ALIMCO Recruitment 2025 : ಕೃತಕ ಅಂಗಾಂಗ ತಯಾರಿಕಾ ಕೇಂದ್ರದಲ್ಲಿ ಖಾಲಿ ಇರುವ 103 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ALIMCO) ನಲ್ಲಿ ಖಾಲಿ ಇರುವ ಆಡಿಯೋಲಾಜಿಸ್ಟ್, ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಜೂಲೈ 2025 ಆಗಿರುತ್ತದೆ. ಕ್ಲಿನಿಕಲ್ ಸೈಕಲಾಗಿಸ್ಟ್, ಅಸಿಸ್ಟೆಂಟ್ ಮ್ಯಾನೇಜರ್, ಮೀಡಿಯಾ ಆಫೀಸರ್,ಜೂನಿಯರ್ ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಪದವಿ ಪಡೆದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ALIMCO) ದ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಎಲ್ಲಿ, ಹೇಗೆ, ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ALIMCO Recruitment 2025 ಹುದ್ದೆಗಳ ಸಂಪೂರ್ಣ ವಿವರ.

ಭಾರತ ಸರ್ಕಾರದ ಒಂದು ಮಹತ್ವದ ಕೃತಕ ಅಂಗಾಂಗ ತಯಾರಿಕಾ ಕೇಂದ್ರ (ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ALIMCO) ದಲ್ಲಿ ಖಾಲಿ ಇರುವ 103 ಹುದ್ದೆಗಳ ಸಂಪೂರ್ಣ ವಿವರ ನೋಡೋಣ.
ಸಂಸ್ಥೆಯ ಹೆಸರು : ಕೃತಕ ಅಂಗಾಂಗ ತಯಾರಿಕಾ ಕೇಂದ್ರ (ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ALIMCO).
- ಹುದ್ದೆಗಳ ವಿಂಗಡಣೆ : ಆಡಿಯೋಲಾಜಿಸ್ಟ್ 40 ಹುದ್ದೆಗಳು.
- ಪ್ರೊಸ್ಥೆಟಿಸ್ಟ್ ಅಂಡ್ ಅರ್ಥ್ತೋಟಿಸ್ಟ್ : 33.
- ಮೀಡಿಯಾ ಮ್ಯಾನೇಜರ್ : 1.
- ಕ್ಲಿನಿಕಲ್ ಸೈಕಲಾಜಿಸ್ಟ್ : 11.
- ಸ್ಪೆಷಲ್ ಎಜುಕೇಟೆರ್ : 11.
- ಅಸಿಸ್ಟೆಂಟ್ ಮ್ಯಾನೇಜರ್ (ಮೆಕ್ಯಾನಿಕಲ್) : 01.
- ಅಸಿಸ್ಟೆಂಟ್ ಮ್ಯಾನೇಜರ್ (ಪ್ಲಾಸ್ಟಿಕ್) : 01.
- ಅಸಿಸ್ಟೆಂಟ್ ಮ್ಯಾನೇಜರ್ (ಟ್ರೈನಿ) : 01.
- ಅಸಿಸ್ಟೆಂಟ್ ಮ್ಯಾನೇಜರ್ (AD) : 01.
- ಜೂನಿಯರ್ ಮ್ಯಾನೇಜರ್ : 01.
- ಫೈನಾನ್ಸ್ ಕನ್ಸಲ್ಟೆಂಟ್ : 01.
- ಒಟ್ಟು ಹುದ್ದೆಗಳು : 103.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05 ಜೂಲೈ 2025.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (Online).
- ವಯೋಮಿತಿ : ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷಗಳು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕ ಒಳಗೆ ಅರ್ಜಿ ಸಲ್ಲಿಸಿ. ಏಕೆಂದರೆ ಎಲ್ಲರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಈ ತೊಂದರೆಯಿಂದ ಮುಕ್ತಿ ಪಡೆಯಲು ಅವಕಾಶ ಇರುತ್ತದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ALIMCO Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ALIMCO) ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
ಯಾವುದೇ ಒಂದು ಉನ್ನತ ಹುದ್ದೆಯನ್ನು ಪಡೆಯಲು ಉತ್ತಮ ಶಿಕ್ಷಣ ಅತೀ ಮುಖ್ಯವಾಗಿದೆ. ALIMCO ದಲ್ಲಿನ ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆ ತಿಳಿಯೋಣ.
- ಯಾವುದೇ ಪದವಿ (Any Degree).
- ಬಿಇ (BE).
- ಬಿ.ಟೆಕ್ (B.Tech).
- ಐಸಿಡಬ್ಲ್ಯೂಎ(ICWA).
- ಸಿಎ (CA).
- ಬಿ.ಎಸ್ಸಿ (B. Sc).
- ಹುದ್ದೆಗಳಿಗೆ ಸಂಬಂದಿಸಿದ ಡಿಪ್ಲೋಮ ಪದವಿ.
ಇವೆಲ್ಲಾ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ವಯೋಮಿತಿ ವಿವರ (Age Qualification) :
ವಯಸ್ಸಿನ ಮಿತಿಯನ್ನು ನೋಡುವುದಾದರೆ,
- ಕನಿಷ್ಠ ವಯಸ್ಸು 21 ವರ್ಷ.
- ಗರಿಷ್ಠ ವಯಸ್ಸು 40 ವರ್ಷಗಳು.
ವಯೋಮಿತಿ ಸಡಿಲಿಕೆ ಬಯಸುವವರು ಕೃತಕ ಅಂಗಾಂಗ ತಯಾರಿಕಾ ಕೇಂದ್ರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ALIMCO ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು. ALIMCO ದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
ALIMCO Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
ಭಾರತ ಸರ್ಕಾರದ ಒಂದು ಮಹತ್ವದ ಕೃತಕ ಅಂಗಾಂಗ ತಯಾರಿಕಾ ಕೇಂದ್ರ (ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ALIMCO) ದಲ್ಲಿ ಖಾಲಿ ಇರುವ 103 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ರೇಷನ್ ಕಾರ್ಡ್ (Ration Card).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks card).
- ಪಿಯುಸಿ ಅಂಕಪಟ್ಟಿ (PUC Markscard).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Markscards).
- ಜಾತಿ ಪ್ರಮಾಣ ಪತ್ರ (Caste Certificate).
ಈ ಮೇಲಿನ ಎಲ್ಲಾ ಪ್ರಮುಖ ದಾಖಲೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ALIMCO Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ALIMCO Recruitment 202 : ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ALIMCO) ನಲ್ಲಿ ಖಾಲಿ ಇರುವ ಆಡಿಯೋಲಾಜಿಸ್ಟ್, ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೆಳಗಿನ ಕ್ರಮವನ್ನು ಅನುಸರಿಸಿ.
- ಮೊದಲಿಗೆ ALIMCO ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ ರಿಜಿಸ್ಟರ್ ಮಾಡಿಕೊಳ್ಳಬೇಕು.
- ರಿಜಿಸ್ಟರ್ ಮಾಡಲು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ.
- ನಂತರ ಮೊಬೈಲ್ ನಂಬರ್ ಬರುವ OTP ಎಂಟ್ರಿ ಮಾಡಿ. ಪಾಸ್ ವರ್ಡ್ ಸೆಟ್ ಮಾಡಬೇಕು.
- ಆಮೇಲೆ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಹಾಕಿ ಲಾಗಿನ್ ಆಗಬೇಕು.
- ಲಾಗಿನ್ ಆದಮೇಲೆ “ALIMCO Recruitment 2025” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಗ ಅಪ್ಲಿಕೇಶನ್ ಓಪನ್ ಆಗುತ್ತದೆ.
- ನಿಮ್ಮ ವೈಯಕ್ತಿಕ ವಿವರಗಳನ್ನು ಅಪ್ಲಿಕೇಶನ್ ನಲ್ಲಿ ನಮೂದಿಸಿ.
- ನಂತರ ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ನಮೂದಿಸಬೇಕು.
- ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಂತರ ಅರ್ಜಿ ಶುಲ್ಕ ಪಾವತಿಸಬೇಕು. ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು.
- ಎಲ್ಲಾ ಮಾಹಿತಿ ಸರಿ ಇದ್ದರೆ, ಅರ್ಜಿ ಸಲ್ಲಿಸುವ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಒಂದು ಡೈರಿಯಲ್ಲಿ ಬರೆದು ಇಟ್ಟುಕೊಳ್ಳಿ. ಏಕೆಂದರೆ ಮುಂದಿನ ದಿನದಲ್ಲಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಬೇಕಾಗುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.