E-Shram Card 2025 : ಇ-ಶ್ರಮ ಕಾರ್ಡ್ ಪಡೆಯೋದು ಹೇಗೆ?.

E-Shram Card 2025

E-Shram Card 2025 : ಇ-ಶ್ರಮ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಹೊಂದಿದೆ. ಜೊತಗೆ ಪಿಂಚಣಿ ಸೌಲಭ್ಯ ಹೊಂದಿದೆ.

ಭಾರತ ಸರ್ಕಾರ ಇ-ಶ್ರಮ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಆಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ. ಪಿಂಚಣಿ, ಮರಣ ವಿಮೆ ಮತ್ತು ಅಂಗ ವೈಖಲ್ಯ ಉಂಟಾದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಪಡೆಯಬಹುದು. ಹಾಗೆ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅನೇಕ ರೀತಿಯ ಸೌಲಭ್ಯವನ್ನು ಸಹ ಪಡೆಯಬಹುದು. ಕನಿಷ್ಠ 18 ವರ್ಷದಿಂದ 59 ವರ್ಷದ ಒಳಗಿನ ಎಲ್ಲಾ ಕಾರ್ಮಿಕರು ಈ ಕಾರ್ಡ್ ಪಡೆಯಲು ಅವಕಾಶ ಇದೆ. ನಾವು ಈ ಲೇಖನದಲ್ಲಿ ಇ-ಶ್ರಮ ಕಾರ್ಡ್ ಎಂದರೇನು?,ಅದರ ಪ್ರಯೋಜನಗಳು, ಅರ್ಜಿ ಸಲ್ಲಿಸುವ ವಿಧಾನ, ಇಲ್ಲಿ, ಹೇಗೆ?, ಬೇಕಾಗುವ ದಾಖಲೆಗಳು, ಅಸಂಘಟಿತ ವಲಯದ ಕಾರ್ಮಿಕರು ಯಾರು, ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

E-Shram Card 2025 : ಇ-ಶ್ರಮ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

E-Shram Card 2025
E-Shram Card 2025

E-Shram Card 2025 : ಇ-ಶ್ರಮ ಕಾರ್ಡ್ ನ ಬಗ್ಗೆ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಭಾರತ ಸರ್ಕಾರದ ಇ-ಶ್ರಮ ಯೋಜನೆಯು ಅನೇಕ ಸೌಲಭ್ಯವನ್ನು ನೀಡುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿ, ಸುರಕ್ಷತೆಯನ್ನು ನೀಡುತ್ತದೆ.

  • ಯೋಜನೆ ಹೆಸರು : ಇ-ಶ್ರಮ ಕಾರ್ಡ್(E-Shram Card).
  • ಅರ್ಜಿದಾರರು : ಅಸಂಘಟಿತ ವಲಯದ ಕಾರ್ಮಿಕರು.
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
  • ಅರ್ಜಿದಾರರ ವಯಸ್ಸು : ಕನಿಷ್ಠ 18 ವರ್ಷದಿಂದ ಗರಿಷ್ಠ 59 ವರ್ಷಗಳು.
  • ಯಾರು ಈ ಕಾರ್ಡ್ ಪಡೆಯಲು ಸಾಧ್ಯವಿಲ್ಲ :
  • ನೌಕರರ ಭವಿಷ್ಯ ನಿಧಿ (EPFO) ಇರುವವರು.
  • ನೌಕರರ ವಿಮಾ ನಿಧಿ (ESIC) ಹೊಂದಿರುವವರು.
  • ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಇರುವವರು.
  • ಇ-ಶ್ರಮ ಕಾರ್ಡ್ ಸೌಲಭ್ಯಗಳು :
  • 60 ವರ್ಷದ ನಂತರ ತಿಂಗಳಿಗೆ ರೂ.3000 ಪಿಂಚಣಿ.
  • ಮರಣ ವಿಮೆ ರೂ.2 ಲಕ್ಷ.
  • ಆರ್ಥಿಕ ನೆರವು ರೂ.1 ಲಕ್ಷ.
  • ಕಡ್ಡಾಯವಾಗಿ ಬೇಕಾದ ದಾಖಲೆಗಳು :
  • ಮೊಬೈಲ್ ನಂಬರ್ (Mobile Number).
  • ಆಧಾರ್ ಕಾರ್ಡ್ (Aadhar Card).

ಕಾರ್ಮಿಕರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಈ ಯೋಜನೆಯ ವಿವಿಧ ಸೌಲಭ್ಯಗಳ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

E-Shram Card 2025 : ಇ-ಶ್ರಮ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು.

E-Shram Card 2025 ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿ, ಸುರಕ್ಷತೆಯನ್ನು ನೀಡುವ ಇ-ಶ್ರಮ ಕಾರ್ಡ್ ಪಡೆಯಲು ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿಯೋಣ.

  1. ಕಾರ್ಮಿಕರ ಆಧಾರ್ ಕಾರ್ಡ್ (Aadhar Card).
  2. ಬ್ಯಾಂಕ್ ಪಾಸ್ ಬುಕ್ (Bank Passbook).
  3. ಮೊಬೈಲ್ ನಂಬರ್ (Mobile Number).
  4. ಕಡ್ಡಾಯವಾಗಿ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
  5. ಸ್ವಯಂ ದೃಡೀಕರಣ ಪತ್ರ.
  6. ಆದಾಯ ದೃಡೀಕರಣ ಪತ್ರ (Income Certificate).

ಮೇಲಿನ ದಾಖಲೆಗಳನ್ನು ಹೊಂದಿರುವ ಕಾರ್ಮಿಕರು ಈ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ. ಅಧಿಕೃತ ವೆಬ್ಸೈಟ್ ವಿಳಾಸ 

E-Shram Card 2025 : ಇ-ಶ್ರಮ ಕಾರ್ಡ್ ನ ಪ್ರಯೋಜನಗಳು.

E-Shram Card 2025
E-Shram Card 2025

 

E-Shram Card 2025 : ಇ-ಶ್ರಮ ಕಾರ್ಡ್ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ರೀತಿಯ ಸೌಲಭ್ಯ ಲಭ್ಯವಿದೆ. ಇದರ ಮುಖ್ಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಆಗಿದೆ. ಮುಖ್ಯ ಪ್ರಯೋಜನಗಳನ್ನು ನೋಡುವುದಾದರೆ,

  • 60 ವರ್ಷ ತುಂಬಿದ ನಂತರ ತಿಂಗಳಿಗೆ ರೂ.3000 ಪಿಂಚಣಿ ಸಿಗುತ್ತದೆ.
  • ಕೆಲಸಗಾರರು ಕೆಲಸದ ಸಂದರ್ಭದಲ್ಲಿ ಅಂಗ ವೈಖಲ್ಯ ಹೊಂದಿದರೆ ರೂ.1.00.000 ಆರ್ಥಿಕ ನೆರವು ನೀಡಲಾಗುವುದು.
  • ಕೆಲಸಗಾರರು ಕೆಲಸದ ಸಂದರ್ಭದಲ್ಲಿ ಮರಣ ಹೊಂದಿದರೆ ರೂ.2.00.000 ಮರಣ ವಿಮೆ ಸಿಗುತ್ತದೆ.
  • ಇ-ಶ್ರಮ ಕಾರ್ಡ್ ಹೊಂದಿರುವ ವ್ಯಕ್ತಿ ಮರಣ ಹೊಂದಿದ ಸಮಯದಲ್ಲಿ ಸೌಲಭ್ಯವನ್ನು ಅವನ ಅಥವಾ ಅವಳ ಸಂಗಾತಿಗೆ ನೀಡಲಾಗುವುದು.
  • ಫಲಾನುಭವಿಗಳಿಗೆ ಭಾರತ ದೇಶದಾದ್ಯಂತ ಮಾನ್ಯತೆ ಹೊಂದಿದ UAN ಸಂಖ್ಯೆಯನ್ನು ಸಹ ಪಡೆಯಬಹುದು.

E-Shram Card 2025 : ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.

ಭಾರತ ಸರ್ಕಾರ ಇ-ಶ್ರಮ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಆಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ. ಈ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಕ್ರಮವನ್ನು ನೋಡೋಣ.

  1. ಮೊದಲಿಗೆ ಇ-ಶ್ರಮ(E-Shram) ಪೋರ್ಟಲ್ ಗೆ ಹೋಗಬೇಕು.
  2. ಮುಖಪುಟ ತೆರೆದ ನಂತರ ಸ್ವಯಂ ನೋಂದಣಿ ಪುಟಕ್ಕೆ ಹೋಗಿ. ಅಲ್ಲಿ ಕ್ಲಿಕ್ ಮಾಡಿ.
  3. ಅಪ್ಲಿಕೇಶನ್ ಓಪನ್ ಆದ ಮೇಲೆ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಿ.
  4. ಮೊಬೈಲ್ ನಂಬರ್ ಗೆ ಬರುವ OTP ಯನ್ನು ನಮೂದಿಸಿ, ಅಕೌಂಟ್ ಕ್ರಿಯೇಟ್ ಮಾಡಿ.
  5. ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್ ಬಳಸಬೇಕು.
  6. ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವಯಕ್ತಿಕ ವಿವರಗಳನ್ನು ನಮೂದಿಸಿ.(ಹೆಸರು, ವಿಳಾಸ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಇತ್ಯಾದಿ).
  7. ನಂತರ ಶೈಕ್ಷಣಿಕ ಮಾಹಿತಿಯನ್ನು ಎಂಟ್ರಿ ಮಾಡಿ.
  8. ಆಮೇಲೆ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.
  9. ಬ್ಯಾಂಕ್ ಅಕೌಂಟ್ ವಿವರಗಳನ್ನು ನಮೂದಿಸಿ.
  10. ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
  11. ಕೊನೆಗೆ ಮತ್ತೊಮ್ಮೆ ಅಪ್ಲಿಕೇಶನ್ ನಲ್ಲಿ ನೀಡಿರುವ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಂಡು submit ಬಟನ್ ಅನ್ನು ಕ್ಲಿಕ್ ಮಾಡಿ.
  12. ಅರ್ಜಿ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಸೆಂಟರ್ ಗೆ ಭೇಟಿ ನೀಡಬಹುದು.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

FAQ ಪದೇ ಪದೇ ಕೇಳಲಾದ ಪ್ರಶ್ನೆಗಳು.

ಪ್ರಶ್ನೆ ಸಂಖ್ಯೆ 01. ಇ-ಶ್ರಮ(E-Shram) ಕಾರ್ಡ್ ಎಂದರೇನು?.

ಉತ್ತರ : ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವ ಒಂದು ಕಾರ್ಡ್ ಆಗಿದೆ.

ಪ್ರಶ್ನೆ ಸಂಖ್ಯೆ 02. ಯಾವ ಸರ್ಕಾರದಿಂದ ಈ ಯೋಜನೆಯ ಸೌಲಭ್ಯ ಪಡೆಯಬಹುದು?.

ಉತ್ತರ : ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಭಾರತ ಸರ್ಕಾರದಿಂದ ಈ ಸೌಲಭ್ಯ ಪಡೆಯಬಹುದು.

ಪ್ರಶ್ನೆ ಸಂಖ್ಯೆ 03. ಯಾರು ಇ-ಶ್ರಮ ಕಾರ್ಡ್ ಪಡೆಯಲು ಅರ್ಹರು?.

ಉತ್ತರ : ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಕಾರ್ಡ್ ಪಡೆಯಲು ಅವಕಾಶ ಇದೆ.

ಪ್ರಶ್ನೆ ಸಂಖ್ಯೆ 04. ಇ-ಶ್ರಮ(E-Shram) ಯೋಜನೆಯಿಂದ ಎಷ್ಟು ಪಿಂಚಣಿ ಪಡೆಯಬಹುದು?.

ಉತ್ತರ : ಕಾರ್ಮಿಕರಿಗೆ 60 ವರ್ಷ ಆದ ಬಳಿಕ ತಿಂಗಳಿಗೆ ರೂ.3000 ಪಿಂಚಣಿ ಪಡೆಯಲು ಅವಕಾಶ ಇರುತ್ತದೆ.

ಪ್ರಶ್ನೆ ಸಂಖ್ಯೆ 05. ಯಾರು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿಲ್ಲ?.

ಉತ್ತರ : ನೌಕರರ ಭವಿಷ್ಯ ನಿಧಿ (EPFO) ಇರುವವರು,ನೌಕರರ ವಿಮಾ ನಿಧಿ (ESIC) ಹೊಂದಿರುವವರು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಇರುವವರು ಈ ಸೌಲಭ್ಯ ಪಡೆಯುವಂತಿಲ್ಲ.

 

 

 

Leave a Reply

Your email address will not be published. Required fields are marked *