Indian oil corporation recruitment 2025 : ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಭಾರತ ಸರ್ಕಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 1,770 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಐಓಸಿಎಲ್(iocl) ಅಪ್ರಾಂಟಿಸ್ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಜೂನ್ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಸರ್ವೇ ಸಾಮಾನ್ಯ ಎಲ್ಲರೂ ಸಹ ಕೊನೆಯ ದಿನಾಂಕದಲ್ಲಿ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ, ಹಾಗಾಗಿ ವೆಬ್ಸೈಟ್ ಬ್ಯುಸಿ ಆಗುವ ಸಾಧ್ಯತೆ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಈ ಲೇಖನದಲ್ಲಿ ನಾವು ಆಯಿಲ್ ಕಾರ್ಪೋರೇಶನ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ದಯವಿಟ್ಟು ಲೇಖನ ಪೂರ್ತಿ ಓದಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
Indian oil corporation recruitment 2025 : ಹುದ್ದೆಗಳ ಸಂಪೂರ್ಣ ಮಾಹಿತಿ.

ಭಾರತೀಯ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 1,770 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಐಓಸಿಎಲ್(iocl) ಅಪ್ರಾಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಸಂಸ್ಥೆಯ ಹೆಸರು : ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್(Indian oil corporation limited).
- ಒಟ್ಟು ಹುದ್ದೆಗಳು : 1,770.
- ಹುದ್ದೆಯ ಹೆಸರು : ಐಓಸಿಎಲ್(iocl) ಅಪ್ರಾಂಟಿಸ್.
- ಅರ್ಜಿ ಸಲ್ಲಿಕೆ ಪ್ರಾರಂಭ :03/05/2025.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 02/06/2025.
- ವಿದ್ಯಾರ್ಹತೆ : ಐಟಿಐ(ITI).
- ಬಿಎಸ್ಸಿ (B.Sc).
- ಇಂಜಿನಿಯರಿಂಗ್ (Engineering).
- ವಯೋಮಿತಿ : ಕನಿಷ್ಠ 18 ವರ್ಷದಿಂದ 24 ವರ್ಷಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಜೂನ್ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Indian oil corporation recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ.
ಯಾವುದೇ ಒಂದು ಉನ್ನತ ಹುದ್ದೆಯನ್ನು ಪಡೆಯಬೇಕಾದರೆ ಶಿಕ್ಷಣ ಬಹಳ ಮುಖ್ಯ. ಉನ್ನತ ಶಿಕ್ಷಣ ಪಡೆದ ವ್ಯಕ್ತಿ ಅತ್ಯುನ್ನತ ಹುದ್ದೆಯನ್ನು ಪಡೆಯಬಹುದು. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ(Education Qualification).
- ಬಿಎಸ್ಸಿ(B.Sc) ಪದವಿಯಲ್ಲಿ ಗಣಿತ, ರಾಸಾಯನಶಾಸ್ತ್ರ, ಭೌತಶಾಸ್ತ್ರ ವಿಷಯ ಅಧ್ಯಯನ ಮಾಡಿರಬೇಕು.
- ಬಿಎಸ್ಸಿ (B.Sc) ಪದವಿಯಲ್ಲಿ ಕೈಗಾರಿಕಾ ರಾಸಾಯನಶಾಸ್ತ್ರ ವಿಷಯದಲ್ಲಿ ಅಧ್ಯಯನ ಮಾಡಿರಬೇಕು.
- ಇಂಜಿನಿಯರಿಂಗ್ ಡಿಪ್ಲೋಮದಲ್ಲಿ ಕೆಮಿಕಲ್,ಟೆಕ್ನಾಲಜಿ ಅಥವಾ ರಿಫೈನರಿ ವಿಷಯ ಕಲಿತಿರಬೇಕು.
- ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
- ಬಿಎ(BA), ಬಿ.ಕಾಂ(B.Com) ಮತ್ತು ಬಿ.ಎಸ್ಸಿ(B.Sc).
- ಪಿಯುಸಿ ವಿತ್ ಡೇಟಾ ಎಂಟ್ರಿ ಆಪರೇಟರ್ ಕಲಿತಿರಬೇಕು.
ಇವೆಲ್ಲಾ ಶಿಕ್ಷಣ ಪಡೆದ ಅರ್ಹ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ ವಿವರ (Age Qualification).
ವಯಸ್ಸಿನ ಮಿತಿಯನ್ನು ನೋಡುವುದಾದರೆ,
- ಕನಿಷ್ಠ 18 ವರ್ಷಗಳು.
- ಗರಿಷ್ಠ ವಯೋಮಿತಿ 24 ವರ್ಷಗಳು.
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 10 ವರ್ಷಗಳು.
- Pwd ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಮೇಲಿನ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಹೊಂದಿರುವ ಯುವಕರು ಮತ್ತು ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ, ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
Indian oil corporation recruitment 2025 : ಬೇಕಾಗುವ ದಾಖಲೆಗಳು.
ಭಾರತೀಯ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 1,770 ಐಓಸಿಎಲ್(iocl) ಅಪ್ರಾಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ಪ್ರಮಾಣ ಪತ್ರ (Income Certificate).
- ಎಸ್.ಎಸ್.ಎಲ್.ಸಿಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks card).
- ಐಟಿಐ ಅಂಕಪಟ್ಟಿಗಳು (ITI Marks Card).
- ಇಂಜಿನಿಯರಿಂಗ್ ಅಂಕಪಟ್ಟಿಗಳು. (Engineering Certificate).
- ಡಿಪ್ಲೋಮ ಸರ್ಟಿಫಿಕೇಟ್.(Diploma Certificate).
- ಪದವಿ ಪ್ರಮಾಣ ಪತ್ರ (Degree Certificate).
- ಪದವಿ ಅಂಕಪಟ್ಟಿಗಳು (Degree Markscard).
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Indian oil corporation recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗಿನ ಕ್ರಮಗಳನ್ನು ಅನುಸರಿಸಿ.
- ಮೊದಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (Indian Oil Corporation Limited) ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ವೆಬ್ಸೈಟ್ ಮುಖಪುಟ ತೆರೆದ ನಂತರ “iocl application” ಎಂಬ ಲಿಂಕ್ ಕ್ಲಿಕ್ ಮಾಡಿ.
- ಆಮೇಲ್ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಬೇಕು.
- ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಿ
- ರಿಜಿಸ್ಟರ್ ಮಾಡಬೇಕು.
- ರಿಜಿಸ್ಟರ್ ಆದಮೇಲೆ ಮತ್ತೆ ಲಾಗಿನ್ ಮಾಡಿ ಆಗ ಅಪ್ಲಿಕೇಶನ್ ಓಪನ್ ಆಗುತ್ತದೆ.
- ಅಪ್ಲಿಕೇಶನ್ ತೆರೆದ ನಂತರ ನಿಮ್ಮ ವಯಕ್ತಿಕ ವಿವರಗಳನ್ನು ನಮೂದಿಸಿ.
- ಆಮೇಲೆ ನಿಮ್ಮ ಶೈಕ್ಷಣಿಕ ಅರ್ಹತೆ ವಿವರವನ್ನು ಎಂಟ್ರಿ ಮಾಡಿ.
- ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
- ಆಮೇಲೆ ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
- ಎಲ್ಲಾ ಮಾಹಿತಿ ಸರಿ ಇದ್ದರೆ, ಅರ್ಜಿ ಸಲ್ಲಿಸು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ.
ರಿಜಿಸ್ಟರ್ ಮಾಡುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಅಥವಾ ಯಾವುದಾದರು ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದಿನ ದಿನದಲ್ಲಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು EMail ID ಮತ್ತು Password ಬೇಕಾಗುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.