SAIL recruitment 2025 ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ 302 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದಲ್ಲಿ ಖಾಲಿ ಇರುವ 302 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು 30 ಮೇ 2025 ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಮೆಷಿನ್ ಆಪರೇಟರ್, ಎಲೆಕ್ಟ್ರಿಷಿನ್, ಫಿಟ್ಟರ್, ರಿಗ್ಗರ್, ಟರ್ನರ್, ವೆಲ್ಡರ್ ಮತ್ತು ಪ್ಲಾಂಬರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಶೈಕ್ಷಣಿಕ ಅರ್ಹತೆ ಕೇವಲ ಐಟಿಐ ಮುಗಿಸಿಕೊಂಡು ಇರುವವರು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. 18 ವರ್ಷದಿಂದ 30 ವರ್ಷದ ಒಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು SAIL ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಇಲ್ಲಿ, ಯಾವ ಯಾವ ದಾಖಲೆಗಳು ಬೇಕು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
SAIL recruitment 2025 ಉಕ್ಕು ಪ್ರಾಧಿಕಾರದ ಹುದ್ದೆಗಳ ಸಂಪೂರ್ಣ ವಿವರ.

ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದಲ್ಲಿ ಖಾಲಿ ಇರುವ 302 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು 30 ಮೇ 2025 ಕೊನೆಯ ದಿನದ ಒಳಗೆ ಅರ್ಜಿ ಸಲ್ಲಿಸಿ.
- ಸಂಸ್ಥೆಯ ಹೆಸರು : ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited).
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30 ಮೇ 2025.
- ಒಟ್ಟು ಹುದ್ದೆಗಳು : 302.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್(Online).
- ಶೈಕ್ಷಣಿಕ ಅರ್ಹತೆ : ಐಟಿಐ(ITI).
- ವಯೋಮಿತಿ : 18 ರಿಂದ 30 ವರ್ಷಗಳು.
- ಹುದ್ದೆಗಳ ವಿಂಗಡಣೆ :
- ಮೆಷಿನ್ ಆಪರೇಟರ್(Machine Opareter) : 20 ಹುದ್ದೆ.
- ಎಲೆಕ್ಟ್ರಿಷಿನ್(Electrition) : 30 ಹುದ್ದೆಗಳು.
- ಫಿಟ್ಟರ್(Fitter) : 52.
- ರಿಗ್ಗರ್(Rigger) : 25.
- ಟರ್ನರ್(Turner) : 19.
- ವೆಲ್ಡರ್(wellder) : 50.
- ಪ್ಲಾಂಬರ್(Plumber) : 08 ಹುದ್ದೆ.
ಉಳಿದ ಹುದ್ದೆಗಳು ಮ್ಯಾನೇಜ್ಮೆಂಟ್ ಟ್ರೇನಿಗೆ ಸಂಬಂದಿಸಿದ ಹಲವು ಹುದ್ದೆಗಳು ಇವೆ. SAIL ಕೇಂದ್ರ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾಗಿದೆ. ಕೆಮಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಇನ್ಸರುಮೆಂಟೇಷನ್ ನಲ್ಲಿ ಹುದ್ದೆಗಳು ಇರುತ್ತವೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
SAIL recruitment 2025 ಉಕ್ಕು ಪ್ರಾಧಿಕಾರದ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದಲ್ಲಿ ಖಾಲಿ ಇರುವ 302 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಐಟಿಐ ವೃತ್ತಿಪರ ಶಿಕ್ಷಣವನ್ನು ಶೇಕಡಾ 65% ರಲ್ಲಿ ಉತ್ತಿರ್ಣ ಹೊಂದಿರಬೇಕು. ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು. ಅಂದರೆ
- ಡಿಪ್ಲೋಮ (Diploma).
- ಬಿ.ಟೆಕ್(B.Tech).
- ಬಿಇ(BE).
ಕೆಮಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಇನ್ಸರುಮೆಂಟೇಷನ್ ವಿಷಯದಲ್ಲಿ ಪದವಿ ಪಡೆದಿರಬೇಕು.
- ವಯೋಮಿತಿ ವಿವರ (Age Qualification) :
ಉಕ್ಕು ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಯಸ್ಸಿನ ಮಿತಿಯನ್ನು ತಿಳಿಯೋಣ.
- ಕನಿಷ್ಠ ವಯೋಮಿತಿ 18 ವರ್ಷಗಳು.
- ಗರಿಷ್ಠ ವಯಸ್ಸು 30 ವರ್ಷಗಳು.
- ಪರಿಶಿಷ್ಟ ಜಾತಿ ವರ್ಗದವರಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ.
- ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
- ಹಿಂದುಳಿದ ವರ್ಗಕ್ಕೆ 3 ವರ್ಷಗಳು.
- ಪಿಡಬ್ಲ್ಯೂಡಿ (PWD) ದವರಿಗೆ 10 ವರ್ಷಗಳು.
ಹೀಗೆ ವರ್ಗವಾರು ವಯಸ್ಸಿನ ಸಡಿಲಿಕೆಗೆ ಅವಕಾಶ ನೀಡಲಾಗಿದೆ. ಈ ವಯೋಮಾನದ ಒಳಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. SAIL ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
SAIL recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದಲ್ಲಿ ಖಾಲಿ ಇರುವ 302 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಪಡಿತರ ಚೀಟಿ (Ration card).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC marks card).
- ಪಿಯುಸಿ ಅಂಕಪಟ್ಟಿ (PUC marks card).
- ಐಟಿಐ ಪ್ರಮಾಣ ಪತ್ರ (ITI Certificate).
- ಇಂಜಿನಿಯರಿಂಗ್ ದೃಡೀಕರಣ ಪತ್ರ (Engineering Certificate).
- ಡಿಪ್ಲೋಮ ಸರ್ಟಿಫಿಕೇಟ್ (Diploma Certificate).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ SAIL ನ ವೆಬ್ಸೈಟ್ ಗೆ ಭೇಟಿ ಮಾಡಿ.
ಇದನ್ನೂ ಓದಿ : CISF ಹೆಡ್ ಕಾನ್ಸ್ಟೇಬಲ್ ಹುದ್ದೆಗಳು.
SAIL recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಉಕ್ಕು ಪ್ರಾಧಿಕಾರ (Steel Authority of India Limited) ದಲ್ಲಿ ಖಾಲಿ ಇರುವ 302 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳೋಣ.
- ಮೊದಲು SAIL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ಮೇಲೆ “ಆನ್ಲೈನ್ ಅರ್ಜಿ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ.
- ಮೊಬೈಲ್ ನಂಬರ್ ಹಾಕಿ, ಮೊಬೈಲ್ ಗೆ ಬರುವ OTP ಎಂಟ್ರಿ ಮಾಡಿ.
- OTP ನಮೂದಿಸಿ,ಪಾಸ್ ವರ್ಡ್ ಸೆಟ್ ಮಾಡಿ, ರಿಜಿಸ್ಟರ್ ಮಾಡಬೇಕು.
- ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಕೊಳ್ಳಬೇಕು.
- ಅಪ್ಲಿಕೇಶನ್ ಓಪನ್ ಆದಮೇಲೆ ನಿಮ್ಮ ವಯಕ್ತಿಕ ವಿವರಗಳನ್ನು ನಮೂದಿಸಬೇಕು.
- ನಂತರ ಶೈಕ್ಷಣಿಕ ಅರ್ಹತೆಯನ್ನು ಎಂಟ್ರಿ ಮಾಡಿಕೊಳ್ಳಬೇಕು.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಮುಂದೆ ಅರ್ಜಿ ಶುಲ್ಕ ಪಾವತಿ ಮಾಡಿದ ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಮೂದಿಸಿದ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಖಚಿತ ಮಾಡಿಕೊಳ್ಳಿ.
- ಎಲ್ಲಾ ಮಾಹಿತಿ ಸರಿ ಇದ್ದರೆ, ” ಅರ್ಜಿ ಸಲ್ಲಿಸು” ಎಂಬ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಮಾಡುವಾಗ ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಒಂದು ಡೈರಿಯಲ್ಲಿ ಬರೆದು ಇಟ್ಟುಕೊಳ್ಳಬೇಕು. ಏಕೆಂದರೆ ಮುಂದಿನ ದಿನದಲ್ಲಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಇವುಗಳು ಕಡ್ಡಾಯವಾಗಿ ಬೇಕು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.