ABVKY : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ.

ABVKY : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ

ABVKY ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಕೇಂದ್ರ ಸರ್ಕಾರದ ನೌಕರರ ರಾಜ್ಯ ವಿಮಾ ನಿಗಮ(ESIC) ಜಾರಿಗೆ ತಂದಿದೆ.

ಕೇಂದ್ರ ಸರ್ಕಾರದ ಹಲವು ಜನ ಕಲ್ಯಾಣ ಯೋಜನೆಗಳಲ್ಲಿ ಇದು ಸಹ ಒಂದು ಮಹತ್ವದ ಯೋಜನೆಯಾಗಿದೆ. ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ABVKY) ಯನ್ನು ನೌಕರರ ರಾಜ್ಯ ವಿಮಾ ನಿಗಮ(ESIC) ಕೇಂದ್ರ ಸರ್ಕಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಮೊದಲು ಪರಿಚಯಿಸಿತು. ಎರಡು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. ನಿರುದ್ಯೋಗಿ ವಿಮೆದಾರರಿಗೆ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಸೌಲಭ್ಯ ಪಡೆಯಲು ಉದ್ಯೋಗಿಯು ಎರಡು ವರ್ಷಗಳ ವಿಮಾ ಉದ್ಯೋಗವನ್ನು ಪೂರ್ಣ ಮಾಡಿರಬೇಕು. ಸರಾಸರಿ ದಿನದ ಗಳಿಕೆಯ 50% ನಗದು ರೂಪದಲ್ಲಿ ಪರಿಹಾರ ನೀಡಲಾಗುವುದು. ಪರಿಹಾರ ಪಡೆಯುವ ಸಮಯದಲ್ಲಿ ವಿಮೆ ಮಾಡಿದ ವ್ಯಕ್ತಿ ನಿರುದ್ಯೋಗಿ ಆಗಿರುವುದು ಕಡ್ಡಾಯವಾಗಿದೆ. ವಿಮೆ ಮಾಡಿಸಿರುವ ವ್ಯಕ್ತಿಯ ಆಧಾರ್ ನಂಬರ್ ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗಿರಬೇಕು. ESI ಕಾಯಿದೆ ಅಡಿಯಲ್ಲಿ ಇರುವ ವಿಮೆದಾರರು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಮತ್ತೆ ಉದ್ಯೋಗ ಮಾಡುವವರೆಗೆ ಸೌಲಭ್ಯ ಪಡೆಯಬಹುದು. ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.

ABVKY : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಸಂಪೂರ್ಣ ಮಾಹಿತಿ.

ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ABVKY) ಯನ್ನು ನೌಕರರ ರಾಜ್ಯ ವಿಮಾ ನಿಗಮ(ESIC) ಕೇಂದ್ರ ಸರ್ಕಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಜಾರಿಗೆ ತಂದಿದೆ. ನಿರುದ್ಯೋಗಿ ವಿಮೆದಾರರಿಗೆ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆ ಹೆಸರು : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ABVKY).

ಸಂಸ್ಥೆಯ ಹೆಸರು : ನೌಕರರ ರಾಜ್ಯ ವಿಮಾ ನಿಗಮ(ESIC).

ಅಧೀನ : ಕೇಂದ್ರ ಸರ್ಕಾರ.

ಉದ್ದೇಶ : ನಿರುದ್ಯೋಗಿ ವಿಮೆದಾರರಿಗೆ ಪರಿಹಾರವನ್ನು ನೀಡುವುದು.

ಅಗತ್ಯ ದಾಖಲೆಗಳು : ಆಧಾರ್ ಕಾರ್ಡ್(Aadhar card).

ಬ್ಯಾಂಕ್ ಖಾತೆಯ ವಿವರ(Bank Account Details).

ವಿಳಾಸದ ಪುರಾವೆ.

ಸಂಬಳದ ವಿವರ : ಸ್ಯಾಲರಿ ಸ್ಲಿಪ್(Salary Slip).

ಸಚಿವಾಲಯ : ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ.

ಈ ಹಿಂದೆ ಎಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಕೆಲಸ ಕಳೆದುಕೊಂಡು 30 ದಿನದ ಮೇಲೇಯೂ ಸಹ ಯಾವುದೇ ಕೆಲಸ ಸಿಗದೇ ನಿರುದ್ಯೋಗಿ ಆಗಿದ್ದರೆ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಪರಿಹಾರ ಪಡೆಯಲು ಅವಕಾಶ ಇರುತ್ತದೆ.

ABVKY ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ರಾಜ್ಯ ವಿಮಾ ನಿಗಮ(ESIC) ಜಾರಿಗೆ ತಂದಿರುವ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ(ABVKY) ಯ ಸೌಲಭ್ಯ ಪಡೆಯಬೇಕಾದರೆ ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.

ಆಧಾರ್ ಕಾರ್ಡ್ (Aadhar Card).

ಚುನಾವಣಾ ಗುರುತಿನ ಚೀಟಿ (Election Identity Card).

ಪಡಿತರ ಚೀಟಿ (Ration card).

ಬ್ಯಾಂಕ್ ಖಾತೆಯ ವಿವರ (Bank Account Details).

ಕ್ಯಾನ್ಸಲ್ ಚೆಕ್ (Cancel Check).

ವಿಮಾ ವಿವರ.(Insurance Details).

ಸಂಬಳದ ಚೀಟಿ (Payment Slip 2 Month).

ಸ್ವಯಂ ದೃಡೀಕರಣ ಪತ್ರ (Self Declaration Certificate).

ನಿರುದ್ಯೋಗಿ ಪ್ರಮಾಣ ಪತ್ರ (Unemployed Certificate).

ಇವೆಲ್ಲಾ ಪ್ರಮುಖ ದಾಖಲೆಗಳನ್ನು ಹೊಂದಿರುವ ಅರ್ಹ ನಿರುದ್ಯೋಗಿ ವಿಮೆದಾರರು ಎಬಿವಿಕೆವೈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ABVKY : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ(ABVKY) ಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

ಮೊದಲು ESIC ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.

ಮುಖಪುಟ ತೆರೆದ ನಂತರ “ಇ-ಸೇವೆಗಳು”ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಮೇಲೆ ಉದ್ಯೋಗಿಗಳು ಎಂಬ ಲಿಂಕ್ ಕ್ಲಿಕ್ ಮಾಡಬೇಕು.

ಮುಂದೆ ಹೋಗಿ ಐಪಿ ಪೋರ್ಟೆಲ್ ಅನ್ನು ಒತ್ತಿ.

ಪೋರ್ಟಲ್ ತೆರೆದ ನಂತರ ವಿಮೆದಾರರನ್ನು ಆಯ್ಕೆ ಮಾಡಿ.

ಆದಮೇಲೆ ನಿಮ್ಮ ಹೆಸರನ್ನು ಹಾಕಿ ರಿಜಿಸ್ಟರ್ ಮಾಡಬೇಕು.

ಪಾಸ್ ವರ್ಡ್ ಅನ್ನು ಕ್ರಿಯೇಟ್ ಮಾಡಿ,ಲಾಗಿನ್ ಮಾಡಿ.

ವಿಮಾ ಸಂಖ್ಯೆಯನ್ನು ನಮೂದಿಸಿ.

ಜನ್ಮ ದಿನಾಂಕ ಮತ್ತು ಮೊಬೈಲ್ ನಂಬರ್ ಹಾಕಬೇಕು.

ನಿಮ್ಮ ವಯಕ್ತಿಕ ವಿವರಗಳನ್ನು ನಮೂದಿಸಬೇಕು.

ಬ್ಯಾಂಕ್ ಖಾತೆಯ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಎಂಟ್ರಿ ಮಾಡಬೇಕು.

ಕೇಳಿರುವ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಬೇಕು.

AB-1ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

AB-1 ಫಾರ್ಮ್ ನಲ್ಲಿ ಕೇಳಿರುವ ಎಲ್ಲಾ ವಿವರವನ್ನು ಎಂಟ್ರಿ ಮಾಡಿ.

AB-1 ಅರ್ಜಿ ಮತ್ತು ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಿ.

ಎಲ್ಲಾ ಮಾಹಿತಿ ಸರಿ ಇದ್ದರೆ,” ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸಲ್ಲಿಸಿದ ಅಪ್ಲಿಕೇಶನ್ ಅನ್ನು ಮತ್ತೆ ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿಯಲ್ಲಿ ಸಹಿ ಮಾಡಿ ಕ್ಲೇಮ್ ಅನ್ನು ಅಫಿಡೇವಿಟ್ ನಲ್ಲಿ ESIC ಆಫೀಸ್ ಗೆ ಸಲ್ಲಿಸಬೇಕು.

ಕ್ಲೇಮ್ ಸ್ವೀಕರಿಸಿದ ಅಧಿಕಾರಿಗಳು ಅದನ್ನು ಪರಿಶೀಲನೆ ಮಾಡುತ್ತಾರೆ.

ಸಲ್ಲಿಸಿದ ಎಲ್ಲಾ ಮಾಹಿತಿ ಮತ್ತು ದಾಖಲೆ ಸರಿಯಾಗಿ ಇದ್ದರೆ, ಪರಿಹಾರ ನೀಡುತ್ತಾರೆ.

ಐಪಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಸುಳ್ಳು ಮಾಹಿತಿ ನೀಡಬಾರದು. ವಿಮಾದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬದ ನಾಮಿನಿ ಸದಸ್ಯರು ತೆಗೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ.

ABVKY : ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು.

ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ABVKY) ಯನ್ನು ನೌಕರರ ರಾಜ್ಯ ವಿಮಾ ನಿಗಮ(ESIC) ಕೇಂದ್ರ ಸರ್ಕಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಜಾರಿಗೆ ತಂದಿದೆ. ನಿರುದ್ಯೋಗಿ ವಿಮೆದಾರರಿಗೆ ಪರಿಹಾರವನ್ನು ಪಡೆಯಲು ಬೇಕಾದ ಅರ್ಹತೆಗಳು ಯಾವುವು ಎಂಬುದನ್ನು ನೋಡೋಣ.

ವಿಮೆದಾರ ನಿರುದ್ಯೋಗಿ ಆಗಿರಬೇಕು.

ಕನಿಷ್ಠ 2 ವರ್ಷ ವಿಮೆ ಮಾಡಬಹುದಾದ ಉದ್ಯೋಗದಲ್ಲಿ ಇರಬೇಕು.

ಉದ್ಯೋಗದಲ್ಲಿ ಕನಿಷ್ಠ 78 ದಿನಗಳಲ್ಲಿ ಕೊಡುಗೆ ನೀಡಿರಬೇಕು.

ಅರ್ಹತೆ ಹೊಂದಿಲ್ಲದವರು :

ಉದ್ಯೋಗದಿಂದ ವಜಾ ಮಾಡಿದ ವ್ಯಕ್ತಿ ಅರ್ಹತೆ ಹೊಂದಿರುವುದಿಲ್ಲ.

ಸ್ವಯಂ ಪ್ರೇರಿತವಾಗಿ ಉದ್ಯೋಗ ಬಿಟ್ಟವರು ಅರ್ಹರಲ್ಲ.

ನಿವೃತ್ತಿ ವಯಸ್ಸು ಮುಗಿಸಿಕೊಂಡು ಬಂದವರು.

2 ವರ್ಷಕ್ಕಿಂತ ಕಡಿಮೆ ಕೊಡುಗೆ ಸೇವೆ ಸಲ್ಲಿಸಿದವರು.

ಯಾವುದೇ ರೀತಿಯಲ್ಲಿ ಶಿಕ್ಷೆಗೆ ಗುರಿಯದವರು.

 

 

Leave a Reply

Your email address will not be published. Required fields are marked *