Azim Premji Scholarship 2025-26 : ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ 2.5 ಲಕ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು 18 ರಾಜ್ಯಗಳಲ್ಲಿನ ಹೆಣ್ಣು ಮಕ್ಕಳಿಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಕರೆಯಲಾಗಿದೆ. ಕಳೆದ ವರ್ಷ ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಹೆಣ್ಣುಮಕ್ಕಳಿಗೆ ಸ್ಕಾಲರ್ಷಿಪ್ ನೀಡಲಾಗಿತ್ತು. ಆದರೇ ಈ ವರ್ಷ ಬೇರೆ ರಾಜ್ಯದವರಿಗೂ ಸಹ ಆರ್ಥಿಕ ಸಹಾಯ ನೀಡಲು ತೀರ್ಮಾನಿಸಿ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಯಾದ ಅನುರಾಗ್ ಬೆಹರ್ ಮಾಹಿತಿಯನ್ನು ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮುಗಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಯುತ್ತಿರುವ ಹೆಣ್ಣು ಮಕ್ಕಳು ಈ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು, ಅರ್ಹತೆ, ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
Azim Premji Scholarship 2025-26 : ಸಂಪೂರ್ಣ ಮಾಹಿತಿ ಇಲ್ಲಿದೆ.

Azim Premji Scholarship 2025-26 : ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ 2.5 ಲಕ್ಷ ವಿದ್ಯಾರ್ಥಿನಿಯರಿಗೆ ಸಿಗುವ ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
- ಸಂಸ್ಥೆಯ ಹೆಸರು : ಅಜೀಮ್ ಪ್ರೇಮ್ ಜಿ ಫೌಂಡೇಶನ್(Azim Premji Foundation).
- ಸೌಲಭ್ಯ : ವಿದ್ಯಾರ್ಥಿವೇತನ(Scholarship).
- ಅರ್ಹತೆ : ಎಸ್.ಎಸ್.ಎಲ್.ಸಿ ಉತ್ತಿರ್ಣ ಆಗಿರಬೇಕು.
- ಪಿಯುಸಿ ಪಾಸಾಗಿರಬೇಕು.
- ವರ್ಷ : 2025-26.
- ವಾರ್ಷಿಕ : 30,000 ನೀಡಲಾಗುವುದು.
ಉನ್ನತ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರು ಎಂದು ಸಂಸ್ಥೆಯ ಸಿಇಓ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು Azim Premji ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.
ಪ್ರತಿ ವರ್ಷ ಸುಮಾರು 750 ಕೋಟಿಯಂತೆ ಮೂರು ವರ್ಷಗಳಿಗೆ ಸರಿಯಾಗಿ ಹಣವನ್ನು ಮುಂಚಿತವಾಗಿ ತೆಗೆದಿಡಲಾಗಿದೆ. ಮೂರು ವರ್ಷಕ್ಕೆ 2,250 ಕೋಟಿ ಮೀಸಲೀಡಲಾಗಿದೆ. ಪ್ರತಿ ಹೆಣ್ಣು ಮಗುವಿಗೆ ಅವರ ವಿದ್ಯಾಭ್ಯಾಸ ಮುಗಿಯುವ ವರೆಗೆ ವಾರ್ಷಿಕ ರೂ.30,000 ನೀಡಲಾಗುವುದು. ಈ ಹಣವನ್ನು ಫಲನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದು ಒಂದು ಸಂಸ್ಥೆಯ ದೃಢ ನಿರ್ಧಾರವಾಗಿದೆ. ಸಂಸ್ಥೆಯ ಮಹತ್ವದ ಕಾರ್ಯ ಇದಾಗಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Azim Premji Scholarship 2025-26 ಪ್ರಯೋಜನಗಳು.
Azim Premji Scholarship 2025-26 : ಹೆಣ್ಣು ಮಕ್ಕಳಿಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಕರೆಯಲಾಗಿದೆ. ಆಸಕ್ತಿ ಇರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
- ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೊತ್ಸಹ ನೀಡುವುದು :
ಹೆಣ್ಣುಮಕ್ಕಳು ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದುವರಿಯಲು ಉತ್ತಮ ಶಿಕ್ಷಣ ಮುಖ್ಯ. ಹೀಗಾಗಿ ಹೆಣ್ಣುಮಕ್ಕಳನ್ನು ವಿದ್ಯಾವಂತರಾಗಿ ಮಾಡುವುದು ನಮ್ಮ ಕರ್ತವ್ಯ. ಇದಕ್ಕಾಗಿಯೇ ಆರ್ಥಿಕ ಸಹಾಯ ನೀಡಿ, ಪ್ರೋತ್ಸಾಹ ಮಾಡುವುದು ಬಹಳ ಮುಖ್ಯ. ಹಾಗಾಗಿ ಅಜಿಮ್ ಪ್ರೇಮ್ ಜಿ ಸಂಸ್ಥೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ.
- ಉನ್ನತ ಶಿಕ್ಷಣಕ್ಕೆ ಸಹಾಯ ನೀಡುವುದು : ಸಮಾಜದಲ್ಲಿ ಅನೇಕ ಜನ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲಿ ಬಿಡಲು ಮುಖ್ಯ ಕಾರಣ ಬಡತನ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಅಜಿಮ್ ಪ್ರೇಮ್ ಜಿ ಫೌಂಡೇಶನ್ ವಿದ್ಯಾರ್ಥಿವೇತನ ನೀಡಲು ನಿರ್ಧಾರ ಕೈಗೊಂಡಿದೆ. ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡಬಾರದು. ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಈ ಸಂಸ್ಥೆಯ ಗುರಿಯಾಗಿದೆ.
- ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆದ್ಯತೆ : ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ನಗರ ಪ್ರದೇಶಕ್ಕೆ ಬಂದು ಉತ್ತಮ ಶಿಕ್ಷಣ ಪಡೆಯಲು ಬಹಳ ಕಷ್ಟ. ಹಾಗಾಗಿ ಅವರಿಗೆ ಬೇಕಾಗುವ ಮೂಲ ಸೌಕರ್ಯ ಒದಗಿಸಿದರೆ, ಅವರು ನಗರ ಪ್ರದೇಶಕ್ಕೆ ಬಂದು ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಅವರಿಗೆ ಬೇಕಾಗುವ ಬಸ್ಸಿನ ವೆಚ್ಚ, ಮಧ್ಯಾಹ್ನ ಊಟ, ಪುಸ್ತಕ, ಬಟ್ಟೆ, ಹೀಗೆ ಅಗತ್ಯ ಸೌಕರ್ಯ ಮಾಡಿಕೊಡುವ ಸಲುವಾಗಿ ವಿದ್ಯಾರ್ಥಿವೇತನ ವ್ಯವಸ್ಥೆಯನ್ನು ಸಂಸ್ಥೆಯ ಕೈಗೊಂಡಿದೆ.
- ಸಾಮಾಜಿಕ ಮತ್ತು ಆರ್ಥಿಕ ಅಡೆತಡೆ ನಿವಾರಿಸುವುದು :
Azim Premji Scholarship 2025-26 : ಭಾರತ ದೇಶದಲ್ಲಿ ಅನೇಕ ಜನ ಹೆಣ್ಣುಮಕ್ಕಳು ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ಅವರು ಸ್ವಾವಲಂಬನೆ ಸಾಧಿಸಲು ಉನ್ನತ ಶಿಕ್ಷಣ ಬಹಳ ಮುಖ್ಯ. ಶಿಕ್ಷಣವನ್ನು ಪಡೆಯಲು ಆರ್ಥಿಕ ನೆರವು ಬೇಕಾಗುತ್ತದೆ. ಇದಕ್ಕಾಗಿ ಅಜಿಮ್ ಫೌಂಡೇಶನ್ ಶ್ರಮಿಸುತ್ತಿದೆ. ವಾರ್ಷಿಕ ಸುಮಾರು ಕೋಟಿಗಟ್ಟಲೆ ಹಣವನ್ನು ವಿದ್ಯಾರ್ಥಿವೇತನ ರೂಪದಲ್ಲಿ ನೀಡುತ್ತಿದೆ. ಬಟ್ಟೆ, ಪುಸ್ತಕ, ಸೇರಿದ ಹಾಗೆ ಇನ್ನೂ ಹಲವು ರೀತಿಯ ಖರ್ಚು ಇರುತ್ತದೆ. ಇದಕ್ಕಾಗಿ ನೆರವು ನೀಡಲು ಸಂಸ್ಥೆ ಮುಂದಾಗಿದೆ.
ಡಿಪ್ಲೋಮ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2025 ವರೆಗೆ ಕಾಯಬೇಕು. ಸೆಪ್ಟೆಂಬರ್ ನಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ನಲ್ಲಿ ಲಿಂಕ್ ಅನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
ನರರ ಪ್ರದೇಶದ ಹೆಣ್ಣುಮಕ್ಕಳು ಸಹ ಈ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ. ನಗರ, ಗ್ರಾಮೀಣ ಮತ್ತು ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣ ಪಡೆಯಲು ಸರ್ಕಾರಿ ಮತ್ತು ಮಾನ್ಯತೆ ಪಡೆದ ಶಾಲೆಗೆ ಸೇರುವ ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯಬಹುದು.
ಡಿಪ್ಲೋಮ ಹಾಗೂ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದ ಮಕ್ಕಳು ಸಹ ವಿದ್ಯಾರ್ಥಿ ವೇತನ ಪಡೆಯಬಹುದು.
2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು 18 ರಾಜ್ಯಗಳಲ್ಲಿನ ಹೆಣ್ಣು ಮಕ್ಕಳಿಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ವರೆಗೆ ಕಾಯಬೇಕು ಎಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಯಾದ ಅನುರಾಗ್ ಬೆಹರ್ ಮಾಹಿತಿಯನ್ನು ನೀಡಿದ್ದಾರೆ.
ಸೆಪ್ಟೆಂಬರ್ ನಲ್ಲಿ ಎಲ್ಲಾ ಪ್ರಮುಖ ದಿನದ ಪತ್ರಿಕೆ ಗಳಲ್ಲಿ ಪ್ರಕಟಣೆಯನ್ನು ನೀಡಲಾಗುವುದು. ಆಗ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ವಿವಿಧ ಮಾಧ್ಯಮಗಳಲ್ಲಿ ಇದರ ಕುರಿತು ಮಾಹಿತಿಯನ್ನು ನೀಡಿಲಾಗುವುದು ಎಂದು ತಿಳಿಸಿದ್ದಾರೆ.
Azim Premji Scholarship 2025-26 : ಪ್ರತಿ ವರ್ಷ ಸುಮಾರು 750 ಕೋಟಿಯಂತೆ ಮೂರು ವರ್ಷಗಳಿಗೆ ಸರಿಯಾಗಿ ಹಣವನ್ನು ಮುಂಚಿತವಾಗಿ ತೆಗೆದಿಡಲಾಗಿದೆ. ಮೂರು ವರ್ಷಕ್ಕೆ 2,250 ಕೋಟಿ ಮೀಸಲೀಡಲಾಗಿದೆ. ಪ್ರತಿ ಹೆಣ್ಣು ಮಗುವಿಗೆ ಅವರ ವಿದ್ಯಾಭ್ಯಾಸ ಮುಗಿಯುವ ವರೆಗೆ ವಾರ್ಷಿಕ ರೂ.30,000 ನೀಡಲಾಗುವುದು. ಈ ಹಣವನ್ನು ಫಲನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದು ಒಂದು ಸಂಸ್ಥೆಯ ದೃಢ ನಿರ್ಧಾರವಾಗಿದೆ. ಸಂಸ್ಥೆಯ ಮಹತ್ವದ ಕಾರ್ಯ ಇದಾಗಿದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.