AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದಲ್ಲಿ ಖಾಲಿ ಇರುವ ಏರ್ ಟ್ರಾಫಿಕ್ ಕಂಟ್ರೋಲರ್ (ಜೂನಿಯರ್ ಎಕ್ಸಿಕ್ಯೂಟ್) ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 25 ಏಪ್ರಿಲ್ 2025 ರಿಂದ ಅರ್ಜಿಗಳನ್ನು ಸಲ್ಲಿಸಬಹುದು. ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಶುಭ ಸುದ್ದಿಯಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 24 ಮೇ 2025 ಆಗಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು AAI ದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಈ ಲೇಖನದಲ್ಲಿ ನಾವು ಈ ಮೇಲಿನ ಹುದ್ದೆಗಳಿಗೆ ಸಂಬಂದಿಸಿದ ಎಲ್ಲಾ ಸಂಪೂರ್ಣ ಮಾಹಿತಿ ವಿವರವಾಗಿ ನೀಡಿದ್ದೇವೆ. ಅಂದರೆ ಅರ್ಜಿಗಳನ್ನು ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ದ ವಿವರ, ಶೈಕ್ಷಣಿಕ ಮತ್ತು ವಯೋಮಿತಿ ಎಷ್ಟು ಇರಬೇಕು, ಒಟ್ಟು ಹುದ್ದೆಗಳು, ಹುದ್ದೆಗಳ ವಿಂಗಡಣೆ, ಪ್ರಮುಖ ದಿನಾಂಕಗಳು, ಪ್ರಮುಖ ಲಿಂಕ್ ಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದೇವೆ. ಲೇಖನವನ್ನು ಪೂರ್ಣ ಓದಿ, ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಕೆ ಮಾಡಿ.
AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳ ಸಂಪೂರ್ಣ ವಿವರ.

AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳ ಸಂಪೂರ್ಣ ವಿವರವನ್ನು ನೋಡೋಣ. AAI ಅಲ್ಲಿ ಖಾಲಿ ಇರುವ ಏರ್ ಟ್ರಾಫಿಕ್ ಕಂಟ್ರೋಲರ್ ಜೂನಿಯರ್ ಎಕ್ಸಿಕ್ಯೂಟ್ ಹುದ್ದೆಗಳ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
- ಸಂಸ್ಥೆ ಹೆಸರು : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI).
- ಹುದ್ದೆಯ ಹೆಸರು : ಏರ್ ಟ್ರಾಫಿಕ್ ಕಂಟ್ರೋಲರ್.
- ಒಟ್ಟು ಹುದ್ದೆಗಳು : 309.
- ಹುದ್ದೆಗಳ ವಿಂಗಡಣೆ : ಜನರಲ್ ವರ್ಗಕ್ಕೆ 125 ಹುದ್ದೆಗಳು.
- EWS ವರ್ಗಕ್ಕೆ : 30.
- OBC ವರ್ಗಕ್ಕೆ : 72.
- ಪರಿಶಿಷ್ಟ ಜಾತಿ (SC) ಗೆ : 55.
- ಪರಿಶಿಷ್ಟ ಪಂಗಡ (ST) ಗೆ : 27. ಹುದ್ದೆಗಳನ್ನು ಮೀಸಲು ಇಡಲಾಗಿದೆ.
ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಏರ್ ಇಂಡಿಯಾ ವಿಮಾನ ಪ್ರಾಧಿಕಾರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು, ಕೊನೆಯ ದಿನಾಂಕದ ವರೆಗೆ ಕಾಯದೇ, ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ ಹೀಗಿದೆ.
AAI: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ 309 ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ (Education Qualification).
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ B.Sc (ಬಿ.ಎಸ್ಸಿ ). ಪದವಿ ಪಡೆದಿರಬೇಕು. ಬಿ.ಎಸ್ಸಿ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ಉತ್ತಿರ್ಣ ಹೊಂದಿರುವವರು ಅಥವಾ ಬಿ.ಟೆಕ್(B.Tech)ಟೆಕ್ನಾಲಜಿ /ಬಿ.ಇ(BE) ಇಂಜಿನಿಯರಿಂಗ್ ಪದವಿಯನ್ನು ಮುಗಿಸಿರಬೇಕು. ಈ ಶೈಕ್ಷಣಿಕ ಅರ್ಹತೆ ಪಡೆದು, ಕೆಲಸ ಹುಡುಕುತ್ತಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು.
ವಯೋಮಿತಿ ವಿವರ (Age Limit).
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ 309 ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಯೋಮಿತಿ ಹೊಂದಿರಬೇಕು.
- ಕನಿಷ್ಠ ವಯಸ್ಸು 18 ವರ್ಷಗಳು.
- ಗರಿಷ್ಠ ವಯಸ್ಸು 27 ವರ್ಷಗಳು.
ಸರ್ಕಾರದ ನಿಯಮದ ಪ್ರಕಾರ ಮೀಸಲಾತಿ ಹೊಂದಿರುವ ವರ್ಗಗಳಿಗೆ, OBC, EWS, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಪಡೆಯಲು ಅರ್ಹತೆ ಇರುತ್ತದೆ.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ. AAI Website.
AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳ ಪ್ರಮುಖ ದಿನಾಂಕಗಳು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಹೀಗಿವೆ.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 25/04/2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/05/2025.
- ಅರ್ಜಿ ಸಲ್ಲಿಸುವವರ ವಯಸ್ಸು ಮೇ 24,2025 ಕ್ಕೆ 27 ವರ್ಷ ಮೀರಿರಬಾರದು.
ಯಾವುದೇ ಕಾರಣಕ್ಕೂ ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಇದರಿಂದ ಕೊನೆಯಲ್ಲಿ ಉಂಟಾಗುವ ತಾಂತ್ರಿಕ ತೊಂದರೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಆಗುತ್ತದೆ.
AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳ ಅರ್ಜಿ ಶುಲ್ಕದ ವಿವರ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ 309 ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೆಳಗಿನ ಶುಲ್ಕ ಪಾವತಿಸಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000 ಶುಲ್ಕ ನೀಡಬೇಕು.
- OBC ವರ್ಗಕ್ಕೆ ರೂ.1000.
- EWS ವರ್ಗಕ್ಕೆ ರೂ.1000. ಶುಲ್ಕ ನಿಗದಿ ಮಾಡಲಾಗಿದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಪಿಡಬ್ಲ್ಯೂಡಿ, ಮತ್ತು ಮಹಿಳೆಯರಿಗೆ ಹಾಗೂ ಅಪ್ರೆಂಟಿಸ್ ಶಿಫ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆನ್ಲೈನ್ ನಲ್ಲಿ ಕೊನೆಯ ದಿನಾಂಕದ ಒಳಗೆ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಪಾವತಿ ಮಾಡಿದ ನಂತರ ಪ್ರಿಂಟ್ ಓಟ್ ಪಡೆಯಬೇಕು.
AAI Recruitment 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳ ಅರ್ಜಿ ಸಲ್ಲಿಸುವ ವಿಧಾನ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಈ ಕೆಳಗೆ ಕೊಟ್ಟಿರುವ ವಿಧಾನದಲ್ಲಿ ಅರ್ಜಿ ಸಲ್ಲಿಸಿ.
- ಮೊದಲನೆಯದಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನ್ಯೂ ರೆಜಿಸ್ಟರ್ (New Register) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಇಮೇಲ್ ಐ.ಡಿ (Email ID) ನಮೂದಿಸಬೇಕು.
- ನಂತರ ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಆಮೇಲೆ ನೀವು ನಿಮ್ಮ ಪಾಸ್ ವಾರ್ಡ್ (Password) ಅನ್ನು ಕ್ರಿಯೇಟ್ ಮಾಡಬೇಕು.
- ನಂತರ ನಿಮ್ಮ ಇಮೇಲ್ ಮತ್ತು ನೀವು ಕ್ರಿಯೇಟ್ ಮಾಡಿದ ಪಾಸ್ ವಾರ್ಡ್ ನೀಡಿ ಲಾಗಿನ್ ಮಾಡಿಕೊಳ್ಳಿ.
- ನಿಮ್ಮ ಇಮೇಲ್ ಮತ್ತು ಪಾಸ್ ವಾರ್ಡ್ ಅನ್ನು ಒಂದು ಬುಕ್ ನಲ್ಲಿ ಬರೆದು ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಮರೆಯಬಾರದು.
- ಲಾಗಿನ್ ಮಾಡಿದ ಮೇಲೆ ಕೇಳಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಎಂಟ್ರಿ ಮಾಡಿ.
- ನಂತರ ಶೈಕ್ಷಣಿಕ ವಿವರವನ್ನು ನಮೂದಿಸಿ.
- ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ಆಧಾರ್ ಕಾರ್ಡ್, ವೈಯಕ್ತಿಕ ವಿವರ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಆಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಸರಿಯಾಗಿದ್ದರೆ, ಕೊನೆಯಲ್ಲಿ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ನೀಡಿರುವ Email ID ಮತ್ತು Password ಅನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಏಕೆಂದರೆ ಮತ್ತೆ ಲಾಗಿನ್ ಆಗಲು ಇವು ಕಡ್ಡಾಯವಾಗಿ ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.