HPCL RD Recruitment 2025

HPCL RD Recruitment 2025

HPCL RD Recruitment 2025 : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ರಿಫೈನರಿ ವಿಭಾಗದ 103 ಹುದ್ದೆಗಳ ನೇಮಕಾತಿ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ 103 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದ ಹಾಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಮೇ 2025 ಆಗಿರುತ್ತದೆ. ಕೊನೆಯ ದಿನದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ವಿದ್ಯಾಭ್ಯಾಸ ಮುಗಿಸಿಕೊಂಡು ಉದ್ಯೋಗ ಹುಡುಕುತ್ತಿರುವ ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಇಂಜಿನಿಯರಿಂಗ್ ಡಿಪ್ಲೋಮ ದಲ್ಲಿ ಶೇಕಡಾ 60% ಮಾಡಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನಾವು HPCL RD ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹೀಗೆ ಎಲ್ಲಾ ಪ್ರಮುಖವಾದ ಮಾಹಿತಿಯನ್ನು ನೀಡಿದ್ದೇವೆ. ದಯವಿಟ್ಟು ಲೇಖನವನ್ನು ಸಂಪೂರ್ಣ ಓದಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.

HPCL RD Recruitment 2025 ಹುದ್ದೆಗಳ ಸಂಪೂರ್ಣ ವಿವರ ಹೀಗಿದೆ.

HPCL RD Recruitment 2025
HPCL RD Recruitment 2025

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ 103 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಇಂಜಿನಿಯರಿಂಗ್ ಡಿಪ್ಲೋಮ ಮಾಡಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಮೊದಲು ಸಂಪೂರ್ಣ ಮಾಹಿತಿ ತಿಳಿಯೋಣ.

  • ಸಂಸ್ಥೆಯ ಹೆಸರು : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindustan petroleum corporation limited).
  • ವಿಭಾಗದ ಹೆಸರು : ರಿಫೈನರಿ (RD).
  • ಒಟ್ಟು ಹುದ್ದೆಗಳು : 103.
  • ಹುದ್ದೆಗಳ ವಿಂಗಡಣೆ : ಜೂನಿಯರ್ ಎಕ್ಸಿಕ್ಯೂಟಿವ್ ಕೆಮಿಕಲ್ 41 ಹುದ್ದೆಗಳು.
  • ಜೂನಿಯರ್ ಎಕ್ಸಿಕ್ಯೂಟಿವ್ ಮೆಕ್ಯಾನಿಕಲ್ 11 ಹುದ್ದೆ.
  • ಜೂನಿಯರ್ ಎಕ್ಸಿಕ್ಯೂಟಿವ್ ಎಲೆಕ್ಟ್ರಿಕಲ್ 17 ಹುದ್ದೆಗಳು.
  • ಜೂನಿಯರ್ ಎಕ್ಸಿಕ್ಯೂಟಿವ್ ಇನ್ಸ್ಟ್ರಮೆಂಟೇಷನ್ 06 ಹುದ್ದೆ.
  • ಜೂನಿಯರ್ ಎಕ್ಸಿಕ್ಯೂಟಿವ್ ಅಗ್ನಿಶಾಮಕ ಮತ್ತು ಸುರಕ್ಷತೆ 28 ಹುದ್ದೆಗಳು.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 21 ಮೇ 2025.
  • ಶೈಕ್ಷಣಿಕ ಅರ್ಹತೆ : ಇಂಜಿನಿಯರಿಂಗ್ ಡಿಪ್ಲೋಮ.
  • ವಯೋಮಿತಿ : 18 ವರ್ಷದಿಂದ 25 ವರ್ಷಗಳು.
  • ಅರ್ಜಿ ಶುಲ್ಕ : ರೂ.1,180.
  • ವೇತನ ಶ್ರೇಣಿ : ರೂ.30,000 ರಿಂದ 1,20,000.
  • ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (Online).
  • ಆಯ್ಕೆ ವಿಧಾನ : ಕಂಪ್ಯೂಟರ್ ಪರೀಕ್ಷೆ (CBT).
  • ಸಂದರ್ಶನ.
  • ವೈದ್ಯಕೀಯ ಪರೀಕ್ಷೆ.

ಈ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಮೇ 2025 ಆಗಿರುತ್ತದೆ. ಕೊನೆಯ ದಿನದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

HPCL RD Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

HPCL RD Recruitment 2025

HPCL RD Recruitment 2025 ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ 103 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆಯನ್ನು ನೋಡೋಣ.

  • ಶೈಕ್ಷಣಿಕ ಅರ್ಹತೆ (Education Qualification) :
  1. ಇಂಜಿನಿಯರಿಂಗ್ ಡಿಪ್ಲೋಮ ಇನ್ ಮೆಕ್ಯಾನಿಕಲ್.
  2. ಇಂಜಿನಿಯರಿಂಗ್ ಡಿಪ್ಲೋಮ ಇನ್ ಎಲೆಕ್ಟ್ರಿಕಲ್.
  3. ಇಂಜಿನಿಯರಿಂಗ್ ಡಿಪ್ಲೋಮ ಇನ್ ಕೆಮಿಕಲ್.
  4. ಇಂಜಿನಿಯರಿಂಗ್ ಡಿಪ್ಲೋಮ ಇನ್ ಇನ್ಸ್ಟ್ರಮೆಂಟೇಷನ್.
  5. ಬೆಂಕಿ ಅವಘಡ ಮತ್ತು ಸುರಕ್ಷತೆ ವಿಷಯದಲ್ಲಿ ಡಿಪ್ಲೋಮ ಪದವಿ ಪಡೆದಿರಬೇಕು. ಪದವಿಯನ್ನು ಶೇಕಡಾ 60% ಅಂಕಗಳೊಂದಿಗೆ ಉತ್ತಿರ್ಣವಾಗಿರಬೇಕು.
  • ವಯೋಮಿತಿ ವಿವರ(Age Qualification) :

HPCL ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯಸ್ಸಿನ ಮಿತಿಯನ್ನು ನೋಡೋಣ.

  1. ಕನಿಷ್ಠ 18 ವರ್ಷಗಳು.
  2. ಗರಿಷ್ಠ 25 ವರ್ಷಗಳು.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. HPCL ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

HPCL RD Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.

  • ಆಧಾರ್ ಕಾರ್ಡ್ (Aadhar card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಜಾತಿ ಪ್ರಮಾಣ ಪತ್ರ (Caste Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC markscard).
  • ಪಿಯುಸಿ ಅಂಕಪಟ್ಟಿ (PUC Marks card).
  • ಪದವಿ ಪ್ರಮಾಣ ಪತ್ರ (Degree Certificate).
  • ಇಂಜಿನಿಯರಿಂಗ್ ಡಿಪ್ಲೋಮ ಸರ್ಟಿಫಿಕೇಟ್ (Engineering Diploma Certificate).

ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

HPCL RD Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

HPCL RD Recruitment 2025
HPCL RD Recruitment 2025

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ 103 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

  • ಮೊದಲಿಗೆ HPCL ನ ಅಧಿಕೃತ ವೆಬ್ಸೈಟ್ ಭೇಟಿ ನೀಡಬೇಕು.
  • ಮುಖಪುಟ ತೆರೆದ ನಂತರ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು.
  • ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಹಾಕಬೇಕು.
  • ಮೊಬೈಲ್ ನಂಬರ್ ಗೆ ಬರುವ OTP ಹಾಕಿ ಪಾಸ್ ವರ್ಡ್ ಸೆಟ್ ಮಾಡಬೇಕು.
  • ರಿಜಿಸ್ಟರ್ ಆದಮೇಲೆ ಮತ್ತೊಮ್ಮೆ ಲಾಗಿನ್ ಮಾಡಿಕೊಳ್ಳಿ.
  • ಲಾಗಿನ್ ಆದಮೇಲೆ “HPCL RD Recruitment 2025” ಎಂಬ ಲಾಂಕ್ ಮೇಲೆ ಕ್ಲಿಕ್ ಮಾಡಿ.
  • ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಿ.
  • ನಂತರ ನಿಮ್ಮ ಶೈಕ್ಷಣಿಕ ವಿವರವನ್ನು ನಮೂದಿಸಿ.
  • ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
  • ಆಮೇಲೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.ನಂತರ ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಮತ್ತೊಮ್ಮೆ ನೀಡಿರುವ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಿ.
  • ಎಲ್ಲಾ ಮಾಹಿತಿ ಸರಿ ಇದ್ದರೆ ಅರ್ಜಿ ಸಲ್ಲಿಸುವ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.

ಗಮನಿಸಿ, ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಮರೆಯಬೇಡಿ. ಯಾವುದಾದರು ಒಂದು ಡೈರಿಯಲ್ಲಿ ಬರೆದುಕೊಳ್ಳಿ. ಏಕೆಂದರೆ ಮುಂದೆ ಪರೀಕ್ಷೆ ಬರೆಯಲು, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು, ಲಾಗಿನ್ ಆಗುವಾಗ ಇಮೇಲ್ ಮತ್ತು ಪಾಸ್ ವರ್ಡ್ ಬೇಕಾಗುತ್ತದೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *