HRMS ಎಂದರೇನು? ಮತ್ತು ಅದರ ಪ್ರಯೋಜನಗಳು.

HRMS

HRMS ಮಾನವ ಸಂಪನ್ಮೂಲ ನಿರ್ವಹಣೆ ಮಾಡುವ ಒಂದು ಕಾರ್ಯ. ಉದ್ಯೋಗದಾತರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ.

ಪ್ರತಿಯೊಂದು ಸಂಸ್ಥೆಯು ಕೆಲಸಗಾರರ ಸಂಪೂರ್ಣ ಮಾಹಿತಿಯನ್ನು ಶೇಖರಿಸಿಡಲು HRMS ಸಾಫ್ಟ್ವೇರ್ ಅನ್ನು ಬಳಸುತ್ತಾರೆ. ತಮ್ಮ ಸಂಪೂರ್ಣ HR ಕಾರ್ಯಾಚರಣೆಯನ್ನು ನಿರ್ವಹಿಸಲು ಬಳಸುವ ವ್ಯವಸ್ಥೆಯಾಗಿದೆ. ಇದರಲ್ಲಿ ಉದ್ಯೋಗಿಯ ಎಲ್ಲಾ ಡೇಟಾ ಇರುತ್ತದೆ ಅಂದರೆ ಉದ್ಯೋಗಿಯ ಮಾಹಿತಿ, ಕೆಲಸಗಾರರ ಹಾಜರಾತಿ, ರಜೆಯ ವಿವರ, ನೇಮಕಾತಿ, ತರಬೇತಿ, ಕಾರ್ಯಕ್ಷಮತೆ ನಿರ್ವಹಣೆ ಹೀಗೆ ಉದ್ಯೋಗಿಯ ಎಲ್ಲಾ ಮಾಹಿತಿ ಇರುತ್ತದೆ. ಒಮ್ಮೆ ಸಂಗ್ರಹಣೆ ಮಾಡಿದ ಡೇಟಾ ಶಾಶ್ವತವಾಗಿ ಇರುವುದರಿಂದ ಕೆಲಸಗಾರನ ಮಾಹಿತಿಯನ್ನು ಯಾವಾಗ ಬೇಕಾದರೂ ಸಹ ತೆಗೆದುಕೊಳ್ಳಲು ಸಾಧ್ಯ ಆಗುತ್ತದೆ. ಹಿಂದಿನ ದಿನಗಳಲ್ಲಿ ಕಾಗದ ಪತ್ರಗಳ ಮೇಲೆ ದಾಖಲೆ ಇರುತ್ತಿದ್ದವು.ಇದರಿಂದ ಆಡಳಿತದಲ್ಲಿ ದೋಷಗಳು,ಕೆಲಸದಲ್ಲಿ ವಿಳಂಬ, ಹೆಚ್ಚಿನ ಕೆಲಸ ಒತ್ತಡ ಆಗುತ್ತಿದ್ದವು. ಈ ಲೇಖನದಲ್ಲಿ ನಾವು ಮಾನವ ಸಂಪನ್ಮೂಲ ನಿರ್ವಹಣೆ(HRMS) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

HRMS ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಎಂದರೇನು?.

HRMS
HRMS

HRMS : ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಎನ್ನುವುದು ಉದ್ಯೋಗಿಗಳ ನೇಮಕಾತಿಯಿಂದ ನಿವೃತ್ತಿ ವರೆಗೆ ದಾಖಲೆಗಳನ್ನು ಸಂಗ್ರಹಿಸುತ್ತದೆ. ಉದ್ಯೋಗಿಯ ಮಾಹಿತಿ, ಕೆಲಸಗಾರರ ಹಾಜರಾತಿ, ರಜೆಯ ವಿವರ, ನೇಮಕಾತಿ, ತರಬೇತಿ, ಕಾರ್ಯಕ್ಷಮತೆ ನಿರ್ವಹಣೆ ಒಟ್ಟಾರೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

HR ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡುತ್ತದೆ. ಕಂಪನಿಯ ಸದಸ್ಯರ ಅಭಿವೃದ್ಧಿ ಮತ್ತು ಕಾರ್ಯ ತಂತ್ರದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಉದ್ಯೋಗಿಯ ವೇತನ ಪಟ್ಟಿಯನ್ನು ರೆಡಿಮಾಡಲು ಮೊದಲು ಪ್ರಾರಂಭವಾಯಿತು. ಈ ಸಾಫ್ಟವೆರ್ ಸಹಾಯದಿಂದ ಕೆಲಸದಲ್ಲಿ ಒತ್ತಡ ಕಡಿಮೆ ಆಗುತ್ತದೆ. ಕಾಗದ ಪತ್ರ ನಿರ್ವಹಣೆ ಮಾಡಲು ಬೇಕಾದ ಸಮಯದಲ್ಲಿ ಬೇರೆ ಕೆಲಸ ಮಾಡಲು ಸಹಾಯ ಆಗುತ್ತದೆ.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯನ್ನು 1970 ರಲ್ಲಿ ಪ್ರಾರಂಭ ಮಾಡಲಾಯಿತು. HR ತಂಡಗಳು ವೇತನದಾರರ ಪೇಮೆಂಟ್ ಸ್ಲಿಪ್ ರೆಡಿ ಮಾಡಲು ಈ ಸಾಫ್ಟವೆರ್ ಬಳಸುತ್ತಿದ್ದರು. ಇದರಿಂದ ಉದ್ಯೋಗಿಗಳ ನೇಮಕಾತಿ ಮತ್ತು ವೇತನ ಪಟ್ಟಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಸಂಸ್ಥೆಯಲ್ಲಿ ಜನರನ್ನು ಹೇಗೆ ನಿರ್ವಹಿಸಲಾಗುವುದು ಎಂಬುದರ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

HRMS ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ಪ್ರಯೋಜನಗಳು.

HRMS ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಎನ್ನುವುದು ಉದ್ಯೋಗಿಗಳ ನೇಮಕಾತಿಯಿಂದ ನಿವೃತ್ತಿ ವರೆಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

  • ಸುಗಮ ನೇಮಕಾತಿಗೆ ಸಹಾಯ ಮಾಡುತ್ತದೆ : ಸರಿಯಾದ ಸಮಯದಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ಕೆಲಸಗಾರರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತದೆ.
  • ಉದ್ಯೋಗ ಬಡ್ತಿ ನೀಡಲು ಸಹಾಯ ಮಾಡುವುದು : ಉತ್ತಮ ಕೆಲಸ ಮಾಡುವ ಉದ್ಯೋಗಿಗೆ ಬಡ್ತಿ ನೀಡಲು ಸಹಾಯ ಮಾಡುತ್ತದೆ. ಏಕೆಂದರೆ HRMS ಉದ್ಯೋಗಿಯ ಕೆಲಸ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವುದರಿಂದ ಯಾರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಖಚಿತ ಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಕೆಲಸ ನಿರ್ವಹಣೆ ಮಾಡಿದವರನ್ನು ಗುರುತಿಸಿ ಪ್ರಮೋಷನ್ ನೀಡಲು ಅನುವು ಮಾಡಿಕೊಡುತ್ತದೆ.
  • ಉದ್ಯೋಗಿ ಕಾರ್ಯ ಚಟುವಟಿಕೆ ಸುಲಭಗೊಳಿಸಲು ಅವಕಾಶ ನೀಡುತ್ತದೆ. ಉದ್ಯೋಗಿಯು ನಿರ್ದಿಷ್ಟ ದಿನದಲ್ಲಿ ಕೆಲಸಕ್ಕೆ ಹಾಜರಾಗಲು ಮತ್ತು ತನ್ನ ಕಾರ್ಯ ಚಟುವಟಿಕೆ ತಿಳಿಯಲು ಸಹಾಯ ಮಾಡುತ್ತದೆ.
  • ಉದ್ಯೋಗಿಯ ಸಂಪೂರ್ಣ ಮಾಹಿತಿ : ಉದ್ಯೋಗಿಯ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ನೇಮಕಾತಿ ದಿನಾಂಕ, ಸಂಪರ್ಕ ದಾಖಲೆಗಳು ಇರುತ್ತದೆ.
  • ಹಳೆಯ ಕೆಲಸದ ಮಾಹಿತಿ ಸಿಗುತ್ತದೆ : ಉದ್ಯೋಗಿ ಈ ಹಿಂದೆ ಯಾವ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.
  • ಪ್ರಸ್ತುತ ಕೆಲಸ ಮಾಡುವ ಕಂಪನಿ ಮಾಹಿತಿ ಸಿಗುತ್ತದೆ : ಹೊಸ ಕಂಪನಿ ಸೇರಿದಾಗ ನಿಮ್ಮ ಇಲಾಖೆ, ಸ್ಥಳ, ದರ್ಜೆ,ಹೀಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ನೌಕರರ ಭವಿಷ್ಯ ನಿಧಿ (PF) ಬಗೆಯೂ ಹಾಗೂ ESI ಬಗ್ಗೆ ಸಹ ಡೀಟೇಲ್ಸ್ ಸಿಗುತ್ತದೆ.

ಒಟ್ಟಾರೆಯಾಗಿ ಉದ್ಯೋಗಿಯ ನವೀಕರಿಸಿದ ಸರಿಯಾದ ಮಾಹಿತಿಯನ್ನು ಒದಗಿಸುವುದು HRMS ನ ಮುಖ್ಯ ಗುರಿಯಾಗಿದೆ.

  • ನೌಕರರ ರಜೆಯ ಮಾಹಿತಿಯನ್ನು ನೀಡುತ್ತದೆ : ಯಾವುದೇ ಸರ್ಕಾರಿ ಕಚೇರಿ ಅಥವಾ ಕಂಪನಿಯಲ್ಲಿ ಒಬ್ಬ ಉದ್ಯೋಗ ಮಾಡುವ ಕೆಲಸಗಾರರಿಗೆ ವಾರ್ಷಿಕ ನಿಗದಿತ ರಜೆ ನೀಡುವ ವ್ಯವಸ್ಥೆ ಇರುತ್ತದೆ. ಉದ್ಯೋಗಿ ಎಷ್ಟು ರಜೆ ತೆಗೆದುಕೊಂಡಿದ್ದಾರೆ ಮತ್ತು ಇನ್ನೂ ಎಷ್ಟು ರಜೆ ಬಾಕಿ ಇದೆ ಎಂಬ ಮಾಹಿತಿ ಸಿಗುತ್ತದೆ.
  • ದಿನದ ಹಾಜರಾತಿ : ವೇತನದಾರರು ಎಷ್ಟು ದಿನದ ಕೆಲಸ ಮಾಡಿದ್ದಾರೆ ಎಂಬ ಡೀಟೇಲ್ಸ್ ಲಭ್ಯವಾಗುತ್ತದೆ. ಕೆಲಸಕ್ಕೆ ಹಾಜರಾಗುವ ಸಮಯದ ಮಾಹಿತಿಯನ್ನು ಪಡೆಯಬಹುದು.
  • ಸ್ಯಾಲರಿ ಡೀಟೇಲ್ಸ್ : ವೇತನದಾರರ ಮಾಸಿಕ ಸಂಬಳ ಎಷ್ಟು ಎಂಬ ಮಾಹಿತಿ ಪಡೆಯಲು ಸಹಾಯ ಆಗುತ್ತದೆ. ಜೊತೆಗೆ ಸಂಬಳದಲ್ಲಿ PF ಮತ್ತು ESI ಎಷ್ಟು ಹಣ ಜಮೆ ಆಗಿದೆ ಎಂಬ ಸಂಪೂರ್ಣ ಡೀಟೇಲ್ಸ್ ನೀಡುತ್ತದೆ.

ವೇತನ ವಿತರಣೆ ಮತ್ತು ತೆರಿಗೆ ಮಾಹಿತಿ ಸಹ ಸಿಗುತ್ತದೆ. ಪಾವತಿ ಮಾಡಿದ ಸಂಬಳ, ಕಡಿತಗೊಂಡ ತೆರಿಗೆ ಎಲ್ಲಾ ಅಂಶಗಳು ಲಭ್ಯವಿದೆ.

  • ತರಬೇತಿ ನೀಡುವುದು : ಹೊಸ ಉದ್ಯೋಗಿ ಕೆಲಸಕ್ಕೆ ಹಾಜರಾದಾಗ ಅವರಿಗೆ ಕೆಲಸದ ಬಗ್ಗೆ ತರಬೇತಿ ನೀಡುವುದು. ಕೆಲಸದ ಸಮಯ, ನಡವಳಿಕೆ ಬಗ್ಗೆ ತಿಳಿಸುವುದು.

ಒಬ್ಬ ವ್ಯಕ್ತಿ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಅವರೂ ಮಾಡುವ ಎಲ್ಲಾ ಕೆಲಸ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ನಿರ್ವಹಿಸುತ್ತದೆ. ಉದ್ಯೋಗಿಯ ಕ್ಲಿಯರೆನ್ಸ್, ವೇತನ, ನೀಡಿರುವ ದಾಖಲೆ ಪತ್ರ ಗಳು ಮರಳಿ ನೀಡುವ ಕೆಲಸ ಮಾಡುವುದು ಇದರ ಮುಖ್ಯ ಕರ್ತವ್ಯವಾಗಿದೆ.

ಸಂಸ್ಥೆಯ ಅಥವಾ ಕಚೇರಿಯ ದತ್ತಾಂಶವನ್ನು ಸಂಗ್ರಹಣೆ ಮಾಡುವ ಮತ್ತು ನಿರ್ವಹಣೆ ಮಾಡುವ ಕಾರ್ಯ ಮಾಡುತ್ತದೆ. ಪ್ರಸ್ತುತ ಯುಗದಲ್ಲಿ HRMS ಒಂದು ವಿಶಾಲವಾದ ಮತ್ತು ಮಹತ್ವದ ವೇದಿಕೆಯಾಗಿದೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *