PM Vishwakarma Yojana ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕುಶಲಕರ್ಮಿಗಳು ಮತ್ತು ಕರಕುಶಲ ಕಾರ್ಮಿಕರ ಸಬಲೀಕರಣ ಇದರ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಸರ್ಕಾರ ಜನಪರ ಕಲ್ಯಾಣಕ್ಕಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ವರ್ಗದ ಜನರ ಕಲ್ಯಾಣ ಮತ್ತು ಅಭಿವೃದ್ಧಿಗೋಸ್ಕರ ಆರ್ಥಿಕ ಸಹಾಯ ಮಾಡುವ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳು ಮತ್ತು ಕರಕುಶಲ ಕಾರ್ಮಿಕರ ಕೌಶಲ್ಯವನ್ನು ವೃದ್ಧಿಸಲು ಮತ್ತು ಆರ್ಥಿಕ ಸಹಾಯ ಮಾಡುತ್ತದೆ. ಈ ಯೋಜನೆಯನ್ನು 17 ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ವಿಶ್ವಕರ್ಮ ಸಮುದಾಯ 18 ವಿಭಿನ್ನ ರೀತಿಯ ವೃತ್ತಿಯಲ್ಲಿ ತೊಡಗಿದೆ, ಇವರ ಉದ್ಯೋಗವನ್ನು ಅಭಿವೃದ್ಧಿ ಪಡಿಸಲು ಹಣಕಾಸಿನ ಸಹಾಯ ಮಾಡುವ ದೃಷ್ಟಿಯಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಯಿತು.ಈ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ, ಏಲ್ಲಿ, ಮತ್ತು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು, ಅರ್ಹತೆಗಳು, ಪ್ರಯೋಜನಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಿರಿ.
PM Vishwakarma Yojana ಪಿಎಂ ವಿಶ್ವಕರ್ಮ ಯೋಜನೆ(PMVY)ಯ ಸಂಪೂರ್ಣ ವಿವರ.

PM Vishwakarma Yojana : ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿತು. ಕುಶಲಕರ್ಮಿಗಳ ಸಮಗ್ರ ಅಭಿವೃದ್ಧಿಗೆ, ಕೌಶಲ್ಯ ತರಬೇತಿ ಮತ್ತು ಆಧುನಿಕ ಉಪಕರಣ ಖರೀದಿಗೆ, ಹಣಕಾಸಿನ ಸಹಾಯ ಮಾಡುತ್ತದೆ.
- ಸಚಿವಾಲಯದ ಹೆಸರು : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ.
- ಯೋಜನೆ ಹೆಸರು : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (Pradhanamantri Vishvakarma Yojana-PMVY).
- ಪ್ರಾರಂಭ ದಿನಾಂಕ : 17 ಸೆಪ್ಟೆಂಬರ್ 2023.
- ಪ್ರಮುಖ ದಾಖಲೆಗಳು : ಆಧಾರ್ ಕಾರ್ಡ್ (Aadhar card).
- ಬ್ಯಾಂಕ್ ಖಾತೆಯ ವಿವರ (Bank Account Details).
- ಪಡಿತರ ಚೀಟಿ (Ration Card).
- ಮೊಬೈಲ್ ಸಂಖ್ಯೆ (Mobile Number).
- ಯೋಜನೆ ಸಹಾಯಧನ : 3 ಲಕ್ಷ ರೂಪಾಯಿಗಳು.
- ಯೋಜನೆಗೆ ಒಳಪಡುವ ವ್ಯಾಪಾರಗಳು : ಚಿನ್ನದ ಕೆಲಸಗಾರರು.
- ಮೀನು ಬಲೆ ತಯಾರಕರು.
- ದೋಣಿ ತಯಾರು ಮಾಡುವವರು.
- ಬಡಗಿಗಳು.
- ಬೀಗ ತಯಾರಕರು.
- ಕಮ್ಮಾರರು.
- ಉಪಕರಣ ತಯಾರಕರು.
- ಕುಂಬಾರರು.
- ಶಿಲ್ಪಿಗಳು.
- ಕಲ್ಲು ಕೆತ್ತುವವರು.
- ಚಮ್ಮರರು.
- ಕಲ್ಲು ಒಡೆಯುವವರು.
- ಪಾದರಕ್ಷೆ ಕೆಲಸ ಮಾಡುವವರು.
- ಬುಟ್ಟಿ ರೆಡಿಮಾಡಯುವವರು.
- ಟೈಲರ್.
- ಕರಕುಶಲ ಕರ್ಮಿಗಳು.
ಇನ್ನೂ ಅನೇಕ ರೀತಿಯ ವೃತ್ತಿಪರ ಕುಶಲಕರ್ಮಿ ಕೆಲಸ ಮಾಡುವವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.
Important Massages : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್ ಮತ್ತು ಹೊಸ ಉದ್ಯೋಗ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಪ್ಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ.
ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
PM Vishwakarma Yojana ಸೌಲಭ್ಯ ಪಡೆಯಲು ಬೇಕಾದ ಅರ್ಹತೆಗಳು.
PM Vishwakarma Yojana : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳನ್ನು ನೋಡೋಣ.
- ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ಇರಬೇಕು.
- ಅಭ್ಯರ್ಥಿಗಳು ಕುಶಲಕರ್ಮಿಗಳು ಆಗಿರಬೇಕು.
- ಸ್ವಲ್ಪ ಉದ್ಯೋಗ ಮಾಡುತ್ತಿರಬೇಕು.
- ಮೊದಲೇ ತಿಳಿಸಿದ ಹಾಗೆ 18 ವಿಭಿನ್ನ ವೃತ್ತಿಯಲ್ಲಿ ಒಂದು ಉದ್ಯೋಗ ಮಾಡುತ್ತಿರಬೇಕು.
- ಸಂಬಂಧಪಟ್ಟ ವ್ಯಾಪಾರ ಮಾಡುತ್ತಿರಬೇಕು.
- ಯಾವುದೇ ಸರ್ಕಾರಿ ಸೌಲಭ್ಯದಿಂದ ಸಾಲ ಪಡೆದಿರಬಾರದು.
- ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದಿರಬಾರದು.
- ರಾಜ್ಯ ಸರ್ಕಾರದ ಹಣಕಾಸಿನ ನೆರವು ಪಡೆದುಕೊಂಡು ಇರಬಾರದು.
- ಪಿಎಂಇಜಿಪಿ ಯೋಜನೆಯಿಂದ ಸೌಲಭ್ಯ ಪಡೆದಿರುವವರು ಅರ್ಹರಲ್ಲ.
- ಪಿಎಂ ಸ್ವನಿಧಿ ಯೋಜನೆಯ ನೆರವು ಸಿಗದವರು.
- ಹಿಂದಿನ 5 ವರ್ಷ ಒಳಗೆ ಮುದ್ರಾ ಸಾಲವನ್ನು ತೆಗೆದುಕೊಂಡಿರಬಾರದು.
- ಕುಟುಂಬದ ಒಬ್ಬ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬೇಕು.
- ಯಾವುದೇ ಸರ್ಕಾರ ಮತ್ತು ಅವರ ಕುಟುಂಬ ಸದಸ್ಯರು ಅರ್ಹರಲ್ಲ.
- ವಿಧಾನಸಭಾ ಸದಸ್ಯರ ಕುಟುಂಬದವರು ಅರ್ಜಿ ಸಲ್ಲಿಸುವಂತಿಲ್ಲ.
- ಸರ್ಕಾರಿ ಮತ್ತು ಸರ್ಕಾರೆತರ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರೂ ಸಹ ಅಪ್ಲಿಕೇಶನ್ ಹಾಕುವಂತಿಲ್ಲ.
- ನಿವೃತ್ತ ಪಿಂಚಣಿ ಸೌಲಭ್ಯ ಪಡೆಯುವವರು ಅರ್ಹರಲ್ಲ.
ಅಂದರೆ ದೇಶದಲ್ಲಿ ವಿಶ್ವಕರ್ಮ ಸಮುದಾಯ 18 ವಿಭಿನ್ನ ರೀತಿಯ ವೃತ್ತಿಯಲ್ಲಿ ತೊಡಗಿದ ಕುಶಲಕರ್ಮಿಗಳು, ವ್ಯಾಪಾರ ಮಾಡುವವರು ಇವರ ಅಭಿವೃದ್ಧಿ ಸಲುವಾಗಿ ಮಾತ್ರ ಸೌಲಭ್ಯ ನೀಡುವುದು. ಹೆಚ್ಚಿನ ಮಾಹಿತಿಯನ್ನು ತಿಳಿಯಲು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವಿಳಾಸಕ್ಕೆ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ.
PM Vishwakarma Yojana ಸೌಲಭ್ಯ ಪಡೆಯಲು ಬೇಕಾದ ಪ್ರಮುಖ ದಾಖಲೆಗಳು.
ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿತು. ಕುಶಲಕರ್ಮಿಗಳ ಸಮಗ್ರ ಅಭಿವೃದ್ಧಿಗೆ, ಕೌಶಲ್ಯ ತರಬೇತಿ ಮತ್ತು ಆಧುನಿಕ ಉಪಕರಣ ಖರೀದಿಗೆ, ಹಣಕಾಸಿನ ಸಹಾಯ ಪಡೆಯಲು ಬೇಕಾದ ಪ್ರಮುಖ ದಾಖಲೆಗಳನ್ನು ತಿಳಿದುಕೊಳ್ಳೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಬ್ಯಾಂಕ್ ಖಾತೆಯ ವಿವರ (Bank Account Details).
- ಪಡಿತರ ಚೀಟಿ (Ration Card).
- ಮೊಬೈಲ್ ಸಂಖ್ಯೆ (Mobile Number).
ಫಲಾನುಭವಿಯು ಕಡ್ಡಾಯವಾಗಿ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರಬೇಕು. ಪಡಿತರ ಚೀಟಿ ಮಾಡಿಸಿಕೊಳ್ಳದೆ ಇರುವವರು ಅವರ ಕುಟುಂಬದವರ ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ನೀಡಬೇಕು.
PM Vishwakarma Yojana ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.
PM Vishwakarma Yojana : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳು ಮತ್ತು ಕರಕುಶಲ ಕಾರ್ಮಿಕರ ಕೌಶಲ್ಯವನ್ನು ವೃದ್ಧಿಸಲು ಮತ್ತು ಆರ್ಥಿಕ ಸಹಾಯ ನೀಡುವ ಉದ್ದೇಶವನ್ನು ಹೊಂದಿದೆ. ಅವರ ಉದ್ಯೋಗ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವುದು ಯೋಜನೆ ಮುಖ್ಯ ಗುರಿಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲು ಪಿಎಂ ವಿಶ್ವಕರ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.
- ಮುಖಪುಟ ತೆರೆದ ನಂತರ ಲಾಗಿನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ರಿಜಿಸ್ಟರ್ ಮಾಡಿಕೊಳ್ಳಬೇಕು.
- ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ.
- ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು ಎಂಟ್ರಿ ಮಾಡಿ, ರಿಜಿಸ್ಟರ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವಯಕ್ತಿಕ ವಿವರವನ್ನು ನಮೂದಿಸಿ.
- ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಿ.
- ನೀಡಿರುವ ಎಲ್ಲಾ ಮಾಹಿತಿ ಸರಿ ಇದ್ದರೆ “ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಬೇಕು.
ಅಥವಾ ನಿಮ್ಮ ಹತ್ತಿರದ CSC ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ಇರುತ್ತದೆ. ಸೇವಾ ಕೇಂದ್ರಕ್ಕೆ ಭೇಟಿ ಮಾಡುವ ಮೊದಲು ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಸೇವಾ ಕೇಂದ್ರದಲ್ಲಿನ ಸಿಬ್ಬಂದಿಗಳಿಗೆ ಎಲ್ಲಾ ಮಾಹಿತಿಯನ್ನು ನೀಡಬೇಕು.
PM Vishwakarma Yojana ಪಿಎಂ ವಿಶ್ವಕರ್ಮ ಯೋಜನೆ ಪ್ರಯೋಜನಗಳು.
ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಕುಶಲಕರ್ಮಿಗಳ ಸಮಗ್ರ ಅಭಿವೃದ್ಧಿಗೆ, ಕೌಶಲ್ಯ ತರಬೇತಿ ಮತ್ತು ಆಧುನಿಕ ಉಪಕರಣ ಖರೀದಿಗೆ, ಹಣಕಾಸಿನ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ತಂದಿದೆ. ಇದರ ಪ್ರಯೋಜನಗಳು ಹೀಗಿವೆ.
- ವ್ಯಾಪಾರ, ಉದ್ಯಮ ಅಭಿವೃದ್ಧಿ ಗೆ ಸಾಲ ಸೌಲಭ್ಯ ನೀಡುವುದು.
- ಮೇಲಾಧರ ಇಲ್ಲದೆ ಮುಕ್ತ ಸಾಲ ನೀಡುವುದು.
- ಅರ್ಹ ಫಲಾನುಭವಿಗೆ 3 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡುವುದು.
- ಕೌಶಲ್ಯ ತರಬೇತಿ ಪಡೆಯಲು ಸಹಾಯ ಮಾಡುವುದು.
- ರೂ.15,000 ಗಳ ಟೂಲ್ ಕಿಟ್ ಪ್ರೊತ್ಸಹ ನೀಡುವುದು.
- ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ನೀಡಲಾಗುತ್ತದೆ.
- ಡಿಜಿಟಲ್ ವಹಿವಾಟು ಮಾಡಲು ಪ್ರೊಸ್ತಹಿಸುವುದು.
ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
ವಿಶೇಷ ಸೂಚನೆ : ನಮ್ಮ “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟ ಮಾಡುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟ ಮಾಡಲಾಗುವುದು. ವಂದನೆಗಳು.