SBI CBO Recruitment 2025 : ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾಲಿ ಇರುವ 3,323 CBO ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ಖಾಲಿ ಇರುವ 3,323 ಸರ್ಕಲ್ ಆಧಾರಿತ ಅಧಿಕಾರಿಗಳು(CBO) ಹುದ್ದೆಗಳ ಭರ್ತಿ ಅರ್ಜಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿಯುಳ್ಳ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಮೇ 2025 ಆಗಿರುತ್ತದೆ. ಯಾವುದೇ ಅಂಗಿಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರುವ ಅರ್ಹ ಯುವಕರು ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಎಲ್ಲಾರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ, ವೆಬ್ಸೈಟ್ ಬ್ಯುಸಿ ಅಥವಾ ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಮೊದಲೇ ಅರ್ಜಿ ಸಲ್ಲಿಸಿದರೆ ಇದ್ಯಾವ ತೊಂದರೆಯು ಇರುವುದಿಲ್ಲ. ಹಾಗಾಗಿ ಮುಂಚೆ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು SBI ನ CBO ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಎಲ್ಲಿ, ಹೇಗೆ, ಬೇಕಾಗುವ ಪ್ರಮುಖ ದಾಖಲೆಗಳು ಯಾವುವು, ಪ್ರಮುಖ ದಿನಾಂಕಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
SBI CBO Recruitment 2025 : ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ನೋಡೋಣ.

SBI CBO Recruitment 2025 : ಭಾರತದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಸೌಮ್ಯದ ಅತೀ ದೊಡ್ಡ ಬ್ಯಾಂಕ್ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ಆಗಿರುತ್ತದೆ. ಇದರ ಅನೇಕ ಶಾಖೆಗಳಲ್ಲಿ ಖಾಲಿ ಇರುವ 3,323 ಸರ್ಕಲ್ ಆಧಾರಿತ ಅಧಿಕಾರಿಗಳು(CBO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಇಂಡಿಯಾ(State Bank Of India). SBI.
- ಹುದ್ದೆಯ ಹೆಸರು : ಸರ್ಕಲ್ ಆಧಾರಿತ ಅಧಿಕಾರಿಗಳು(CBO).
- ಒಟ್ಟು ಹುದ್ದೆಗಳು : 3,323.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 29 ಮೇ 2025.
- ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ.
- ಆಯ್ಕೆ ವಿಧಾನ : ಆನ್ಲೈನ್ ಪರೀಕ್ಷೆ, ಸಂದರ್ಶನ.
- ವಯೋಮಿತಿ : ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷಗಳು.
- ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ.750.
- SC/ST/pwd ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್(Online).
ಯಾವುದೇ ಅಂಗಿಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರುವ ಅರ್ಹ ಯುವಕರು ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
SBI CBO Recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
SBI CBO Recruitment 2025 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ಖಾಲಿ ಇರುವ 3,323 ಸರ್ಕಲ್ ಆಧಾರಿತ ಅಧಿಕಾರಿಗಳು(CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಪಡೆದಿರಬೇಕು.
ಶೈಕ್ಷಣಿಕ ಅರ್ಹತೆ (Education Qualification) :
ಯಾವುದೇ ಒಂದು ಉನ್ನತ ಹುದ್ದೆ ಪಡೆಯಬೇಕಾದರೆ ನಮ್ಮಲ್ಲಿ ಉತ್ತಮ ಶಿಕ್ಷಣ ಇರಬೇಕು. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪದವಿ ಮುಗಿಸಿಕೊಂಡು ಇರುವವರು ಅರ್ಜಿ ಸಲ್ಲಿಸಿ.
ಯಾವುದೇ ಅಂಗಿಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.
ಅಥವಾ ಸಮಾನ ಅರ್ಹತೆ ಇರುವ ಪದವಿ ಪಡೆದುಕೊಂಡು ಉತ್ತಿರ್ಣ ಆಗಿರಬೇಕು. ವೈದ್ಯಕೀಯ ಪದವಿ, ಚಾರ್ಟೆಡ್ ಅಕೌಂಟೆಂಟ್, ಇಂಜಿನಿಯರಿಂಗ್ ಪದವಿ,ವೆಚ್ಚ ಲೆಕ್ಕ ಪತ್ರ ನಿರ್ವಹಣೆ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ ವಿವರ (Age Qualification) :
ವಯಸ್ಸಿನ ಮಿತಿಯನ್ನು ತಿಳಿದುಕೊಳ್ಳೋಣ.
- ಕನಿಷ್ಠ ವರ್ಷ 21 ಆಗಿರಬೇಕು.
- ಗರಿಷ್ಠ ವಯಸ್ಸು 30 ವರ್ಷಗಳು.
ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಸಂಪೂರ್ಣ ವಿವರವನ್ನು ಬ್ಯಾಂಕ್ ಆಫ್ ಇಂಡಿಯಾ(State Bank Of India). SBI. ದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಲು ಅವಕಾಶ ಇರುತ್ತದೆ. SBI ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಎಲ್ಲಿ ಕ್ಲಿಕ್ ಮಾಡಿ.
SBI CBO Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ಖಾಲಿ ಇರುವ 3,323 ಸರ್ಕಲ್ ಆಧಾರಿತ ಅಧಿಕಾರಿಗಳು(CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks card).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು ( Degree Markscards).
ಇವೆಲ್ಲಾ ದಾಖಲೆಗಳು ಕಡ್ಡಾಯವಾಗಿ ಇರುಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಪರ್ಕಿಸಿ SBI ಅಧಿಕೃತ ವೆಬ್ಸೈಟ್.
SBI CBO Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನಗಳು.

ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾಲಿ ಇರುವ 3,323 CBO ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ SBI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ವೆಬ್ಸೈಟ್ ಮುಖಪುಟ ತೆರೆದ ನಂತರ ರಿಜಿಸ್ಟರ್ ಮಾಡಬೇಕು.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಎಂಟ್ರಿ ಮಾಡಿ, ಪಾಸ್ ವರ್ಡ್ ಸೆಟ್ ಮಾಡಬೇಕು.
- ನಂತರ ನಿಮ್ಮ ಇಮೇಲ್ ಮತ್ತು ಪಾಸ್ ವರ್ಡ್ ಹಾಕಿ ಲಾಗಿನ್ ಆಗಬೇಕು.
- ಆಗ ಮುಖಪುಟ ತೆರೆದುಕೊಳ್ಳುತ್ತದೆ. ಆಗ “CBO recruitment 2025” ಎಂಬ ಲಿಂಕ್ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಓಪನ್ ಆಗುತ್ತದೆ.
- ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು.
- ಹೆಸರು, ವಿಳಾಸ ಇತ್ಯಾದಿ ಸರಿಯಾಗಿ ನಮೂದಿಸಿ.
- ಆಮೇಲೆ ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ಎಂಟ್ರಿ ಮಾಡಬೇಕು.
- ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
- ಆದಮೇಲೆ ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಬೇಕು.
- ಎಲ್ಲಾ ಮಾಹಿತಿ ಸರಿ ಇದ್ದರೆ, “ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಯಾವುದಾದರು ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡುವಾಗ ಬೇಕಾಗುತ್ತದೆ. ಲಾಗಿನ್ ಮಾಡಿ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.