Pm svanidhi

Pm svanidhi

Pm svanidhi yojana : ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ಒಂದು ಮಹತ್ವದ ಯೋಜನೆಯಾಗಿದೆ.

ಭಾರತ ಸರ್ಕಾರ ಎಲ್ಲಾ ವರ್ಗದ ಬಡ ಮತ್ತು ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ತರಿಗೆ ರೂ.10,000 ವರೆಗೆ ಆರ್ಥಿಕ ಸಹಾಯ ಮಾಡುತ್ತದೆ. ಅಂದರೆ ಸಾಲ ನೀಡುತ್ತದೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಸಬ್ಸಿಡಿ ಸಹ ನೀಡಲಾಗುವುದು. ನಗರ ಮತ್ತು ಗ್ರಾಮಿಣ ಪ್ರದೇಶದ ಎಲ್ಲಾ ಬೀದಿಬದಿ ವ್ಯಾಪಾರ ಮಾಡುವ ವರ್ಗದವರಿಗೂ ಸಹ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯನ್ನು ಜೂನ್ 2020 ರಲ್ಲಿ ಪ್ರಾರಂಭಿಸಲಾಯಿತು. ಆಗ ಹೊತ್ತಿಗೆ ಕೊರೋನ (Covid-19) ಬಂದು ಬೀದಿ ಬದಿ ವ್ಯಾಪಾರ ಮಾಡುವ ವರ್ಗ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಇದನ್ನೂ ಸಮೀಕ್ಷೆ ಮಾಡಿದ ಕೇಂದ್ರ ಸರ್ಕಾರ ವ್ಯಾಪಾರಕ್ಕೆ ಹಣಕಾಸಿನ ಸಹಾಯ ನೀಡುವ ಉದ್ದೇಶದಿಂದ ಪಿಎಂ ಸ್ವನಿಧಿ ಯೋಜನೆ ಜಾರಿಗೆ ತಂದರು. ಈ ಲೇಖನದಲ್ಲಿ ನಾವು ಪಿಎಂ ಸ್ವನಿಧಿ ಯೋಜನೆ ಎಂದರೇನು?, ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳು, ಅರ್ಹತೆಗಳು, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

Pm svanidhi ಯೋಜನೆಯ ಸಂಪೂರ್ಣ ಮಾಹಿತಿ ಹೀಗಿದೆ.

Pm svanidhi
Pm svanidhi

Pm svanidhi(ಪಿಎಂ ಸ್ವನಿಧಿ) ಒಂದು ಮಹತ್ವದ ಕೇಂದ್ರ ವಲಯದ ಯೋಜನೆ ಆಗಿದೆ. ವ್ಯಾಪಾರಸ್ತರಿಗೆ ಆರ್ಥಿಕ ಸೌಲಭ್ಯ ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ. ವ್ಯಾಪಾರ ಮಾಡಲು ಯಾವುದೇ ಆಧಾರವಿಲ್ಲದೆ 10,000 ಸಾವಿರದ ವರೆಗೆ ಸಾಲ ನೀಡುವುದು.

  • ಯೋಜನೆ ಹೆಸರು : ಪ್ರಧಾನಮಂತ್ರಿ ಸ್ವನಿಧಿ (Pm svanidhi yojana).
  • ಜಾರಿಗೆ ಬಂದ ವರ್ಷ : ಜೂನ್ 2020.
  • ಫಲಾನುಭವಿಗಳು : ನಗರ ಪ್ರದೇಶದ ಬೀದಿ ಬದಿ ವ್ಯಾಪಾರ ಮಾಡುವವರು.
  • ಗ್ರಾಮೀಣ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರ ಮಾಡುವ ವರ್ಗಗಳು.
  • ಬೇಕಾದ ದಾಖಲೆಗಳು : ಆಧಾರ್ ಕಾರ್ಡ್ (Aadhar Card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಬ್ಯಾಂಕ್ ಖಾತೆ (Bank Account Number).
  • ಯೋಜನಾ ಉದ್ದೇಶ : ವ್ಯಾಪಾರಕ್ಕೆ ಆರ್ಥಿಕ ಸಹಾಯ (ಸಾಲ) ನೀಡುವುದು.
  • ಮೊದಲ ಸಾಲದ ಮೊತ್ತ : 10,000.

ಯಾವುದೇ ತರಹದ ವ್ಯಾಪಾರ ಮಾಡುವ ಜನರಿಗೆ, ಅವರು ತಮ್ಮ ಜೀವನ ಸಾಗಿಸಲು ಹಣಕಾಸಿನ ಅವಶ್ಯಕತೆ ಇರುತ್ತದೆ. ಎಲ್ಲಾ ಹಣವನ್ನು ವ್ಯಾಪಾರಕೋಸ್ಕರ ಹೂಡಿಕೆ ಮಾಡಿಕೊಂಡರೆ, ಜೀವನ ನಿರ್ವಹಣೆ ಕಷ್ಟ ಆಗುತ್ತದೆ. ಹಾಗಾಗಿ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡಿದರೆ, ಅವರ ಜೀವನ ನಿರ್ವಹಣೆ ಸುಲಭವಾಗುತ್ತದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

pm svanidhi ಯೋಜನೆಯ ಪ್ರಮುಖ ಉದ್ದೇಶಗಳು.

Pm svanidhi
Pm svanidhi

pm svanidhi ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ಮುಖ್ಯ ಉದ್ದೇಶ ಹೊಂದಿದೆ.

  1. ಪ್ರಾರಂಭದಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ತರಿಗೆ ರೂ.10,000 ಸಾಲ ನೀಡುವುದು.
  2. ಬೀದಿಬದಿ ವ್ಯಾಪಾರ ಮಾಡುವ ವರ್ಗಕ್ಕೆ ಆರ್ಥಿಕ ಸಹಾಯ ನೀಡುವುದು.
  3. ಹಣದ ಕೊರತೆಯಿಂದ ವ್ಯಾಪಾರವನ್ನು ನಿಲ್ಲಿಸಿದ ಜನರಿಗೆ ಪುನರ್ ಸ್ಥಾಪಿಸಲು ನೆರವು ನೀಡುವುದು.
  4. ಕೊರೋನ ಕಾಯಿಲೆ ಬಂದ ಮೇಲೆ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಜೀವನ ನಿರ್ವಹಣೆ ಕಷ್ಟ ಆಗಿತ್ತು.
  5. ಮಾರಾಟಗಾರರಿಗೆ ಕೈ ಗೆಟುಕುವ ಬಂಡವಾಳ ಸಾಲ ನೀಡುವುದು.
  6. ಕೊರೋನ ನಂತರ ವ್ಯಾಪಾರವನ್ನು ಪುನರಚೇತನಗೊಳಿಸಲು ಸಾಲ ಸೌಲಭ್ಯ ನೀಡುವುದು.
  7. ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಸಬ್ಸಿಡಿ ನೀಡುವುದು.
  8. ಎರಡನೇ ಕಂತು ಸಾಲ 20,000 ನೀಡುವುದು.
  9. ಡಿಜಿಟಲ್ ಪಾವತಿ ಮಾಡುವವರಿಗೆ ಕ್ಯಾಶ್ ಆಫರ್ ನೀಡುವುದು.
  10. ಮೊದಲ ಸಾಲ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದವರಿಗೆ ಹೆಚ್ಚಿನ ಸಾಲ ನೀಡುವುದು.
  11. ಯಾವುದೇ ಆಧಾರ ಇಲ್ಲದೆ ಸಾಲ ನೀಡುವುದು.
  12. ಸಮಾಜದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುವುದು.
  13. ಮೂರನೇ ಕಂತಿನ ಸಾಲ 50,000ದ ವರೆಗೆ ಪಡೆಯಲು ಅವಕಾಶ ಇರುತ್ತದೆ.

ಇವೆಲ್ಲಾ ಸೌಲಭ್ಯ ನೀಡಿ. ವ್ಯಾಪಾರಸ್ಥರ ಅಭಿವೃದ್ಧಿಗೆ ಸಹಾಯ ಮಾಡುವುದು. ಅವರು ಜೀವನ ನಿರ್ವಹಣೆಗೆ ಸಹಾಯ ಮಾಡುವುದು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಪ್ರಾರಂಭ ಮಾಡಿತು. ಮೈಕ್ರೋ ಕ್ರೆಡಿಟ್ ಯೋಜನೆಯು ಬೀದಿಬದಿ ವ್ಯಾಪಾರಿಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ pm svanidhi(ಆತ್ಮ ನಿರ್ಭರ್ ನಿಧಿ) ಯೋಜನೆ ಜಾರಿಗೆ ಬಂತು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಪಿಎಂ ಸ್ವನಿಧಿ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. pm svanidhi ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ.

pm svanidhi ಯೋಜನೆ ಅರ್ಹತೆ ಮತ್ತು ದಾಖಲೆಗಳು.

ಭಾರತ ಸರ್ಕಾರ ಎಲ್ಲಾ ವರ್ಗದ ಬಡ ಮತ್ತು ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆ ಸೌಲಭ್ಯ ಪಡೆಯಲು ಕೆಲವು ಅರ್ಹತೆ ಮತ್ತು ಪ್ರಮುಖ ದಾಖಲೆಗಳು ಬೇಕು.

ಅರ್ಹತೆಗಳು :

  • ಸ್ಥಳೀಯ ಸಂಸ್ಥೆಗಳಿಂದ ಮಾರಾಟ ಪ್ರಮಾಣ ಪತ್ರ ಪಡೆದಿರುವ ವ್ಯಾಪಾರಸ್ಥರು.
  • ನಗರ ಪಾಲಿಕೆ, ಪುರಸಭೆ,ಪಟ್ಟಣ ಪಂಚಾಯತಿಯಿಂದ ಪಡೆದ ಗುರುತಿನ ಚೀಟಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು :

  1. ಆಧಾರ್ ಕಾರ್ಡ್ (Aadhar Card).
  2. ಚುನಾವಣಾ ಗುರುತಿನ ಚೀಟಿ (Election Identity Card).
  3. ಭಾವಚಿತ್ರಗಳು (Photos).
  4. ಬ್ಯಾಂಕ್ ಖಾತೆ ವಿವರ (Bank Account Details).
  5. ಮಾರಾಟಗಾರ ಪರವಾನಿಗೆ.

ಇವೆಲ್ಲಾ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಾಲ ಪಡೆಯಲು ಅವಕಾಶ ಇರುತ್ತದೆ.

pm svanidhi loan apply online : ಅರ್ಜಿ ಸಲ್ಲಿಸುವ ವಿಧಾನ.

Pm svanidhi(ಪಿಎಂ ಸ್ವನಿಧಿ) ಒಂದು ಮಹತ್ವದ ಕೇಂದ್ರ ವಲಯದ ಯೋಜನೆ ಆಗಿದೆ. ವ್ಯಾಪಾರಸ್ತರಿಗೆ ಆರ್ಥಿಕ ಸೌಲಭ್ಯ ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ. ವ್ಯಾಪಾರ ಮಾಡಲು ಯಾವುದೇ ಆಧಾರವಿಲ್ಲದೆ 10,000 ಸಾವಿರದ ವರೆಗೆ ಸಾಲ ನೀಡುವುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.

  • ಮೊದಲಿಗೆ pm svanidhi ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.
  • ನಂತರ ಸ್ವನಿಧಿ ಯೋಜನೆ ಎಂಬ ಲಿಂಕ್ ಕ್ಲಿಕ್ ಮಾಡಬೇಕು.
  • ಆಮೇಲೆ ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಹಾಕಿ ರಿಜಿಸ್ಟರ್ ಮಾಡಬೇಕು.
  • ನಂತರ ಮೊಬೈಲ್ ನಂಬರ್ ಬಂದ OTP ಹಾಕಿ ಪಾಸ್ ವರ್ಡ್ ಸೆಟ್ ಮಾಡಿ,ರಿಜಿಸ್ಟರ್ ಆಗಬೇಕು.
  • ಮುಂದೆ ಲಾಗಿನ್ ಮಾಡಬೇಕು. ಲಾಗಿನ್ ಆದಮೇಲೆ ಅಪ್ಲಿಕೇಶನ್ ಓಪನ್ ಆಗುತ್ತದೆ.
  • ನಂತರ ಅಪ್ಲಿಕೇಶನ್ ಕೇಳಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ.
  • ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಬೇಕು.
  • ಆಮೇಲೆ ಕೇಳಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಅಪ್ಲಿಕೇಶನ್ ನಲ್ಲಿ ನಮೂದಿಸಿದ ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ, ಅರ್ಜಿ ಸಲ್ಲಿಸಿ ಎಂಬ ಲಿಂಕ್ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ. ನಿಮ್ಮ ಹತ್ತಿರದ CSC ಸಾಮಾನ್ಯ ಸೇವಾ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಆರ್ಥಿಕ ಸೌಲಭ್ಯ ನೀಡುವುದಲ್ಲದೆ, ಲಿಂಗ ಸಮಾನತೆಯನ್ನು ಸಾದಿಸುತ್ತದೆ. ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರನ್ನು ಡಿಜಿಟಲ್ ಯುಗಕ್ಕೆ ಸ್ವಾಗತಿಸುವುದು. ಡಿಜಿಟಲ್ ಸೌಲಭ್ಯ ನೀಡುವುದು.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *