IOB Recruitment 2025 : ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿ ಮುಗಿಸಿಕೊಂಡು ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮೇ 2025 ಆಗಿರುತ್ತದೆ. ಕೊನೆಯ ದಿನದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. IOB ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತ ದೇಶದ ಎಲ್ಲಾ ಶಾಖೆಗಲ್ಲಿಯೂ ಸೇರಿ ಉಟ್ಟು 400 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆ 12 ಮೇ ಇಂದ ಪ್ರಾರಂಭ ಆಗಿರುತ್ತದೆ. ಈ ಲೇಖನದಲ್ಲಿ ನಾವು ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಏಲ್ಲಿ ಮತ್ತು ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ವಿವರ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
IOB Recruitment 2025 : ಹುದ್ದೆಗಳ ಸಂಪೂರ್ಣ ಮಾಹಿತಿ.

IOB Recruitment 2025 : ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ 400 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- ಬ್ಯಾಂಕ್ ಹೆಸರು : ಇಂಡಿಯನ್ ಒವೆರ್ಸಿಸ್ ಬ್ಯಾಂಕ್ (Indian Overseas bank).
- ಹುದ್ದೆಯ ಹೆಸರು : ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer).
- ಹುದ್ದೆಗಳ ವಿಂಗಡಣೆ : ತಮಿಳುನಾಡು : 260 ಹುದ್ದೆಗಳು.
- ಓಡಿಸಾ 10.
- ಮಹಾರಾಷ್ಟ್ರ 45.
- ಗುಜರಾತ್ 30.
- ಪಶ್ಚಿಮ ಬಂಗಾಳ 34 ಹುದ್ದೆಗಳು.
- ಪಂಜಾಬ್ 21 ಹುದ್ದೆಗಳು.
- ಒಟ್ಟು ಹುದ್ದೆಗಳು : 400.
- ಅರ್ಜಿ ಸಲ್ಲಿಕೆ ಪ್ರಾರಂಭ : 12 ಮೇ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಮೇ 2025.
- ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ.
- ವಯೋಮಿತಿ : 20 ವರ್ಷದಿಂದ 30 ವರ್ಷಗಳು.
- ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ.850 ಅರ್ಜಿ ಶುಲ್ಕ ಪಾವತಿ ಮಾಡಬೇಕು.
- SC/ST/pwd ವರ್ಗಕ್ಕೆ ರೂ.175 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
- ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
ಹೆಚ್ಚಿನ ಮಾಹಿತಿಯನ್ನು ಪಡೆಯಲು IOB bank ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಎಲ್ಲರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ
IOB Recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ 400 ಸ್ಥಳೀಯ ಬ್ಯಾಂಕ್ ಅಧಿಕಾರಿ(LBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
IBO ಬ್ಯಾಂಕ್ ನ LBO ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ, ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
- ವಯೋಮಿತಿ ವಿವರ (Age Qualification) :
LBO ಹುದ್ದೆಗಳಿಗೆ ಬೇಕಾಗುವ ವಯಸ್ಸಿನ ಮಿತಿಯನ್ನು ನೋಡೋಣ.
- ಕನಿಷ್ಠ ವಯಸ್ಸು 20 ವರ್ಷಗಳು.
- ಗರಿಷ್ಠ ವಯಸ್ಸು 30 ವರ್ಷಗಳು.
ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಬ್ಯಾಂಕ್ ನ ಅಧಿಕೃತ ಅಧಿಸೂಚನೆಯನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. IOB ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
IOB Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks card).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Markscards).
ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
IOB Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಇಂಡಿಯನ್ ಒವೆರ್ಸಿಸ್ ಬ್ಯಾಂಕ್ ನಲ್ಲಿ ಖಾಲಿ ಇರುವ 400 ಸ್ಥಳೀಯ ಬ್ಯಾಂಕ್ ಅಧಿಕಾರಿ(LBO) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ IOB ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ ರಿಜಿಸ್ಟರ್ ಮಾಡಬೇಕು.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿ.
- ಮೊಬೈಲ್ ನಂಬರ್ ಗೆ ಬರವಣಿಗೆ OTP ಎಂಟ್ರಿ ಮಾಡಿ, ಪಾಸ್ ವರ್ಡ್ ಸೆಟ್ ಮಾಡಬೇಕು.
- ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ಮೇಲೆ “IOB LBO recruitment” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆ ಓಪನ್ ಆಗುತ್ತದೆ, ಆಗ ನಿಮ್ಮ ವೈಯಕ್ತಿಕ ವಿವರ ಎಂಟ್ರಿ ಮಾಡಿ.
- ಹಾಗೆ ಶೈಕ್ಷಣಿಕ ವಿವರವನ್ನು ನಮೂದಿಸಿ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಮತ್ತೊಮ್ಮೆ ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಖಚಿತ ಪಡಿಸಿಕೊಳ್ಳಿ.
- ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ ಅರ್ಜಿ ಸಲ್ಲಿಸು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದೆ ನೀವು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು Email ID ಮತ್ತು Password ಬೇಕಾಗುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.