Labour Card : ಕರ್ನಾಟಕ ಸರ್ಕಾರದ ಕಾರ್ಮಿಕ ಕಾರ್ಡ್ ಯೋಜನೆಯು ಕಾರ್ಮಿಕರ ಅರೋಗ್ಯ, ಸುರಕ್ಷತೆ ಮತ್ತು ಕಲ್ಯಾಣದ ಗುರಿಯನ್ನು ಹೊಂದಿದೆ.
ಕರ್ನಾಟಕ ಸರ್ಕಾರವು ಕಾರ್ಮಿಕ ಕಾರ್ಡ್ ಪಡೆಯಲು ಇ ಪೋರ್ಟಲ್ ರಚಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC)ಯು ವಿಶೇಷವಾಗಿ ಈ ಪೋರ್ಟಲ್ ಅನ್ನು ವಿನ್ಯಾಸ ಮಾಡಿದ್ದು, ಕಾರ್ಮಿಕರ ಅರೋಗ್ಯ ಮತ್ತು ಸುರಕ್ಷತೆ ಹಾಗೂ ಕಲ್ಯಾಣದ ಗುರಿಯನ್ನು ಹೊಂದಿದೆ. ಭಾರತದಲ್ಲಿ ಎರಡು ರೀತಿಯ ಕಾರ್ಮಿಕ ಕಾರ್ಡ್ ಜಾರಿಯಲ್ಲಿದೆ. ಕಟ್ಟಡ ಕಾರ್ಡ್ ಮತ್ತು ಸಾಮಾಜಿಕ ಕಾರ್ಡ್. ಪರವಾನಿಗೆ ಪಡೆದ ಗುತ್ತಿಗೆದಾರರ ಕೈ ಕೆಳಗೆ ಕೆಲಸ ಮಾಡುವ ಕೆಲಸಗಾರರಿಗೆ ಕಟ್ಟಡ ಕಾರ್ಡ್ ನೀಡಲಾಗುವುದು. ಇದರಿಂದ ಎಲ್ಲಾ ಪ್ರಯೋಜನ ಪಡೆಯಬಹುದು. ಕಟ್ಟಡೆತರ(ಕೃಷಿ) ಚಟುವಟಿಕೆ ಕೆಲಸ ಮಾಡುವ ಕೆಲಸಗಾರರಿಗೆ ಸಾಮಾಜಿಕ ಕಾರ್ಡ್ ನೀಡಲಾಗುವುದು. ಇದರಲ್ಲಿ ಅರೋಗ್ಯ ವಿಮೆ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ. ಈ ಲೇಖನದಲ್ಲಿ ನಾವು ಕಾರ್ಮಿಕರ ಇಲಾಖೆ ಲೇಬರ್ ಕಾರ್ಡ್ ಪಡೆಯೋದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು, ಪ್ರಯೋಜನಗಳು ಮತ್ತು ಸಿಗುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ.
Labour Card : ಕಾರ್ಮಿಕ ಕಾರ್ಡ್ ಸಂಪೂರ್ಣ ಮಾಹಿತಿ.

Labour Card : ಕಾರ್ಮಿಕ ಕಾರ್ಡ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (NIC)ಯು ವಿಶೇಷವಾಗಿ ಈ ಪೋರ್ಟಲ್ ಅನ್ನು ವಿನ್ಯಾಸ ಮಾಡಿದ್ದು, ಕಾರ್ಮಿಕರ ಅರೋಗ್ಯ ಮತ್ತು ಸುರಕ್ಷತೆ ಹಾಗೂ ಕಲ್ಯಾಣದ ಗುರಿಯನ್ನು ಹೊಂದಿದೆ.
- ಯೋಜನೆ ಹೆಸರು : ಕಾರ್ಮಿಕರ ಕಾರ್ಡ್ (Labour Card).
- ಉದ್ದೇಶ : ಕಾರ್ಮಿಕರ ಅರೋಗ್ಯ ಮತ್ತು ಸುರಕ್ಷತೆ ಹಾಗೂ ಕಲ್ಯಾಣದ ಗುರಿ.
- ಕಾರ್ಡ್ ನ ವಿಧಗಳು : ಕಟ್ಟಡ ಕಾರ್ಡ್ ಮತ್ತು ಸಾಮಾಜಿಕ ಕಾರ್ಡ್.
- ವಯೋಮಿತಿ : ಕನಿಷ್ಠ 18 ವರ್ಷದಿಂದ ಗರಿಷ್ಠ 60 ವರ್ಷಗಳು.
ಕಾರ್ಮಿಕರ ಸಮಯ ಉಳಿಸುವ ದೃಷ್ಟಿಯಿಂದ ಸರ್ಕಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದೆ. NIC ಸಹಭಾಗೀತ್ವದಲ್ಲಿ ಎಲ್ಲಾ ಸಮಯದಲ್ಲಿಯೂ ಸಹ ಈ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಲೇಬರ್ ಕಾರ್ಡ್ ನಿಂದ ತಮ್ಮ ಕುಟುಂಬ ಮತ್ತು ಮಕ್ಕಳ ವಿದ್ಯಾಭ್ಯಾಸ ಕ್ಕೆ ನೆರವು ಪಡೆಯಬಹುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Labour Card : ಕಾರ್ಮಿಕ ಕಾರ್ಡ್ ಇಂದ ಸಿಗುವ ಸೌಲಭ್ಯಗಳು.
ಲೇಬರ್ ಕಾರ್ಡ್ ನಿಂದ ಹಲವು ಕಾರ್ಮಿಕರು ಅನೇಕ ರೀತಿಯ ಸೌಲಭ್ಯ ಪಡೆಯಲು ಅವಕಾಶ ಇದೆ. ಈ ಕಾರ್ಡ್ ನ ಮುಖ್ಯ ಉದ್ದೇಶ ಕಾರ್ಮಿಕರ ಅರೋಗ್ಯ ಮತ್ತು ಸುರಕ್ಷತೆ ಹಾಗೂ ಕಲ್ಯಾಣದ ಗುರಿ ಆಗಿರುವುದರಿಂದ ಅದಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಹಾಯ ನೀಡಲಾಗುತ್ತದೆ.
- ಕಾರ್ಮಿಕರ ಪಿಂಚಣಿ ಸೌಲಭ್ಯ : ಪ್ರತಿ ತಿಂಗಳು ರೂ.3000 ಪಿಂಚಣಿ ಪಡೆಯಬಹುದು.
- ಉಚಿತ ಮಕ್ಕಳ ಶಿಕ್ಷಣ : ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗಿದೆ. ಒಂದನೇ ತರಗತಿಯಿಂದ ಉನ್ನತ ಶಿಕ್ಷಣ ಪಡೆಯುವವರೆಗೂ ಕನಿಷ್ಠ ರೂ.5000 ದಿಂದ ರೂ.75,000 ದ ವರೆಗೂ ವಿದ್ಯಾರ್ಥಿವೇತನ ಪಡೆಯಲು ಅವಕಾಶ ಇರುತ್ತದೆ.
- ಗೃಹ ಸಾಲ : ಕಾರ್ಮಿಕರ ದುಡಿಮೆ ಆಧಾರದ ಮೇಲೆ ಗೃಹ ಸಾಲವನ್ನು ಸಹ ಪಡೆಯಬಹುದು.
- ಅರೋಗ್ಯ ವಿಮೆ : ಲೇಬರ್ ಕಾರ್ಡ್ ಇರುವ ಕಾರ್ಮಿಕ ತನ್ನ ಮತ್ತು ಕುಟುಂಬದ ಸದಸ್ಯರ ಅನಾರೋಗ್ಯ ಸಂದರ್ಭದಲ್ಲಿ ಅರೋಗ್ಯ ವಿಮೆ ಗರಿಷ್ಠ ರೂ.2 ಲಕ್ಷದ ವರೆಗೆ ಪಡೆಯಲು ನೆರವು ನೀಡಲಾಗಿದೆ.
- ಮಗಳ ಮದುವೆ ವೆಚ್ಚ : ಮಕ್ಕಳ ಮದುವೆ ವೆಚ್ಚ ಸಹಾಯಧನ ರೂ. 60,000 ದ ವರೆಗೂ ಪಡೆಯಬಹುದು.
- ಮನೆ ನಿರ್ಮಾಣಕ್ಕೆ ಸಹಾಯ : ಮನೆ ಕಟ್ಟಲು ಸಹಾಯಧನ ನೀಡಲಾಗುವುದು.
- ಅಪಘಾತ ವಿಮೆ ಸೌಲಭ್ಯ : ಕಾರ್ಮಿಕ ಕಾರ್ಡ್ ಇಂದ ಅಪಘಾತ ವಿಮೆ ಸಿಗುತ್ತದೆ. 2 ಲಕ್ಷ ಸಹಾಯಧನ ನೀಡಲಾಗಿದೆ.
- ತಾಯಿ ಮಗು ಸಹಾಯ ಹಸ್ತ : ಮಹಿಳಾ ಕಾರ್ಮಿಕರಿಗೆ ಮಗು ಜನನದಿಂದ 1 ವರ್ಷದ ಅವಧಿಗೆ, ತಿಂಗಳಿಗೆ ರೂ.500 ರಂತೆ ವಾರ್ಷಿಕ 6000 ಸಹಾಯಧನ ಸಿಗುತ್ತದೆ.
- ಹೆರಿಗೆ ಸಹಾಯಧನ : ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗೆ ರೂ.50,000 ಸಹಾಯ ಧನ ಸಿಗುತ್ತದೆ. ಮೊದಲ ಗಂಡು ಅಥವಾ ಹೆಣ್ಣು ಮಗು.
- ಅಂತ್ಯಕ್ರಿಯೆ ವೆಚ್ಚ : ಕಾರ್ಮಿಕರ ಅಕಾಲಿಕ ಮರಣಕ್ಕೆ ಸಂಬಂದಿಸಿದ ಹಾಗೆ ಅಂತ್ಯಕ್ರಿಯೆ ವೆಚ್ಚ ರೂ.4000 ಪಡೆಯಲು ಅವಕಾಶ ಇದೆ.
- ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು.
ಹೀಗೆ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಇವೆಲ್ಲ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. ಕಾರ್ಮಿಕ ಇಲಾಖೆ ಅಧಿಕೃತ ವೆಬ್ಸೈಟ್ ವಿಳಾಸ ಇಲ್ಲಿ ಕ್ಲಿಕ್ ಮಾಡಿ.
Labour Card : ಕಾರ್ಮಿಕ ಕಾರ್ಡ್ ಪಡೆಯಲು ಬೇಕಾದ ಪ್ರಮುಖ ದಾಖಲೆಗಳು.
ಲೇಬರ್ ಕಾರ್ಡ್ ನಿಂದ ಸಿಗುವ ಸೌಲಭ್ಯ ಪಡೆಯಲು ಮೊದಲು ಲೇಬರ್ ಕಾರ್ಡ್ ಮಾಡಿಸಿಕೊಂಡಿರಬೇಕು. ಕಾರ್ಮಿಕರ ಕಾರ್ಡ್ ಮಾಡಿಸಲು ನಿಮಗೆ ಬೇಕಾದ ಪ್ರಮುಖ ದಾಖಲೆಗಳು ಈ ಕೆಳಗೆ ನೀಡಲಾಗಿದೆ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಬ್ಯಾಂಕ್ ಪಾಸ್ ಬುಕ್ (Bank Passbook).
- ಭಾವಚಿತ್ರಗಳು (Photos).
- ಕಾರ್ಮಿಕರ ಗುರುತಿನ ಚೀಟಿ.
- ಉದ್ಯೋಗ ದೃಡೀಕರಣ ಪತ್ರ.
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್.
- ಪಡಿತರ ಚೀಟಿ (Ration Card).
ಇವೆಲ್ಲಾ ದಾಖಲೆ ಹೊಂದಿರುವ ಯಾವುದೇ ಕಾರ್ಮಿಕರು ಲೇಬರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನೂ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Labour Card : ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.

Labour Card : ಕರ್ನಾಟಕ ಸರ್ಕಾರವು ಕಾರ್ಮಿಕ ಕಾರ್ಡ್ ಪಡೆಯಲು ಇ ಪೋರ್ಟಲ್ ರಚಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC)ಯು ವಿಶೇಷವಾಗಿ ಈ ಪೋರ್ಟಲ್ ಅನ್ನು ವಿನ್ಯಾಸ ಮಾಡಿದ್ದು, ಕಾರ್ಮಿಕರ ಅರೋಗ್ಯ ಮತ್ತು ಸುರಕ್ಷತೆ ಸೌಲಭ್ಯ ಪಡೆಯಬಹುದು.
- ಮೊದಲನೆಯದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ವೆಬ್ಸೈಟ್ ಮುಖ ಪುಟಕ್ಕೆ ಹೋಗುತ್ತೀರಿ.
- ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ New Register ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ Email ID ನಮೂದಿಸಿ.
- ಹಾಗೆ ನೀವು ನಿಮ್ಮ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿ. ನಂತರ ಲಾಗಿನ್ ಮಾಡಿ. ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಮರೆಯಬೇಡಿ.
- ನಂತರ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ ನಿಮ್ಮ ವಯಕ್ತಿಕ ವಿವರ ಭರ್ತಿ ಮಾಡಿ.
- ನಂತರ ವಿದ್ಯಾರ್ಹತೆ ಮತ್ತು ಇತರ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಅರ್ಜಿ ಸಲ್ಲಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಿ.
- ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅಂದರೆ, ಶೈಕ್ಷಣಿಕ ಪತ್ರಗಳು, ವೈಯಕ್ತಿಕ ವಿವರ ದಾಖಲೆ,ಅಂಕಪಟ್ಟಿ ಇತ್ಯಾದಿ ಅಪ್ಲೋಡ್ ಮಾಡಿ.
- ಎಲ್ಲಾ ಸರಿಯಾದ ಮಾಹಿತಿಯನ್ನು ನೀಡಿದ ಬಳಿಕ ಅರ್ಜಿಯನ್ನು Submit ಮಾಡಿ.
ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ಅರ್ಜಿ ಸಲ್ಲಿಸಿದ ನಂತರ ನೀವು ನೀಡಿರುವ Email ID ಮತ್ತು Password ಅನ್ನು ನೆನಪಿಟ್ಟುಕೊಳ್ಳಿ ಅಥವಾ ಯಾವುದಾದರು ಡೈರಿಯಲ್ಲಿ ಬರೆದಿಡಿ. ಏಕೆಂದರೆ ನೀವು ಮತ್ತೆ ಲಾಗಿನ್ ಆಗಲು ನೀವು ಮೊದಲು ನೀಡಿದ Email ID ಮತ್ತು Password ಕಡ್ಡಾಯವಾಗಿ ಬೇಕು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.
FAQs : ಪದೇ ಪದೇ ಕೇಳಿರುವ ಪಶ್ನೆಗಳು.
ಪ್ರಶ್ನೆ ಸಂಖ್ಯೆ 01.ಯಾರು ಕಾರ್ಮಿಕರ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು?.
ಉತ್ತರ : ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷನ್, ಪೇಂಟರ್ಸ್, ನಿರ್ಮಾಣ ಕಾರ್ಮಿಕರರು, ಗುತ್ತಿಗೆದಾದರ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಪ್ರಶ್ನೆ ಸಂಖ್ಯೆ 02.ಕಾರ್ಮಿಕರ ಕಾರ್ಡ್ ಸೌಲಭ್ಯ ಯಾವುವು?.
ಉತ್ತರ : ಕಾರ್ಮಿಕರ ಕಾರ್ಡ್ ಅನೇಕ ಸೌಲಭ್ಯ ನೀಡುತ್ತದೆ. ಅರೋಗ್ಯ ವಿಮೆ, ಅಪಘಾತ ವಿಮೆ, ವೈದ್ಯಕೀಯ ವೆಚ್ಚ ಮತ್ತು ಮಕ್ಕಳ ಶಿಕ್ಷಣಕ್ಕೆ ಸಹಾಯಧನ ಸಿಗುತ್ತದೆ.
ಪ್ರಶ್ನೆ ಸಂಖ್ಯೆ 03. ಕಾರ್ಮಿಕರಿಗೆ ಸಿಗುವ ಪಿಂಚಣಿ ಎಷ್ಟು?.
ಉತ್ತರ : ತಿಂಗಳಿಗೆ ರೂ.3000 ಪಿಂಚಣಿ ಸಿಗುತ್ತದೆ.
ಪ್ರಶ್ನೆ ಸಂಖ್ಯೆ 04. ಕಾರ್ಮಿಕರ ಅಪಘಾತ ವಿಮೆ ಪರಿಹಾರ ಎಷ್ಟು?.
ಉತ್ತರ : ಅಪಘಾತ ಪರಿಹಾರ ಹಣ ರೂ.2 ಲಕ್ಷ ನೀಡಲಾಗುವುದು.
ಪ್ರಶ್ನೆ ಸಂಖ್ಯೆ 05. ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ?.
ಉತ್ತರ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.