Cet Result 2025 : ಅಗ್ರಸ್ಥಾನ ಪಡೆದ ಬಾಲಕರು.

Cet Result 2025

Cet Result 2025 ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ 24 ಮೇ 2025 ರಂದು ಪ್ರಕಟವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) CET 2025 ರ ಫಲಿತಾಂಶವನ್ನು ಪ್ರಕಟ ಮಾಡಿದೆ. ಸಿಇಟಿ 2025 ರಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. Cet ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಮೂರು ಲಕ್ಷದ ಮೂವತ್ತು ಸಾವಿರ ವಿದ್ಯಾರ್ಥಿಗಳಲ್ಲಿ 3,11,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಎರಡು ಲಕ್ಷದ ಎಪ್ಪತೈದು ಸಾವಿರದ ಆರುನೂರಾ ಎಪ್ಪತ್ತ ಏಳು(2,75,677) ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತನ್ಯ CBSE ಶಾಲೆಯ ಭವೇಶ್ ಜಯಂತಿ ಮೊದಲ ಸ್ಥಾನ ಪಡೆದಿದ್ದಾರೆ. ಹಾಗೆ ಕನಕಪುರ ರಸ್ತೆ, ಉತ್ತರಹಳ್ಳಿಯ ಚೈತನ್ಯ ಟೆಕ್ನೋ ಶಾಲೆಯ ಸಾತ್ವಿಕ್ ಬಿರಾದಾರ್ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನವನ್ನು ದಿನೇಶ್ ಗೊಮತಿ ಎಂಬ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. ಸಿಇಟಿ ಫಲಿತಾಂಶದ ವಿಭಾಗವಾರು Rank ಪಡೆದವರ ಸಂಪೂರ್ಣ ವಿವರವನ್ನು ಲೇಖನದ ಮುಂದಿನ ಭಾಗದಲ್ಲಿ ನೀಡಲಾಗಿದೆ.

Cet Result 2025 ರ ಸಿಇಟಿ ಫಲಿತಾಂಶದ ವಿಭಾಗವಾರು ಸಂಪೂರ್ಣ ಮಾಹಿತಿ.

Cet Result 2025
Cet Result 2025

Cet Result 2025 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) CET 2025 ರ ಫಲಿತಾಂಶವನ್ನು ಪ್ರಕಟ ಮಾಡಿದೆ. ಸಿಇಟಿ 2025 ರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ Rank ಪಡೆದವರ ಸಂಪೂರ್ಣ ವಿವರ ಇಲ್ಲಿದೆ.

  1. ಇಲಾಖೆ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA).
  2. ಪರೀಕ್ಷೆ ಹೆಸರು : CET 2025.
  3. ಫಲಿತಾಂಶ ದಿನಾಂಕ : 24 ಮೇ 2025.
  4. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು : 3,30,000.
  5. ಪರೀಕ್ಷೆ ಬರೆದವರು : 3,11,000.
  6. ಉತ್ತಿರ್ಣರದವರು : 2,75,677.
  • ಇಂಜಿನಿಯರಿಂಗ್ ವಿಭಾಗ (Engineering) :

Cet Result 2025 : ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ : ಭವೇಶ್ ಜಯಂತಿ.

ಶಾಲೆ ಹೆಸರು : ಚೈತನ್ಯ CBSE ಶಾಲೆ.

ವಿಳಾಸ : ಬೆಂಗಳೂರಿನ ಮಾರತಹಳ್ಳಿ.

ದ್ವಿತೀಯ ಸ್ಥಾನ : ಸಾತ್ವಿಕ್ ಬಿರಾದಾರ್.

ಶಾಲೆ ಹೆಸರು : ಚೈತನ್ಯ ಟೆಕ್ನೋ.

ವಿಳಾಸ : ಕನಕಪುರ ರಸ್ತೆ, ಉತ್ತರಹಳ್ಳಿ.

ತೃತೀಯ ಸ್ಥಾನ : ದಿನೇಶ್ ಗೊಮತಿ.

ಶಾಲೆ ಹೆಸರು : ಚೈತನ್ಯ ಟೆಕ್ನೋ.

ವಿಳಾಸ : ಬೆಂಗಳೂರಿನ ಮಾರತಹಳ್ಳಿ.

ಇಂಜಿನಿಯರಿಂಗ್ ವಿಭಾಗದಲ್ಲಿ Rank ಪಡೆದ ವಿದ್ಯಾರ್ಥಿಗಳು.

ಪಶು ವೈದ್ಯಕೀಯ ವಿಭಾಗ :

ಪ್ರಥಮ ಸ್ಥಾನವನ್ನು ಹರೀಶ್ ರಾಜ್ ಡಿ.ವಿ ಪಡೆದಿದ್ದಾರೆ. ಇವರು ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ, ಯಲಹಂಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ದ್ವಿತೀಯ ಸ್ಥಾನ ಪಡೆದವರು ಆತ್ರೇಯ ವೆಂಕಟಾಚಲಂ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಚ್.ಎಸ್.ಆರ್. ಲೇಔಟ್ ಬೆಂಗಳೂರು.

ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ಸಫಲ್ ಎಸ್. ಶೆಟ್ಟಿ. ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು.

ಬಿ.ಎಸ್ಸಿ ಕೃಷಿ ವಿಭಾಗ :(B.Sc Agriculture) :

ಪ್ರಥಮ ಸ್ಥಾನ : ಅಕ್ಷಯ್ ಎಂ. ಹೆಗ್ಗಡೆ, ಆಳ್ವಾಸ್ ಪಿಯು ಕಾಲೇಜು,ಮೂಡಬಿದರೆ.

ದ್ವಿತೀಯ ಸ್ಥಾನ : ಸಾಯಿಶ್ ಶ್ರವಣ್ ಪಂಡಿತ್ ಎಕ್ಸ್ ಪರ್ಟ್ ಪಿಯು ಕಾಲೇಜು ಮಂಗಳೂರು.

ತೃತೀಯ ಸ್ಥಾನ : ಸುಚಿತ್ ಪಿ. ಪ್ರಸಾದ್ ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.

ಯೋಗ ಮತ್ತು ನ್ಯಾಚುರೋಪಥಿ ವಿಭಾಗ :

ಪ್ರಥಮ ಸ್ಥಾನ : ಹರೀಶ್ ರಾಜ್ ಡಿ.ವಿ ಪಡೆದಿದ್ದಾರೆ. ಇವರು ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ, ಯಲಹಂಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ದ್ವಿತೀಯ ಸ್ಥಾನ : ಆತ್ರೇಯ ವೆಂಕಟಾಚಲಂ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಚ್.ಎಸ್.ಆರ್. ಲೇಔಟ್ ಬೆಂಗಳೂರು.

ತೃತೀಯ ಸ್ಥಾನ : ಸಫಲ್ ಎಸ್. ಶೆಟ್ಟಿ. ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು.

ಬಿ.ಎಸ್ಸಿ ನರ್ಸಿಂಗ್ ವಿಭಾಗ (B.Sc Nursing) :

ಪ್ರಥಮ ಸ್ಥಾನ : ಹರೀಶ್ ರಾಜ್ ಡಿ.ವಿ ಪಡೆದಿದ್ದಾರೆ. ಇವರು ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ, ಯಲಹಂಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ದ್ವಿತೀಯ ಸ್ಥಾನ : ಆತ್ರೇಯ ವೆಂಕಟಾಚಲಂ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಚ್.ಎಸ್.ಆರ್. ಲೇಔಟ್ ಬೆಂಗಳೂರು.

ತೃತೀಯ ಸ್ಥಾನ : ಸಫಲ್ ಎಸ್. ಶೆಟ್ಟಿ. ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು.

ಫಾರ್ಮಾ -ಡಿ ವಿಭಾಗ :

ಪ್ರಥಮ ಸ್ಥಾನ : ಆತ್ರೇಯ ವೆಂಕಟಾಚಲಂ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಚ್.ಎಸ್.ಆರ್. ಲೇಔಟ್ ಬೆಂಗಳೂರು.

ದ್ವಿತೀಯ ಸ್ಥಾನ : ಭವೇಶ್ ಜಯಂತಿ, ಚೈತನ್ಯ ಟೆಕ್ನೋ ಶಾಲೆ.

ವಿಳಾಸ : ಬೆಂಗಳೂರಿನ ಮಾರತಹಳ್ಳಿ.

ತೃತೀಯ ಸ್ಥಾನ : ಹರೀಶ್ ರಾಜ್ ಡಿ.ವಿ ಪಡೆದಿದ್ದಾರೆ. ಇವರು ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ, ಯಲಹಂಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ಬಿ-ಫಾರ್ಮಾ ವಿಭಾಗ :

ಪ್ರಥಮ ಸ್ಥಾನ : ಆತ್ರೇಯ ವೆಂಕಟಾಚಲಂ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಚ್.ಎಸ್.ಆರ್. ಲೇಔಟ್ ಬೆಂಗಳೂರು.

ದ್ವಿತೀಯ ಸ್ಥಾನ : ಭವೇಶ್ ಜಯಂತಿ, ಚೈತನ್ಯ ಟೆಕ್ನೋ ಶಾಲೆ.

ವಿಳಾಸ : ಬೆಂಗಳೂರಿನ ಮಾರತಹಳ್ಳಿ.

ತೃತೀಯ ಸ್ಥಾನ : ಹರೀಶ್ ರಾಜ್ ಡಿ.ವಿ,ನಾರಾಯಣ ಇ ಟೆಕ್ನೋ ಸ್ಕೂಲ್, ದೊಡ್ಡಬೆಟ್ಟಹಳ್ಳಿ, ಯಲಹಂಕ.

ಹೀಗೆ ವಿವಿಧ ವಿಭಾಗದಲ್ಲಿ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Cet Result 2025 ಸಿಇಟಿ ಕೌನ್ಸಲಿಂಗ್ ದಿನಾಂಕ.

Cet Result 2025 : NEET(ನೀಟ್) ಫಲಿತಾಂಶ ಪ್ರಕಟಿಸಿದ ನಂತರ ಸಿಇಟಿ ಕೌನ್ಸಲಿಂಗ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ತಿಳಿಸಿದ್ದಾರೆ. ನೀಟ್ ಫಲಿತಾಂಶದ ನಂತರ ವೈದ್ಯಕೀಯ ಸೀಟು ಹಂಚಿಕೆಯ ಕೌನ್ಸಲಿಂಗ್ ದಿನಾಂಕವನ್ನು ನೋಡಿಕೊಂಡು ಆಮೇಲೆ CET ಸೀಟು ಹಂಚಿಕೆಗೆ ಕೌನ್ಸಲಿಂಗ್ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸೀಟು ಹಂಚಿಕೆ ಆರಂಭಿಸಿದ ಮೇಲೆ ಕಾಮೆಡ್-ಕೆ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.

ನೀಟ್ ನಲ್ಲಿ ಬಂದ ಅಂಕಗಳ ಆಧಾರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಫಲಿತಾಂಶ ತಡೆ ಹಿಡಿದ ವಿದ್ಯಾರ್ಥಿಗಳಿಗೆ ಮೇ 26 ರಿಂದ ನೊಂದಣಿ ಮಾಡಲು ಅವಕಾಶ ನೀಡಲಾಗುವುದು. ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣದಿಂದ ಅವರು ರಿಸಲ್ಟ್ ತಡೆ ಹಿಡಿಯಲಾಗಿತ್ತು. ಮೇ 26ರ ನಂತರ ಆನ್ಲೈನ್ ಮೂಲಕ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್. ಪ್ರಸನ್ನ ರವರು ತಿಳಿಸಿದ್ದಾರೆ.

2024 ನೇ ಸಾಲಿಗೆ ಹೋಲಿಸಿದರೆ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಭಾರೀ ಪಿಯುಸಿ ವಿಜ್ಞಾನ ವಿಷಯದಲ್ಲಿ ಪಾಸಾದವರ ಪ್ರಮಾಣ ಕಡಿಮೆ ಇದೆ. ಕೇಂದ್ರೀಯ ಪ್ರೌಢಶಾಲಾ

ಶಿಕ್ಷಣ ಮಂಡಳಿಯ CBSE ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ನಲ್ಲಿ ಮೊದಲ 8 ಸ್ಥಾನಗಳು ಬೆಂಗಳೂರಿನ ಪಾಲಾಗಿದೆ. ಉಡುಪಿ ಮತ್ತು ಮಂಗಳೂರು ವಿದ್ಯಾರ್ಥಿಗಳು ಎರಡು ಸ್ಥಾನ ಪಡೆದುಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. KEA ದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

Leave a Reply

Your email address will not be published. Required fields are marked *