Ayushman bharat yojana (PMJAY) : ಅಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮಹತ್ವದ ಯೋಜನೆಯಾಗಿದೆ.
ಭಾರತ ಸರ್ಕಾರವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಅರೋಗ್ಯ ವೆಚ್ಚ ಭರಿಸಲು ಸಹಾಯ ಮಾಡುವ ದೃಷ್ಟಿಯಿಂದ ಅಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಜನ ಅರೋಗ್ಯ ಯೋಜನೆಯು, ಭಾರತದಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಅರ್ಹತೆ ಹೊಂದಿದ ಪಲಾನುಭವಿಗೆ ನಗದು ರಹಿತ ಚಿಕಿತ್ಸೆ ನೀಡುತ್ತದೆ. ಈ ಯೋಜನೆಯಿಂದ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಸೌಲಭ್ಯವನ್ನು ಪಡೆಯಲು ಅನುಕೂಲವಾಗಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷದ ವರೆಗೆ ಅರೋಗ್ಯ ವೆಚ್ಚ ಮತ್ತು ವೈದ್ಯಕೀಯ ಸೌಲಭ್ಯ ನೀಡುತ್ತದೆ. ಈ ಲೇಖನದಲ್ಲಿ ನಾವು ಅಯುಷ್ಮಾನ್ ಭಾರತ್ ಯೋಜನಾ ಸೌಲಭ್ಯಗಳು ಮತ್ತು ಪ್ರಯೋಜನ, ಯಾರು ಯೋಜನೆಯಾ ಸೌಲಭ್ಯ ಪಡೆಯಬಹುದು, ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು ಹಾಗೂ ಈ ಕಾರ್ಡ್ ಪಡೆಯಲು ಬೇಕಾಗುವ ಅರ್ಹತೆಗಳು ಏನು?, ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
Ayushman bharat yojana (PMJAY) : ಅಯುಷ್ಮಾನ್ ಭಾರತ್ ಯೋಜನೆಯ ಸಂಪೂರ್ಣ ಮಾಹಿತಿ.

Ayushman bharat yojana (PMJAY) : ಅಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವದ ಯೋಜನೆಯಾಗಿದೆ. ಸಮಾಜದಲ್ಲಿ ವಾಸಿಸುವ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಾರ್ಷಿಕ 5 ಲಕ್ಷದ ವರೆಗೆ ಅರೋಗ್ಯ ವೆಚ್ಚ ನೀಡುವ ಯೋಜನೆಯಾಗಿದೆ.
- ಯೋಜನೆ ಹೆಸರು : ಅಯುಷ್ಮಾನ್ ಭಾರತ್ ಯೋಜನೆ. (Ayushman bharat yojana (PMJAY).
- ಸೌಲಭ್ಯಗಳು : ವೈದ್ಯಕೀಯ ವೆಚ್ಚ.
- ಒಟ್ಟು ಮೊತ್ತ : ವಾರ್ಷಿಕ 5 ಲಕ್ಷ.
- ಯೋಜನೆ ಸಹಾಯವಾಣಿ ಸಂಖ್ಯೆ : 14555.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
ಅಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವುದರಿಂದ ಅನೇಕ ಕುಟುಂಬಗಳಿಗೆ ಸಹಾಯವಾಗಿದೆ. ಅಯುಷ್ಮಾನ್ ಕಾರ್ಡ್ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಇರಲೇ ಬೇಕು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Ayushman bharat yojana (PMJAY) : ಅಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳು.

Ayushman bharat yojana (PMJAY) : ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಾರ್ಷಿಕ 5 ಲಕ್ಷದ ವರೆಗೆ ಅರೋಗ್ಯ ವೆಚ್ಚ ನೀಡುವ ಯೋಜನೆಯಾಗಿದೆ. ಇದರ ಪ್ರಯೋಜನಗಳನ್ನು ನೋಡೋಣ.
- ವಾರ್ಷಿಕವಾಗಿ 5 ಲಕ್ಷದ ವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದು.
- ಅರ್ಹತೆ ಹೊಂದಿದ ಕುಟುಂಬಗಳು ಅಯುಷ್ಮಾನ್ ಯೋಜನೆಯಿಂದ ಹೃದ್ರೂಗ, ನರಶಸ್ತ್ರ ಚಿಕಿತ್ಸೆ ಮತ್ತು ಮೂಳೆ ಚಿಕಿತ್ಸೆ ಪಡೆಯಬಹುದು.
- 15 ದಿನಗಳ ವೆರೆಗೆ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ ವೈದ್ಯಕೀಯ ಶುಲ್ಕ ಪಡೆಯಲು ಅರ್ಹತೆ ಹೊಂದಿರುತ್ತಾರೆ.
- ಅಯುಷ್ಮಾನ್ ಕಾರ್ಡ್ ಮೂಲಕ ಅನೇಕ ರೀತಿಯಲ್ಲಿ ಸೌಲಭ್ಯ ಮತ್ತು ಚಿಕಿತ್ಸೆ ಪಡೆಯಬಹುದು.
- ಔಷಧಿಗಳು ಮತ್ತು ರೋಗ ನಿರ್ಣಯ ಸೇವೆಗಳನ್ನು ಪಡೆಯಲು ಅವಕಾಶ ಇರುತ್ತದೆ.
- ವೈದ್ಯರ ಶುಲ್ಕ, ಆಸ್ಪತ್ರೆ ಶುಲ್ಕ, OT ಶುಲ್ಕಗಳು ಮತ್ತು ICU ಶುಲ್ಕವನ್ನು ಸಹ ಪಡೆಯಬಹುದು.
ಹೀಗೆ ಅಯುಷ್ಮಾನ್ ಭಾರತ್ ಕಾರ್ಡ್ ನಿಂದ ವಿವಿಧ ರೀತಿಯ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಇದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ
Ayushman bharat yojana (PMJAY) : ಅಯುಷ್ಮಾನ್ ಭಾರತ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.
Ayushman bharat yojana (PMJAY) : ಅಯುಷ್ಮಾನ್ ಭಾರತ್ ಕಾರ್ಡ್ (Ayushman Card) ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಅಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಮೊದಲಿಗೆ ಪ್ರಧಾನ ಮಂತ್ರಿ ಜನ ಅರೋಗ್ಯ ಯೋಜನೆ (PMJAY) ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
- ನಂತರ PMJAY ಬಟನ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಓಪನ್ ಆದ ಮೇಲೆ ಅಯುಷ್ಮಾನ್ ಕಾರ್ಡ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಮೊಬೈಲ್ ನಂಬರ್ ಗೆ OTP ಬರುತ್ತದೆ ಅದನ್ನು ನಮೂದಿಸಿ.
- ಕ್ಯಾಪಿಚೆರ್ ಕೋಡ್ ಅನ್ನು ಎಂಟ್ರಿ ಮಾಡಿ submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಅಪ್ಲಿಕೇಶನ್ ಓಪನ್ ಆಗುತ್ತದೆ ಆಗ ನಿಮ್ಮ ಜಿಲ್ಲೆ, ತಾಲೂಕು ಮತ್ತು ಹೋಬಳಿ, ಗ್ರಾಮವನ್ನು ಹುಡುಕಿ ಆಯ್ಕೆ ಮಾಡಿ.
- ನಂತರ ಇ ಕೇವೈಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಆಧಾರ್ ನಂಬರ್ ನಮೂದಿಸಿ. ಆಧಾರ್ ಸಂಖ್ಯೆ ಲಿಂಕ್ ಆದ ಮೊಬೈಲ್ ನಂಬರ್ ಗೆ OTP ಬರುತ್ತದೆ ಅದನ್ನೇ ನಮೂದಿಸಿ, submit ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಎಲ್ಲಾ ವಯಕ್ತಿಕ ವಿವರಗಳನ್ನು ನಮೂದಿಸಿ.
- ನಿಮ್ಮ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಿದ ಬಳಿಕ, ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ ಸುಮಾರು 30 ನಿಮಿಷದ ಮೇಲೆ ನಿಮ್ಮ ಅಯುಷ್ಮಾನ್ ಕಾರ್ಡ್ ರೆಡಿ ಆಗುತ್ತದೆ.
- ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಅಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಮತ್ತೆ ವೆಬ್ಸೈಟ್ ಗೆ ಹೋಗಿ. ಲಾಗಿನ್ ಆಗಿ. ಆಮೇಲೆ ಕಾರ್ಡ್ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅಯುಷ್ಮಾನ್ ಕಾರ್ಡ್ ಡೌನ್ಲೋಡ್ ಆಗುತ್ತದೆ.
ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
Ayushman bharat yojana (PMJAY) : ಅಯುಷ್ಮಾನ್ ಭಾರತ್ ಕಾರ್ಡ್ ಯಾರು ಪಡೆಯಲು ಅರ್ಹರು.
ಭಾರತ ದೇಶದಲ್ಲಿ ವಾಸಿಸುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರು ಈ ಕಾರ್ಡ್ ಅನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ.
ಉದಾಹರಣೆ ಗೆ ನೋಡುವುದಾದರೆ, ಕೃಷಿ ಚಟುವಟಿಕೆ ಮಾಡುವ ಜನರು.
ವಿಕಲಚೇತನರು, ಮಹಿಳೆಯರು.
ಮನೆ ಕೆಲಸ ಮಾಡುವವರು.
ಕಟ್ಟಡ ಕಾರ್ಮಿಕರು.
ಬೀದಿ ಬದಿ ವ್ಯಾಪಾರ ಮಾಡುವವರು.
ಕಸ ಗುಡಿಸುವವರು, ನೈರ್ಮಲ್ಯ ಕಾರ್ಮಿಕರು.
ಗೃಹ ಆಧಾರಿತ ಕಾರ್ಮಿಕರು.
ಯಾವುದೇ ಕೆಲಸವನ್ನು ಮಡುವ, ಸರ್ಕಾರಿ ಉದ್ಯೋಗ ಹೊಂದಿಲ್ಲದವರು, GST ಟ್ಯಾಕ್ಸ್ ಕಟ್ಟದೆ ಇರುವವರು.ಅತೀ ಹೆಚ್ಚು ಆಸ್ತಿ, ಅಂತಸ್ತು, ಕಾರು, ಬಂಗಲೆ ಹೊಂದದೆ ಇರುವವರು, ಎಲ್ಲರೂ ಸಹ ಅಯುಷ್ಮಾನ್ ಕಾರ್ಡ್ ಪಡೆಯಲು ಅರ್ಹರು .ಕುಶಲ ಕರ್ಮಿಗಳು. ಸಾರಿಗೆ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿಗಳು. ಹೀಗೆ ಸಮಾಜದ ಎಲ್ಲಾ ಬಡ ವರ್ಗದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ ವರ್ಗ, ಜಾತಿ, ಧರ್ಮ, ಲಿಂಗ ಬೇದವಿಲ್ಲದೆ ಎಲ್ಲಾ ಸಮುದಾಯದ ಜನರು.
ಒಟ್ಟಾರೆಯಾಗಿ ಎಲ್ಲಾ ಸಮುದಾಯದ ಜನರು ಕೂಡ ಈ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದಾರೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.