PMAY ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ನಿರಾಶ್ರಿತರಿಗೆ ಮನೆಯನ್ನು ನಿರ್ಮಿಸಿ ಕೊಡುವ ಮುಖ್ಯ ಗುರಿಯನ್ನು ಹೊಂದಿರುವ ಮಹತ್ವದ ಯೋಜನೆಯಾಗಿದೆ.
ಭಾರತ ಸರ್ಕಾರವು ದೇಶದಲ್ಲಿ ವಾಸಿಸುವ ಬಡ ವರ್ಗ ಮತ್ತು ಹಿಂದುಳಿದ ವರ್ಗದ ಜನರಿಗೆ ವಾಸಿಸಲು ಒಂದು ಸುರಕ್ಷಿತವಾದ ಮನೆಯನ್ನು ನಿರ್ಮಿಸುವ ಪ್ರಮುಖ ಗುರಿಯನ್ನು ಹೊಂದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(PMAY) 2.0 ಅಡಿಯಲ್ಲಿ ಸುಮಾರು ಮೂರು ಕೋಟಿಗಿಂತ ಅಧಿಕ ಗೃಹ ನಿರ್ಮಾಣದ ಗುರಿಯನ್ನು ಭಾರತ ಸರ್ಕಾರ ಹೊಂದಿದೆ. ಅರ್ಜಿ ಸಲ್ಲಿಸಿದ ಅರ್ಹ ಪಲಾನುಭವಿಗಳಿಗೆ 90 ದಿನಗಳಲ್ಲಿ ಮನೆಯನ್ನು ಮಂಜೂರು ಮಾಡುವ ಪ್ರಮುಖ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಸ್ವಂತ ಮನೆ ಮಾಡುವ ಕನಸ್ಸನ್ನು ನನಸು ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಕೇಂದ್ರ ಸರ್ಕಾರ 25 ಜೂನ್ 2015 ರಲ್ಲಿ ಪಿಎಂ ಆವಾಸ್ ಯೋಜನೆ ಜಾರಿಗೆ ತಂದಿದೆ. ಅಲ್ಲಿಂದ ಇಲ್ಲಿಯ ವರೆಗೆ ಸುಮಾರು ಲಕ್ಷಗಟ್ಟಲೆ ಮನೆಯನ್ನು ಬಡವರಿಗೆ ನೀಡಿದೆ. ಈ ಲೇಖನದಲ್ಲಿ ನಾವು ಪಿಎಂ ಆವಾಸ್ ಯೋಜನೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು, ಅರ್ಹತೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
PMAY : ಪ್ರಧಾನಮಂತ್ರಿ ಆವಾಸ್ ಯೋಜನೆ ಸಂಪೂರ್ಣ ಮಾಹಿತಿ.

PMAY : ಭಾರತ ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿರುವ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಸ್ವಂತ ಮನೆ ಮಾಡುವ ಕನಸ್ಸನ್ನು ನನಸು ಮಾಡುವುದು ಉದ್ದೇಶದಿಂದ ಪಿಎಂ ಆವಾಸ್ ಯೋಜನೆ ಜಾರಿ ಮಾಡಲಾಯಿತು.
- ಯೋಜನೆ ಹೆಸರು : ಪ್ರಧಾನಮಂತ್ರಿ ಆವಾಸ್ ಯೋಜನೆ(PMAY).
- ಜಾರಿಗೆ ಬಂದ ವರ್ಷ : 25 ಜೂನ್ 2015.
- ಸರ್ಕಾರ : ಭಾರತ ಸರ್ಕಾರ.
- ಉದ್ದೇಶ : ಮನೆ ನಿರ್ಮಾಣ.
- ಪಲಾನುಭವಿಗಳು : ಆರ್ಥಿಕವಾಗಿ ದುರ್ಬಲವಾಗಿರುವ ಮಧ್ಯಮ ಮತ್ತು ಬಡ ವರ್ಗ.
- ಯೋಜನೆಯ ಗುರಿ : 3 ಕೋಟಿ ಮನೆ ನಿರ್ಮಾಣ.
- ಅರ್ಹತೆ : ಮಾಸಿಕ 15,000 ಆದಾಯ.
- ಅವಧಿ : 90 ದಿನ.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
ಭಾರತ ಸರ್ಕಾರ ಪಿಎಂ ಆವಾಸ್ ಯೋಜನೆಯನ್ನು ಬಡವರ ಕಲ್ಯಾಣಕ್ಕಾಗಿ ಜಾರಿಗೆ ತಂದಿದೆ. ಸಮಾಜದಲ್ಲಿ ವಾಸಿಸುವ ಅನೇಕ ಜನರಿಗೆ ಸ್ವಂತ ಮನೆ ಕಟ್ಟಬೇಕು ಎಂಬ ಕನಸು ಇರುತ್ತದೆ. ಇದನ್ನೂ ನನಸು ಮಾಡಲು ಅವರಲ್ಲಿ ಸರಿಯಾದ ಉದ್ಯೋಗ ಇರುವುದಿಲ್ಲ. ಅಥವಾ ಕುಟುಂಬದ ನಿರ್ವಹಣೆ ಮತ್ತು ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿರುತ್ತದೆ.
ಇರುವ ಸ್ವಲ್ಪ ಜಮೀನಿನಲ್ಲಿ ಜೀವನ ಸಾಗಿಸುವುದೇ ಕಷ್ಟದ ಕೆಲಸವಾಗಿರುತ್ತದೆ. ಹಾಗಾಗಿ ಮನೆ ಕಟ್ಟುವ ತಮ್ಮ ಕನಸ್ಸನ್ನು ಮರೆತಿರುತ್ತಾರೆ. ಇವರ ಕನಸ್ಸನ್ನು ನನಸಾಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ತಮ್ಮ ಸ್ವಂತ ಮನೆಯನ್ನು ನಿರ್ಮಾಣ ಮಾಡಲು ಆರ್ಥಿಕ ನೆರವು ಸಿಗುತ್ತದೆ. ಅರ್ಜಿ ಸಲ್ಲಿಸಿದ 90 ದಿನದ ಒಳಗೆ ಅರ್ಹ ಪಲಾನುಭವಿಗೆ ಮನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
PMAY : ಪ್ರಧಾನಮಂತ್ರಿ ಆವಾಸ್ ಯೋಜನೆ ಬೇಕಾಗುವ ಪ್ರಮುಖ ದಾಖಲೆಗಳು.
PMAY : ಪಿಎಂ ಆವಾಸ್ ಯೋಜನೆಯನ್ನು ಬಡವರ ಮನೆ ಕಟ್ಟುವ ಆಸೆಯನ್ನು ಈಡೇರಿಸಲು ಭಾರತ ಸರ್ಕಾರ ಜಾರಿಗೆ ತಂದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಮನೆ ಪಡೆಯಲು ಬೇಕಾಗುವ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಪಡಿತರ ಚೀಟಿ (Ration Card).
- ಮೊಬೈಲ್ ನಂಬರ್ (Mobile Number).
- ಭೂ ಕಂದಾಯ ರಶೀದಿ.
- ವಾಸಸ್ಥಳ ದೃಡೀಕರಣ ಪತ್ರ.
ಈ ಎಲ್ಲಾ ದಾಖಲೆಗಳನ್ನು ಹೊಂದಿರುವ ನಾಗರಿಕರು ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮನೆಯ ಯಜಮಾನಿ ಮಹಿಳೆಯರು ಆಗಿದ್ದರೆ ಅಂತವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಅದರ ಉದ್ದೇಶವಾಗಿದೆ.
ಕುಟುಂಬದಲ್ಲಿ ಪುರುಷರು ಮಾತ್ರ ಇದ್ದರೆ, ಅವರೂ ಸಹ ಮನೆಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು 60 ವರ್ಷದ ಒಳಗೆ ಇರಬೇಕು. ಅರ್ಜಿದಾರರು ಸರ್ಕಾರದಿಂದ ಈ ಹಿಂದೆ ಮನೆಯನ್ನು ಪಡೆದಿರಬಾರದು. ಕುಟುಂಬದ ಸದಸ್ಯರು ಸಹ ಸೌಲಭ್ಯ ಪಡೆದಿರಬಾರದು. ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ಮನೆ ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಪಿಎಂ ಅವಾಜ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. ಪಿಎಂ ಆವಾಸ್ ಯೋಜನೆ ಅಧಿಕೃತ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ
PMAY : ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸುವ ವಿಧಾನ.
ಭಾರತ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಮನೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.ದೇಶದಲ್ಲಿ ವಾಸಿಸುವ ಬಡ ವರ್ಗ ಮತ್ತು ಹಿಂದುಳಿದ ವರ್ಗದ ಜನರಿಗೆ ವಾಸಿಸಲು ಒಂದು ಸುರಕ್ಷಿತವಾದ ಮನೆಯನ್ನು ನಿರ್ಮಿಸುವ ಪ್ರಮುಖ ಗುರಿಯನ್ನು ಹೊಂದಿದೆ.
- ಮೊದಲಿಗೆ ಪಿಎಂ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಮುಖಪುಟ ತೆರೆದ ನಂತರ “PMAY Apply” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ.
- ಆಧಾರ್ ಲಿಂಕ್ ಆದ ಮೊಬೈಲ್ ನಂಬರ್ ಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ.
- ಆಧಾರ್ ನಂಬರ್ verify ಆದಮೇಲೆ ನಿಮ್ಮ ಹೆಸರನ್ನು ನಮೂದಿಸಬೇಕು.
- ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ತಪ್ಪದೇ ಎಂಟ್ರಿ ಮಾಡಬೇಕು.
- ನಿಮ್ಮ ಹೆಸರು, ಊರು, ಜಿಲ್ಲೆ, ತಾಲೂಕು, ಗ್ರಾಮ ಇತ್ಯಾದಿ.
- ಅಗತ್ಯ ಇರುವ ಎಲ್ಲಾ ಮಾಹಿತಿ ನಮೂದಿಸಿದ ಮೇಲೆ ಉಳಿಸು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
ಅಥವಾ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ CSC ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(PMAY) 2.0 ಅಡಿಯಲ್ಲಿ ಅರ್ಜಿ ಸಲ್ಲಿಸಿದ 90 ದಿನದ ಒಳಗೆ ಅರ್ಹ ಪಲಾನುಭವಿಗೆ ಮನೆಯನ್ನು ನೀಡಲಾಗುವುದು.
ಪಿಎಂ ಅವಾಜ್ ಯೋಜನೆಯು ಬಡವರ ಪಾಲಿನ ಆಶಾಕಿರಣ ವ್ಯವಸ್ಥೆಯಾಗಿದೆ. ಏಕೆಂದರೆ ಪ್ರಪಂಚದಲ್ಲಿ ಎಷ್ಟೋ ಜನರ ಸ್ವಂತ ಮನೆ ಕಟ್ಟುವ ಕನಸ್ಸನ್ನು ನನಸು ಮಾಡಿದ ಕೀರ್ತಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಲ್ಲುತ್ತದೆ. ದುರ್ಬಲ ವರ್ಗ ಮತ್ತು ಅತೀ ಬಡತನದಲ್ಲಿ ಜೀವನ ಸಾಗಿಸುವ ವರ್ಗದವರಿಗೆ ಮನೆ ಕಟ್ಟುಲು ಆರ್ಥಿಕ ಸಹಾಯ ನೀಡಿ. ಅವರಿಗೆ ಮನೆ ಕಟ್ಟಿ ಕೊಡುತ್ತದೆ. ಹಣಕಾಸಿನ ನೆರವು ನೀಡಿ ಮನೆ ಕಟ್ಟುಲು ಪ್ರೊತ್ಸಹ ನೀಡುತ್ತದೆ.
ಭಾರತ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ(PMAY) 2.0 ಅಡಿಯಲ್ಲಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಎಲ್ಲಾರಿಗೂ ಮನೆ ಸಿಗಬೇಕು ಎಂಬುದು ಇದರ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಿದ ಅರ್ಹ ಪಲಾನುಭವಿಗಳಿಗೆ 90 ದಿನಗಳಲ್ಲಿ ಮನೆಯನ್ನು ಮಂಜೂರು ಮಾಡುವ ಪ್ರಮುಖ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.