NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

NREGA

NREGA : ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಗ್ರಾಮೀಣ ಕುಟುಂಬಗಳ ಜೀವನೋಪಾಯ ಭದ್ರತೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಭಾರತದ ಗ್ರಾಮೀಣಾಭಿರುದ್ಧಿ ಸಚಿವಾಲಯವು ಗ್ರಾಮೀಣ ಪ್ರದೇಶದ ಜನರಿಗೆ ವಾರ್ಷಿಕ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸುತ್ತದೆ. ಜೊತೆಗೆ ವೇತನವನ್ನು ನೀಡುವ ವ್ಯವಸ್ಥೆ ಇದೆ. ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಮುಖ್ಯ ಗುರಿಯನ್ನು ಹೊಂದಿದೆ. 18 ವರ್ಷಕ್ಕಿಂತ ಮೇಲಿನ ನಾಗರಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗ ಖಾತ್ರಿ ಯೋಜನೆಯ ದಿನಗೂಲಿ ಹಣವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಜನರು ಬಡತನದಲ್ಲಿದ್ದಾರೆ. ಇಂತಹ ಜನರ ಬದುಕಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಉದ್ಯೋಗಖಾತ್ರಿ ಯೋಜನೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಈ ಲೇಖನದಲ್ಲಿ ನಾವು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಇಲ್ಲಿ, ಯಾವಾಗ, ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು?, ಪ್ರಯೋಜನಗಳು ಇನ್ನೂ ಮುಂತಾದ ಮಾಹಿತಿ ನೀಡಿದ್ದೇವೆ.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ಮಾಹಿತಿ ಹೀಗಿದೆ.

NREGA
NREGA

ಭಾರತ ಸರ್ಕಾರದ ಗ್ರಾಮೀಣಾಭಿರುದ್ಧಿ ಸಚಿವಾಲಯವು ಗ್ರಾಮೀಣ ಪ್ರದೇಶದ ಜನರಿಗೆ ವಾರ್ಷಿಕ ಕನಿಷ್ಠ 100 ದಿನಗಳ ಉದ್ಯೋಗ ನೀಡಿ, ವೇತನವನ್ನು ಕೊಡುತ್ತದೆ. 2005 ರಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವಿಶ್ವದ ಅತೀ ದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿದೆ.

  • ಯೋಜನೆ ಹೆಸರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA).
  • ಯೋಜನೆ ಅನುಷ್ಠಾನ : 2005.
  • ಸರ್ಕಾರ : ಭಾರತ ಸರ್ಕಾರ.
  • ಕಾರ್ಯ ಅನುಷ್ಠಾನ : ಗ್ರಾಮೀಣಾಭಿರುದ್ಧಿ ಸಚಿವಾಲಯ.
  • ವಾರ್ಷಿಕ ಉದ್ಯೋಗ : ಕನಿಷ್ಠ 100 ದಿನಗಳು.
  • ವೇತನ ಪಾವತಿ ವಿಧಾನ : ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ.
  • ಮುಖ್ಯ ಉದ್ದೇಶ : ಸಾಮಾಜಿಕ ಮತ್ತು ಆರ್ಥಿಕ ಭದ್ರತೆ.

ಈ ಯೋಜನೆಯು ಸಮಾಜದ ಅತ್ಯಂತ ದುರ್ಬಲ ವರ್ಗದ ಜೀವನಕ್ಕೆ ಸಹಾಯವಾಗಿದೆ. ಪುರುಷ ಮತ್ತು ಮಹಿಳಾ ಎಂಬ ಬೇಧವಿಲ್ಲದೆ, ಸಮಾನವಾದ ವೇತನ ನೀಡಲಾಗಿದೆ. ಪರಿಸರ ರಕ್ಷಣೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಮಹತ್ವ ನೀಡುತ್ತದೆ.

Important Massage : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆ ಹಾಗೂ ಹೊಸ ಉದ್ಯೋಗ ಮಾಹಿತಿಗಳನ್ನು  ಪಡೆಯಲು ದಯವಿಟ್ಟು ನಮ್ಮ “Tharak7star Whatsapp gruop join now” ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು ಯಾವುವು ಎಂಬುದನ್ನು ನೋಡೋಣ.

  1. ಆಧಾರ್ ಕಾರ್ಡ್ (Aadhar Card).
  2. ಚುನಾವಣಾ ಗುರುತಿನ ಚೀಟಿ(Election Identity Card).
  3. ಪಡಿತರ ಚೀಟಿ (Ration Card).
  4. ಅರ್ಜಿದಾರರ ಭಾವಚಿತ್ರಗಳು( Photos).
  5. ಕುಟುಂಬದ ಸದಸ್ಯರ ದಾಖಲೆಗಳು.
  6. ಬ್ಯಾಂಕ್ ಖಾತೆ ವಿವರ (Bank Passbook).
  7. ಮೊಬೈಲ್ ನಂಬರ್(Mobile Number).

ಇವೆಲ್ಲಾ ದಾಖಲೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಉದ್ಯೋಗ ನೀಡುವ ಕ್ರಮ ಕೈಗೊಳ್ಳಲಾಗಿದೆ. ವೇತನವನ್ನು ಸಹ ಕೆಲಸ ಮುಗಿದ 15 ದಿನಗಳ ಒಳಗೆ ನೀಡಲಾಗುವುದು.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳನ್ನು ವಿವರ ಇಲ್ಲಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವಿಶ್ವದ ಅತೀ ದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿದೆ.

ಇದರಿಂದ ಸಿಗುವ ಪ್ರಯೋಜನಗಳನ್ನು ನೋಡೋಣ.

  • ಆರ್ಥಿಕ ಭದ್ರತೆ ಒದಗಿಸುವುದು : ಭಾರತದಲ್ಲಿ ವಾಸಿಸುವ ಬಡ ವರ್ಗದ ಜನರಿಗೆ ವಾರ್ಷಿಕ 100 ದಿನಗಳ ಉದ್ಯೋಗ ನೀಡಿ, ವೇತನ ನೀಡುವ ಮೂಲಕ ಆರ್ಥಿಕ ಸಹಾಯ ಮಾಡುವುದು.
  • ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಉದ್ಯೋಗ ನೀಡುವುದು.
  • ಕನಿಷ್ಠ 5 ಕಿಲೋ ಮೀಟರ್ ವ್ಯಾಪ್ತಿಯ ಒಳಗೆ ಉದ್ಯೋಗ ನೀಡುವುದು.
  • ಪ್ರತಿಯೊಂದು ಕೆಲಸದ ಸ್ಥಳದಲ್ಲಿ ಮೂಲ ಸೌಲಭ್ಯ ನೀಡುವುದು. ಕುಡಿಯುವ ನೀರು, ವಿಶ್ರಾಂತಿ ಪಡೆಯಲು ನೆರಳು ವ್ಯವಸ್ಥೆ ಮಾಡುವುದು.
  • ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಇಡುವುದು.
  • ಅಂಗವಿಕಲ ವ್ಯಕ್ತಿಗಳಿಗೆ ನಿರ್ದಿಷ್ಟವಾಗಿ ಗುರುತಿಸಿದ ಕೆಲಸವನ್ನು ನೀಡುವುದು.
  • ಮಹಿಳಾ ಕೆಲಸಗಾರರ ಮಕ್ಕಳನ್ನು ನೋಡಿಕೊಳ್ಳಲು ಶಿಶುವಿಹಾರವನ್ನು ಒದಗಿಸುವುದು. ಒಬ್ಬರನ್ನು ಇದೆ ಕೆಲಸಕ್ಕೆ ನಿಮಿಸುವುದು.
  • ಹಿರಿಯ ನಾಗರಿಕರಿಗೆ ಕಡಿಮೆ ಶ್ರಮ ಇರುವ ಕೆಲಸವನ್ನು ನೀಡುವುದು.
  • ನಿರುದ್ಯೋಗ ಸಮಸ್ಯೆ ನಿವಾರಣೆ : ವಾರ್ಷಿಕ ಕನಿಷ್ಠ 100 ದಿನದ ಕೆಲಸ ನೀಡಿ, ವೇತನ ನೀಡುವುದರಿಂದ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹರಿಸಲು ಸಹಕರಿಸುವುದು.
  • ಮಹಿಳಾ ಮತ್ತು ಪುರುಷ ಎಂಬ ಭೇದವಿಲ್ಲದೆ ಸಮಾನ ಕೂಲಿ ನೀಡುವುದು.

ಹೀಗೆ ಅನೇಕ ರೀತಿಯಲ್ಲಿ ಸೌಲಭ್ಯ ಮತ್ತು ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒಳಪಡುವ ಕೆಲಸಗಳು ಯಾವುವು.

ಭಾರತದಲ್ಲಿ ವಾಸಿಸುವ ಬಡ ವರ್ಗದ ಜನರಿಗೆ ವಾರ್ಷಿಕ 100 ದಿನಗಳ ಉದ್ಯೋಗ ನೀಡಿ, ವೇತನ ನೀಡುವ ಮೂಲಕ ಆರ್ಥಿಕ ಸಹಾಯ ಮಾಡುವುದು. ಜೊತೆಗೆ ಕೆಲವು ಮೂಲ ಸೌಕರ್ಯ ಒದಗಿಸುವ ಕೆಲಸಗಳನ್ನು ಮಾಡಬಹುದು.

  1. ಗ್ರಾಮೀಣ ನೈರ್ಮಲ್ಯ ಯೋಜನೆಗಳು.
  2. ಕೃಷಿ ಸಂಬಂದಿಸಿದ ಚಟುವಟಿಕೆಗಳು.
  3. ಜಾಲಾನಯನ ಕಾಮಗಾರಿಗಳು.
  4. ನೀರಾವರಿ ಸೌಲಭ್ಯ ಒದಗಿಸುವ ಕಾರ್ಯಗಳು.
  5. ಜಾನುವಾರು ಅನುಕೂಲ ಆಗುವ ಕೆಲಸಗಳು.
  6. ಮೀನುಗಾರಿಕೆ ಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು.
  7. ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು.
  8. ಅಂಗನವಾಡಿ ಕೇಂದ್ರ ನಿರ್ಮಾಣ ಕಾರ್ಯಗಳು.

ಸರ್ಕಾರಿ ಕಾಮಗಾರಿಗಳು. ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳನ್ನು ಸಹ ಮಾಡಬಹುದು. ಒಟ್ಟಿನಲ್ಲಿ ಗ್ರಾಮೀಣಾಭಿರುದ್ಧಿ ಕಾರ್ಯಗಳು ಮತ್ತು ಸಾಮಾಜಿಕ ಅಭಿವೃದ್ಧಿ ಕೆಲಸಕಾರ್ಯ ಮಾಡಲು ಅವಕಾಶ ಇರುತ್ತದೆ.

NREGA : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

ಭಾರತದ ಗ್ರಾಮೀಣಾಭಿರುದ್ಧಿ ಸಚಿವಾಲಯವು ಗ್ರಾಮೀಣ ಪ್ರದೇಶದ ಜನರಿಗೆ ವಾರ್ಷಿಕ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸುತ್ತದೆ. ಜೊತೆಗೆ ವೇತನವನ್ನು ನೀಡುವ ವ್ಯವಸ್ಥೆ ಇದೆ. ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಮುಖ್ಯ ಗುರಿಯನ್ನು ಹೊಂದಿದೆ. 18 ವರ್ಷಕ್ಕಿಂತ ಮೇಲಿನ ನಾಗರಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

  • ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
  • ಅರ್ಜಿದಾರರು ಅರ್ಜಿಯನ್ನು ಬರೆದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕು.
  • ಅರ್ಜಿ ಜೊತೆಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ಒದಗಿಸಬೇಕು.
  • ವಯಕ್ತಿಕ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್, ಫೋಟೋ ಇತ್ಯಾದಿ.
  • ಬ್ಯಾಂಕ್ ಖಾತೆ ವಿವರವನ್ನು ಇದ್ದರೆ ಸಲ್ಲಿಸಬೇಕು.
  • ನೀವು ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿ ಇದ್ದರೆ, ಅರ್ಜಿ ಸಲ್ಲಿಸಿದ 15 ದಿನದ ಒಳಗೆ ನಿಮಗೆ ಉದ್ಯೋಗ ನೀಡಲಾಗುವುದು.

ಯೋಜನೆ ಮುಖ್ಯ ಗುರಿಯನ್ನು ನೋಡುವುದಾದರೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡುವುದು. ಜೊತೆಗೆ ಜೀವನೋಪಾಯದ ಭದ್ರತೆ ಒದಗಿಸುತ್ತದೆ. ಸಮಾಜದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಗೆ ಮಹತ್ವ ನೀಡುತ್ತದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಕೆಲಸಕ್ಕೆ ಆದ್ಯತೆ ನೀಡುತ್ತದೆ.

ವಿಶೇಷ ಸೂಚನೆ : “tharak7starnews15.com” ವೆಬ್ಸೈಟ್ ನಲ್ಲಿ  ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು  ಪ್ರಕಟಿಸುವುದಿಲ್ಲ.  ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ  ಪ್ರಕಟಿಸಲಾಗುವುದು. ವಂದನೆಗಳು.

Leave a Reply

Your email address will not be published. Required fields are marked *