KVB recruitment 2025 : ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಭಾರತ ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಮೇ 2025 ಆಗಿರುತ್ತದೆ. ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಬೆಂಗಳೂರು, ಮುಂಬೈ, ದಿಲ್ಲಿ, ವಿಜಯವಾಡ, ಹೈದರಾಬಾದ್, ತಿರುಪತಿ, ಚೈನ್ನೈ, ಸೇಲಂ, ಮಧುರೈ, ಸೇರಿದಂತೆ ವಿವಿಧ ಕಡೆಯಲ್ಲಿಗೆ ನೇಮಕಾತಿ ನಡೆಯಲಿದೆ. ಕೊನೆಯ ದಿನಾಂಕವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು KVB ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಹೀಗೆ ಸಂಪೂರ್ಣ ವಿವರವನ್ನು ನೀಡಲಾಗಿದೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
KVB recruitment 2025 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

KVB recruitment 2025 : ಭಾರತ ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಯುವಕ/ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಇದೆ. ಮೊದಲು ಸಂಪೂರ್ಣ ಮಾಹಿತಿಯನ್ನು ನೋಡೋಣ.
- ಬ್ಯಾಂಕ್ ಹೆಸರು : ಕರೂರ್ ವೈಶ್ಯ ಬ್ಯಾಂಕ್ (Karur vyasya bank).
- ಹುದ್ದೆಯ ಹೆಸರು : ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager).
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30 ಮೇ 2025.
- ಶೈಕ್ಷಣಿಕ ಅರ್ಹತೆ : ಪದವಿ(Degree) ಮತ್ತು ಸ್ನಾತಕೋತ್ತರ ಪದವಿ(Master Degree).
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (Online).
- ವಯೋಮಿತಿ : ಕನಿಷ್ಠ 21 ರಿಂದ 40 ವರ್ಷಗಳು.
- ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಸಂದರ್ಶನ.
- ಹುದ್ದೆಗಳು ಏಲ್ಲಿ ಖಾಲಿ ಇದೆ : ಬೆಂಗಳೂರು.
- ಮುಂಬೈ (Mumbai).
- ದಿಲ್ಲಿ (Delhi).
- ವಿಜಯವಾಡ (Vijayawada).
- ಹೈದರಾಬಾದ್ (Hyderabad).
- ತಿರುಪತಿ(Thirupati).
- ಚೈನ್ನೈ (Chennai).
- ಸೇಲಂ (Selum).
- ಮಧುರೈ (Madurai).
- ವಿಶಾಕಪಟ್ಟಣ( Vishakapatana).
- ಅಹಮದಾಬಾದ್ (Ahamadabad).
- ಕೊಯಂಬತ್ತೂರು (Koyambattur).
ಪ್ರಮುಖವಾಗಿ ಇವೆಲ್ಲಾ ಸ್ಥಳಗಳಲ್ಲಿ ಹುದ್ದೆಗಳು ಖಾಲಿ ಇವೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು 30 ಮೇ 2025 ರ ಒಳಗೆ ಅರ್ಜಿ ಸಲ್ಲಿಸಿ. ಕೊನೆಯಲ್ಲಿ ಎಲ್ಲರೂ ಅರ್ಜಿ ಸಲ್ಲಿಸಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
KVB recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ತಿಳಿಯೋಣ.
- ಶೈಕ್ಷಣಿಕ ಅರ್ಹತೆ (Education Qualification) :
ಯಾವುದೇ ಮಾನ್ಯತೆ ಪಡೆದ ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ(Degree) ಪಡೆದಿರಬೇಕು. ಸ್ನಾತಕೋತ್ತರ ಪದವಿ (Master Degree) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಕೆಲಸದಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ಇರುತ್ತದೆ. ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆ ಮಾತನಾಡಲು ಬರಬೇಕು.
- ವಯೋಮಿತಿ ವಿವರ (Age Qualification) :
KVB ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳ ವಯಸ್ಸಿನ ಮಿತಿಯನ್ನು ತಿಳಿದುಕೊಳ್ಳೋಣ.
- ಕನಿಷ್ಠ 21 ವರ್ಷಗಳು.
- ಗರಿಷ್ಠ 40 ವರ್ಷಗಳು.
ಮೇಲಿನ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಿ. ವಯೋಮಿತಿ ಸಡಿಲಿಕೆ ಬಯಸುವವರು KVB ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರೂರ್ ವೈಶ್ಯ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. KVB ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
KVB recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಪಡಿತರ ಚೀಟಿ (Ration card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks card).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Markscards)
- ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ (Master Degree Certificate).
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
KVB recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಭಾರತ ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ರಿಲೇಷನ್ ಶಿಪ್ ಮ್ಯಾನೇಜರ್ (Sales Relationship Manager) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸರಿಯಾದ ಕ್ರಮವನ್ನು ತಿಳಿದುಕೊಳ್ಳೋಣ.
- ಮೊದಲಿಗೆ KVB ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಅಧಿಕೃತ ವೆಬ್ಸೈಟ್ ವಿಳಾಸ https://www.karurvysyabank.co.in.ಭೇಟಿ ಮಾಡಿ.
- ಮುಖಪುಟ ತೆರೆದ ನಂತರ “Sales Relationship Manager” ಎಂಬ ಲಿಂಕ್ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ, ಪಾಸ್ ವರ್ಡ್ ಸೆಟ್ ಮಾಡಿ.
- ರಿಜಿಸ್ಟರ್ ಆದಮೇಲೆ ಮತ್ತೆ ಲಾಗಿನ್ ಮಾಡಬೇಕು.
- ಅಪ್ಲಿಕೇಶನ್ ಓಪನ್ ಆದಮೇಲೆ ನಿಮ್ಮ ವೈಯಕ್ತಿಕ ವಿವರ ನಮೂದಿಸಿ.
- ನಂತರ ಶೈಕ್ಷಣಿಕ ವಿವರಗಳನ್ನು ಎಂಟ್ರಿ ಮಾಡಬೇಕು.
- ಮುಂದೆ ಕೇಳಿರುವ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನೀಡಿರುವ ಮಾಹಿತಿ ಸರಿಯಾಗಿ ಇದೆಯೇ ಎಂದು ಮತ್ತೊಮ್ಮೆ ಪರಿಶೀಲನೆ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಇದೆ ಎಂದರೇ “ಅರ್ಜಿ ಸಲ್ಲಿಸು” ಎಂಬ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ನಮೂನೆ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಮಾಡುವಾಗ ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಒಂದು ಡೈರಿಯಲ್ಲಿ ಬರೆದುಕೊಳ್ಳಿ. ಏಕೆಂದರೆ ಅವುಗಳು ನೀವು ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.