀಡಲಾಗಿದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

UG CET 2025 ರಲ್ಲಿ ವಿಭಾಗವರು Rank ಪಡೆದವರ ಪಟ್ಟಿಯ ವಿವರ ಇಲ್ಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(KEA) ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ, ಸಿಇಟಿ 2025 ರ ಫಲಿತಾಂಶವನ್ನು 24 ಮೇ 2025 ರಂದು ಪ್ರಕಟ ಮಾಡಿತ್ತು. UG CET 2025 ರಲ್ಲಿ ವಿಭಾಗವರು Rank ಪಡೆದವರ ಪಟ್ಟಿಯನ್ನು ನೋಡೋಣ.

  • ಇಂಜಿನಿಯರಿಂಗ್ ವಿಭಾಗ :

ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಭವೇಶ್ ಜಯಂತಿ ಪಡೆದುಕೊಂಡಿದ್ದಾರೆ.

ದ್ವಿತೀಯ ಸ್ಥಾನವನ್ನು ಸಾತ್ವಿಕ್ ಬಿರಾದಾರ್, ಉತ್ತರಹಳ್ಳಿ, ಕನಕಪುರ ರಸ್ತೆಯಲ್ಲಿ ಇರುವ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಪಡೆದುಕೊಂಡಿದ್ದಾನೆ.

ಮೂರನೇ ಸ್ಥಾನವನ್ನು ದಿನೇಶ್ ಗೊಮತಿ ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

  • ಪಶು ವೈದ್ಯಕೀಯ ವಿಭಾಗ :

ಪ್ರಥಮ ಸ್ಥಾನವನ್ನು ಹರೀಶ್ ರಾಜ್ ಡಿ.ವಿ, ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ,ಯಲಹಂಕ ಶಾಲೆಯ ವಿದ್ಯಾರ್ಥಿ ಪಡೆದುಕೊಂಡಿದ್ದಾನೆ.

ದ್ವಿತೀಯ ಸ್ಥಾನವನ್ನು ಆತ್ರೇಯ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಆರ್.ಎಸ್.ಲೇಔಟ್, ಬೆಂಗಳೂರು ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ತೃತೀಯ ಸ್ಥಾನವನ್ನು ಸಫಲ್.ಎಸ್. ಶೆಟ್ಟಿ, ಎಕ್ಸ್ಪರ್ಟ್ ಪಿಯು ಕಾಲೇಜ್, ಮಂಗಳೂರು ವಿದ್ಯಾರ್ಥಿಯ ಪಾಲಾಗಿದೆ.

  • ಬಿ.ಎಸ್ಸಿ ಕೃಷಿ ವಿಭಾಗ :

ಪ್ರಥಮ ಸ್ಥಾನವನ್ನು ಅಕ್ಷಯ್.ಎಂ.ಹೆಗಡೆ, ಆಳ್ವಾಸ್ ಪಿಯು ಕಾಲೇಜ್ ಮೂಡ್ಬಿದ್ರೆ ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ಎರಡನೇ ಸ್ಥಾನವನ್ನು ಸಾಯಿಶ್ ಶ್ರವಣ್ ಪಂಡಿತ್ ಎಕ್ಸ್ಪರ್ಟ್ ಪಿಯು ಕಾಲೇಜ್, ಮಂಗಳೂರಿನ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ.

ಮೂರನೇ ಸ್ಥಾನವನ್ನು ಸುಚಿತ್.ಪಿ.ಪ್ರಸಾದ್ ಎಕ್ಸ್ಪರ್ಟ್ ಪಿಯು ಕಾಲೇಜ್, ಮಂಗಳೂರಿನ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ.

KEA ದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

  • ಯೋಗ ಮತ್ತು ನ್ಯಾಚುರೋಪತಿ ವಿಭಾಗ :

ಪ್ರಥಮ ಸ್ಥಾನವನ್ನು ಹರೀಶ್ ರಾಜ್ ಡಿ.ವಿ, ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ,ಯಲಹಂಕ ಶಾಲೆಯ ವಿದ್ಯಾರ್ಥಿ ಪಲಾಗಿದೆ.

ದ್ವಿತೀಯ ಸ್ಥಾನವನ್ನು ಆತ್ರೇಯ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಆರ್.ಎಸ್.ಲೇಔಟ್, ಬೆಂಗಳೂರು ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ತೃತೀಯ ಸ್ಥಾನವನ್ನು ಸಫಲ್.ಎಸ್. ಶೆಟ್ಟಿ, ಎಕ್ಸ್ಪರ್ಟ್ ಪಿಯು ಕಾಲೇಜ್, ಮಂಗಳೂರು ವಿದ್ಯಾರ್ಥಿಯ ಪಾಲಾಗಿದೆ.

  • ಬಿ.ಎಸ್ಸಿ ನರ್ಸಿಂಗ್ ವಿಭಾಗ :

ಪ್ರಥಮ ಸ್ಥಾನವನ್ನು ಹರೀಶ್ ರಾಜ್ ಡಿ.ವಿ, ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ,ಯಲಹಂಕ ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ದ್ವಿತೀಯ ಸ್ಥಾನವನ್ನು ಆತ್ರೇಯ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಆರ್.ಎಸ್.ಲೇಔಟ್, ಬೆಂಗಳೂರು ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ತೃತೀಯ ಸ್ಥಾನವನ್ನು ಸಫಲ್.ಎಸ್. ಶೆಟ್ಟಿ, ಎಕ್ಸ್ಪರ್ಟ್ ಪಿಯು ಕಾಲೇಜ್, ಮಂಗಳೂರು ವಿದ್ಯಾರ್ಥಿಯ ಪಾಲಾಗಿದೆ.

  • ಫಾರ್ಮಾ-ಡಿ ವಿಭಾಗ :

ಮೊದಲ ಸ್ಥಾನವನ್ನು ಆತ್ರೇಯ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಆರ್.ಎಸ್.ಲೇಔಟ್, ಬೆಂಗಳೂರು ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ಎರಡನೇ ಸ್ಥಾನವನ್ನು ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಭವೇಶ್ ಜಯಂತಿ ಪಡೆದುಕೊಂಡಿದ್ದಾರೆ.

ಮೂರನೇ ಸ್ಥಾನವನ್ನು ಹರೀಶ್ ರಾಜ್ ಡಿ.ವಿ, ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ,ಯಲಹಂಕ ಶಾಲೆಯ ವಿದ್ಯಾರ್ಥಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

  • ಬಿ- ಫಾರ್ಮ ವಿಭಾಗ :

ಪ್ರಥಮ ಸ್ಥಾನವನ್ನು ಆತ್ರೇಯ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಆರ್.ಎಸ್.ಲೇಔಟ್, ಬೆಂಗಳೂರು ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ.

ಎರಡನೇ ಸ್ಥಾನವನ್ನು ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಭವೇಶ್ ಜಯಂತಿ ಪಡೆದುಕೊಂಡಿದ್ದಾರೆ.

ಮೂರನೇ ಸ್ಥಾನವನ್ನು ಹರೀಶ್ ರಾಜ್ ಡಿ.ವಿ, ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ,ಯಲಹಂಕ ಶಾಲೆಯ ವಿದ್ಯಾರ್ಥಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಹೀಗೆ 2025 ರಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2024ರ ಸಿಇಟಿ ಫಲಿತಾಂಶಕ್ಕೆ ಹೋಲಿಸಿದರೆ, 2025ರ ಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬಂದಂತಹ ಫಲಿತಾಂಶ. Rank ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸೋಣ.

UG CET 2025 ರ ಕೌನ್ಸಲಿಂಗ್ ನಡೆಯುವ ದಿನಾಂಕದ ವಿವರವನ್ನು ನೋಡೋಣ.

ನೀಟ್ (NEET) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಸಿಇಟಿ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ತಿಳಿಸಿದ್ದಾರೆ. ನೀಟ್ ಫಲಿತಾಂಶದ ನಂತರ, ವೈದ್ಯಕೀಯ ಸೀಟು ಹಂಚಿಕೆ ಕೌನ್ಸಲಿಂಗ್ ನೋಡಿಕೊಂಡು, ಆಮೇಲೆ ಸಿಇಟಿ ಸೀಟು ಹಂಚಿಕೆ ಕೌನ್ಸಲಿಂಗ್ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಬಂದ ಅಂಕಗಳ ಆಧಾರದ ಮೇಲೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ವಿಭಾಗಗಳಲ್ಲಿನ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಿಇಟಿ 2025ರಲ್ಲಿ ಫಲಿತಾಂಶವನ್ನು ತಡೆಹಿಡಿದ ವಿದ್ಯಾರ್ಥಿಗಳಿಗೆ ಈಗಾಗಲೇ ಲಿಂಕನ್ನು ಬಿಡುಗಡೆ ಮಾಡಲಾಗಿದೆ. ಈ ಲಿಂಕ್ ನ ಮೂಲಕ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆಯನ್ನು ಮತ್ತು ಅಂಕಪಟ್ಟಿಯ ಅಂಕಗಳನ್ನು ನಮೂದನೆ ಮಾಡಬೇಕು. ಹಾಗೆ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಬೇಕು. ಅಪ್ಲೋಡ್ ಮಾಡಿದ ಅಂಕಪಟ್ಟಿಯನ್ನು ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರದಿಂದ ಪರಿಶೀಲನೆ ಮಾಡಲಾಗುವುದು.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *