South indian bank recruitment 2025

South indian bank recruitment 2025

South indian bank recruitment 2025 : ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳು (Junior Officers) ಮತ್ತು ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಉದ್ಯೋಗ ಸ್ಥಳ ಭಾರತದ ಯಾವುದೇ ಶಾಖೆಯಲ್ಲಿ ಆಗಿರಬಹುದು. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 19 ಮೇ 2025 ಆಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಮೇ 2025 ಆಗಿರುತ್ತದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಪದವಿ ಮುಗಿಸಿಕೊಂಡು ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಿ. ಬ್ಯಾಂಕ್ ಉದ್ಯೋಗದಲ್ಲಿ ಆಸಕ್ತಿಯುಳ್ಳವರಿಗೆ ಇದು ಶುಭ ಸುದ್ದಿಯಾಗಿದೆ. ಈ ಲೇಖನದಲ್ಲಿ ನಾವು south indian bank ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಎಲ್ಲಿ ಮತ್ತು ಬೇಕಾಗುವ ಅಗತ್ಯ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ಣ ಓದಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.

South indian bank recruitment 2025 : ಸಂಪೂರ್ಣ ಮಾಹಿತಿ.

South indian bank recruitment 2025
South indian bank recruitment 2025

South indian bank recruitment 2025 : ಭಾರತದಲ್ಲಿ ಇರುವ ಸೌತ್ ಇಂಡಿಯನ್ ಬ್ಯಾಂಕ್ ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವಂತಹ ಜೂನಿಯರ್ ಆಫೀಸರ್ ಮತ್ತು ಬ್ಯುಸಿನೆಸ್ ಪ್ರಮೋಷನ್ ಆಫೀಸರ್ ಹುದ್ದೆಗಳನ್ನು ಭಾರತೀಯ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.ಹುದ್ದೆಗಳಿಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೋಡೋಣ.

  • ಬ್ಯಾಂಕ್ ಹೆಸರು : ಸೌತ್ ಇಂಡಿಯನ್ ಬ್ಯಾಂಕ್(South indian bank).
  • ಹುದ್ದೆಗಳು : ಕಿರಿಯ ಅಧಿಕಾರಿಗಳು (Junior Officers).
  • ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer).
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್(Online).
  • ಅರ್ಜಿ ಸಲ್ಲಿಕೆ ಪ್ರಾರಂಭ : 19 ಮೇ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಮೇ 2025.
  • ವಯೋಮಿತಿ : ಕನಿಷ್ಠ 21 ರಿಂದ 28 ವರ್ಷಗಳು.
  • ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ.500 ಪಾವತಿಸಬೇಕು.
  • ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ರೂ.200 ಅರ್ಜಿ ಶುಲ್ಕ ಇರುತ್ತದೆ.
  • ಶೈಕ್ಷಣಿಕ ಅರ್ಹತೆ : ಪದವಿ (Degree).
  • ಶುಲ್ಕ ಪಾವತಿ ವಿಧಾನ : ಆನ್ಲೈನ್ (Online).
  • ವೇತನ ಶ್ರೇಣಿ : ವಾರ್ಷಿಕ 7,44,000.
  • ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ.
  • ಕರ್ತವ್ಯ ಸ್ಥಳ : ಭಾರತ.

ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು SIB bank ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಕೊನೆಯಲ್ಲಿ ಉಂಟಾಗುವ ತಾಂತ್ರಿಕ ತೊಂದರೆ ಮತ್ತು ವೆಬ್ಸೈಟ್ ಬ್ಯುಸಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮುಂಚೆ ಅರ್ಜಿ ಸಲ್ಲಿಸಿ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

South indian bank recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

South indian bank recruitment 2025

South indian bank recruitment 2025 : ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿದುಕೊಳ್ಳೋಣ.

  • ಶೈಕ್ಷಣಿಕ ಅರ್ಹತೆ (Education Qualification) :

ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳು (Junior Officers) ಮತ್ತು ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಅಂಗಿಕೃತ ವಿಶ್ವ ವಿದ್ಯಾನಿಲಯದಿಂದ ಪದವಿಯನ್ನು ಪಡೆದಿರಬೇಕು.

  • ವಯೋಮಿತಿ ವಿವರ (Age Qualification) :

South indian bank ನ ಜೂನಿಯರ್ ಆಫೀಸರ್ ಮತ್ತು ಬ್ಯುಸಿನೆಸ್ ಪ್ರಮೋಷನ್ ಆಫೀಸರ್ ಹುದ್ದೆಗಳಿಗೆ ಬೇಕಾಗುವ ವಯಸ್ಸಿನ ಮಿತಿಯನ್ನು ನೋಡೋಣ.

  1. ಕನಿಷ್ಠ ವಯಸ್ಸು 21 ವರ್ಷ.
  2. ಗರಿಷ್ಠ ವಯಸ್ಸು 28 ವರ್ಷಗಳು.
  3. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
  4. ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೂ ಸಹ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಸೌತ್ ಇಂಡಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. South indian bank ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

South indian bank recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳು (Junior Officers) ಮತ್ತು ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳನ್ನು ನೋಡೋಣ.

  • ಆಧಾರ್ ಕಾರ್ಡ್ (Aadhar Card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಪಡಿತರ ಚೀಟಿ (Ration Card).
  • ಜಾತಿ ಪ್ರಮಾಣ ಪತ್ರ (Caste Certificate).
  • ಆದಾಯ ದೃಡೀಕರಣ ಪತ್ರ (Income Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
  • ಪಿಯುಸಿ ಅಂಕಪಟ್ಟಿ (PUC Marks Card).
  • ಪದವಿ ಪ್ರಮಾಣ ಪತ್ರ (Degree Certificate).
  • ಪದವಿ ಅಂಕಪಟ್ಟಿಗಳು (Degree Markscards).

ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸೌತ್ ಇಂಡಿಯನ್ ಬ್ಯಾಂಕ್ SIB ನ ಅಧಿಕೃತ ಅಧಿಸೂಚನೆ ನೋಡಬಹುದು. ಅಧಿಕೃತ ಅಧಿಸೂಚನೆ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ. 

South indian bank recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

South indian bank recruitment 2025
South indian bank recruitment 2025

South indian bank recruitment 2025 : ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

  1. ಮೊದಲಿಗೆ ಸೌತ್ ಇಂಡಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. ಮುಖಪುಟ ತೆರೆದ ನಂತರ “ಹೊಸ ಬಳಕೆದಾರರ ನೋಂದಣಿ ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  3. ನಂತರ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಬೇಕು.
  4. ಮೊಬೈಲ್ ನಂಬರ್ ಗೆ ಬರುವ OTP ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು.
  5. ರಿಜಿಸ್ಟರ್ ಮಾಡಿದ ನಂತರ ಲಾಗಿನ್ ಮಾಡಬೇಕು.
  6. ಅಪ್ಲಿಕೇಶನ್ ಓಪನ್ ಆಗುತ್ತದೆ. ಆಗ ನಿಮ್ಮ ವೈಯಕ್ತಿಕ ವಿವರವನ್ನು ಎಂಟ್ರಿ ಮಾಡಬೇಕು.
  7. ಆಮೇಲೆ ನಿಮ್ಮ ಶೈಕ್ಷಣಿಕ ವಿವರಗಳನ್ನು ನಮೂದಿಸಬೇಕು.
  8. ನಿಮ್ಮ ಭಾವಚಿತ್ರವನ್ನು ಮತ್ತು ಮಾದರಿ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  9. ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
  10. ಎಲ್ಲಾ ಮಾಹಿತಿಯನ್ನು ನಮೂದಿಸಿದ ಮೇಲೆ ಮತ್ತೊಮ್ಮೆ ಪರಿಶೀಲನೆ ಮಾಡಿ.
  11. ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ, “ಅರ್ಜಿ ಸಲ್ಲಿಸು” ಎಂಬ ಲಿಂಕ್ ಕ್ಲಿಕ್ ಮಾಡಬೇಕು.
  12. ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

ಗಮನಿಸಿ, ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಗೂ ಪಾಸ್ ವಾರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಮುಂದೆ ನೀವು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರವೇಶ ಪತ್ರ (Admit Card) ಡೌನ್ಲೋಡ್ ಮಾಡಿಕೊಳ್ಳಲು ಲಾಗಿನ್ ಮಾಡಬೇಕು. ಈ ಸಮಯದಲ್ಲಿ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಬೇಕಾಗುತ್ತದೆ.

South indian bank recruitment 2025 : ಹುದ್ದೆಗಳ ಅರ್ಜಿ ಶುಲ್ಕ ಮತ್ತು ವೇತನ ಶ್ರೇಣಿ ವಿವರ.

ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಜಿ ಶುಲ್ಕ ಪಾವತಿ ಮಾಡಬೇಕು.

  • ಅರ್ಜಿ ಶುಲ್ಕ (Application Fee) :
  1. ಸಾಮಾನ್ಯ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕ ಪಾವತಿಸಬೇಕು.
  2. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ರೂ.200 ಅರ್ಜಿ ಶುಲ್ಕ ಇರುತ್ತದೆ.
  • ವೇತನ ಶ್ರೇಣಿ ವಿವರ(Payment Scale) :

ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳು (Junior Officers) ಮತ್ತು ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಾರ್ಷಿಕ 7,44,000 ವೇತನ ಪಡೆಯುತ್ತಾರೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *