CCI Recruitment 2025 ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 147 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತದಲ್ಲಿರುವ ಅನೇಕ ಶಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI)ನಲ್ಲಿ 147 ಜೂನಿಯರ್ ಕಾಮರ್ಶಿಯಲ್ ಎಕ್ಸಿಕ್ಯೂಟ್ ಮತ್ತು ಮ್ಯಾನೇಜಜ್ಮೆಂಟ್ ಟ್ರೈನಿ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಎಲ್ಲರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ವೆಬ್ಸೈಟ್ ಬ್ಯುಸಿ ಹಾಗೂ ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ಕೊನೆಯ ದಿನದ ಒಳಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು CCI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಇಲ್ಲಿ ಮತ್ತು ಬೇಕಾದ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
CCI Recruitment 2025 ಹುದ್ದೆಗಳ ಸಂಪೂರ್ಣ ಮಾಹಿತಿ.

ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI)ನಲ್ಲಿ 147 ಜೂನಿಯರ್ ಕಾಮರ್ಶಿಯಲ್ ಎಕ್ಸಿಕ್ಯೂಟ್ ಮತ್ತು ಮ್ಯಾನೇಜಜ್ಮೆಂಟ್ ಟ್ರೈನಿ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಪದವಿ ಮುಗಿಸಿರುವ ಪದವೀಧರರು ಅರ್ಜಿ ಸಲ್ಲಿಸಬಹುದು.
- ಸಂಸ್ಥೆಯ ಹೆಸರು : ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI).
- ಒಟ್ಟು ಹುದ್ದೆಗಳು : 147.
- ಹುದ್ದೆಗಳ ವಿಂಗಡಣೆ : ಮಾರ್ಕೆಟಿಂಗ್ ಟ್ರೈನಿ 10 ಹುದ್ದೆಗಳು.
- ಅಕೌಂಟ್ ಟ್ರೈನಿ 10 ಹುದ್ದೆಗಳು.
- ಜೂನಿಯರ್ ವಾಣಿಜ್ಯ ಕಾರ್ಯ ನಿರ್ವಾಹಕ 125 ಹುದ್ದೆಗಳು.
- ಜೂನಿಯರ್ ಅಸಿಸ್ಟೆಂಟ್ 02 ಹುದ್ದೆ.
- ಅರ್ಜಿ ಸಲ್ಲಿಕೆ ಪ್ರಾರಂಭ : 09/05/2025.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 24/05/2025.
- ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಹಾಗೂ ews ರೂ.1500.
- SC, ST, Pwd ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕ ಪಾವತಿಸಬೇಕು.
- ಪಾವತಿ ವಿಧಾನ : ಆನ್ಲೈನ್ (Online).
- ವಯೋಮಿತಿ : 18 ರಿಂದ 30 ವರ್ಷಗಳು.
- ಶೈಕ್ಷಣಿಕ ಅರ್ಹತೆ : ಮಾರ್ಕೆಟಿಂಗ್ ಟ್ರೈನಿ ಹುದ್ದೆಗಳಿಗೆ ಕೃಷಿ ವಿಷಯದಲ್ಲಿ ಎಂಬಿಎ ಪದವಿ.
- ಅಕೌಂಟ್ ಟ್ರೈನಿ : CA ಅಥವಾ CMA.
- ಜೂನಿಯರ್ ವಾಣಿಜ್ಯ ಕಾರ್ಯ ನಿರ್ವಾಹಕ : ಬಿ.ಎಸ್ಸಿ ಪದವಿ.
- ಜೂನಿಯರ್ ಅಸಿಸ್ಟೆಂಟ್ : ಡಿಪ್ಲೋಮ ಇನ್ ಎಲೆಕ್ಟ್ರಿಕಲ್.
ಈ ಮೇಲಿನ ಎಲ್ಲಾ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
CCI Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI)ನಲ್ಲಿ 147 ಜೂನಿಯರ್ ಕಾಮರ್ಶಿಯಲ್ ಎಕ್ಸಿಕ್ಯೂಟ್ ಮತ್ತು ಮ್ಯಾನೇಜಜ್ಮೆಂಟ್ ಟ್ರೈನಿ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ನೋಡೋಣ.
ಶೈಕ್ಷಣಿಕ ಅರ್ಹತೆ (Education Qualification) :
ಯಾವುದೇ ಒಂದು ಉನ್ನತ ಹುದ್ದೆಯನ್ನು ಪಡೆಯಬೇಕಾದರೆ ಉತ್ತಮ ಶಿಕ್ಷಣದ ಅವಶ್ಯಕತೆ ಇರುತ್ತದೆ. ಉನ್ನತ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಉತ್ತಮ ಕೆಲಸ ಪಡೆಯಬಹುದು. ಈ ಹುದ್ದೆಗಳಿಗೆ ವಿದ್ಯಾರ್ಹತೆ ವಿವರಗಳನ್ನು ನೋಡುವುದಾದರೆ,
- ಮಾರ್ಕೆಟಿಂಗ್ ಟ್ರೈನಿ ಹುದ್ದೆಗಳಿಗೆ ಕೃಷಿ ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆದಿರಬೇಕು.
- ಅಕೌಂಟ್ ಟ್ರೈನಿ ಹುದ್ದೆಗೆ ಸಿಎ(CA) ಅಥವಾ ಎಂಸಿಎ(CMA) ಪದವಿಯನ್ನು ಉನ್ನತ ಮಟ್ಟದಲ್ಲಿ ಪಡೆದಿರಬೇಕು.
- ಜೂನಿಯರ್ ವಾಣಿಜ್ಯ ಕಾರ್ಯ ನಿರ್ವಾಹಕ ಹುದ್ದೆಗಳಿಗೆ ಕೃಷಿ ವಿಷಯಕ್ಕೆ ಸಂಬಂದಿಸಿದಂತೆ ಬಿ.ಎಸ್ಸಿ ಪದವಿಯನ್ನೂ ಶೇಕಡಾ 50% ಅಂಕಗಳೊಂದಿಗೆ ಪಾಸಾಗಿರಬೇಕು.
- ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ ಪದವಿ ಪಡೆದಿರಬೇಕು.
ಇವೆಲ್ಲಾ ಶೈಕ್ಷಣಿಕ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ ವಿವರ (Age Qualification) :
- ಕನಿಷ್ಠ ವಯಸ್ಸು 18 ವರ್ಷಗಳು.
- ಗರಿಷ್ಠ ವಯಸ್ಸು 30 ವರ್ಷಗಳು.
ವಯೋಮಿತಿ ಸಡಿಲಿಕೆ ಪಡೆಯಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ ನೋಟಿಫಿಕೇಟಿನ್ ಅನ್ನು ಓದಿಕೊಳ್ಳಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. CCI ನ ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ. CCI ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
CCI Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
CCI Recruitment 2025 : ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI)ನಲ್ಲಿ 147 ಜೂನಿಯರ್ ಕಾಮರ್ಶಿಯಲ್ ಎಕ್ಸಿಕ್ಯೂಟ್ ಮತ್ತು ಮ್ಯಾನೇಜಜ್ಮೆಂಟ್ ಟ್ರೈನಿ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ಪ್ರಮಾಣ ಪತ್ರ (Income Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks Card).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Markscard).
- ಡಿಪ್ಲೋಮ ಸರ್ಟಿಫಿಕೇಟ್(Diploma Certificate).
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
CCI Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

CCI Recruitment 2025 : ಭಾರತದಲ್ಲಿರುವ ಅನೇಕ ಶಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (CCI)ನಲ್ಲಿ 147 ಜೂನಿಯರ್ ಕಾಮರ್ಶಿಯಲ್ ಎಕ್ಸಿಕ್ಯೂಟ್ ಮತ್ತು ಮ್ಯಾನೇಜಜ್ಮೆಂಟ್ ಟ್ರೈನಿ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ CCI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಮುಖಪುಟ ತೆರೆದ ನಂತರ “CCI Recruitment 2025” ಎಂಬ ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿ.
- ಮೊಬೈಲ್ ನಂಬರ್ ಗೆ OTP ಬರುತ್ತದೆ. ಅದನ್ನು ನಮೂದಿಸಿ ರಿಜಿಸ್ಟರ್ ಆಗಬೇಕು.
- ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಬೇಕು.
- ರಿಜಿಸ್ಟರ್ ಮಾಡುವಾಗ ನೀಡಿರುವ ಇಮೇಲ್ ಮತ್ತು ಪಾಸ್ ವರ್ಡ್ ಹಾಕಬೇಕು.
- ಲಾಗಿನ್ ಆದಮೇಲೆ ಅಪ್ಲಿಕೇಶನ್ ಓಪನ್ ಆಗುತ್ತದೆ.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ.
- ನಂತರ ನಿಮ್ಮ ಶೈಕ್ಷಣಿಕ ವಿವರವನ್ನು ಎಂಟ್ರಿ ಮಾಡಬೇಕು.
- ಆಮೇಲೆ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಂತರ ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಆಮೇಲೆ ನೀವು ನಮೂದಿಸಿ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
- ನೀಡಿರುವ ಮಾಹಿತಿ ಸರಿಯಾಗಿ ಇದ್ದರೆ, ಅರ್ಜಿ ಸಲ್ಲಿಸುವ ಎಂಬ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
ಗಮನಿಸಿ, ನೀವು ರಿಜಿಸ್ಟರ್ ಮಾಡುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದೆ ಪರೀಕ್ಷೆ ಬರೆಯುವಾಗ ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಬೇಕಾಗುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.