pm kisan yojana : ಪ್ರಧಾನಮಂತ್ರಿ ಕಿಸಾನ್ ಯೋಜನೆ ಭಾರತದಲ್ಲಿ ರೈತರಿಗೆ ವಾರ್ಷಿಕ ರೂ.6,000 ಆರ್ಥಿಕ ಸಹಾಯ ನೀಡುತ್ತದೆ.
ಭಾರತ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm kisan) ಯೋಜನೆಯನ್ನು ರೈತರ ಅಭಿವೃದ್ಧಿಗೋಸ್ಕರ ಜಾರಿಗೆ ತಂದಿದೆ. ಈ ಯೋಜನೆಯು ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ಭೂ ಹಿಡುವಳಿದಾರ ರೈತರ ಕುಟುಂಬಗಳಿಗೆ ವಾರ್ಷಿಕವಾಗಿ ರೂ.6,000 ಆರ್ಥಿಕ ಸಹಾಯವನ್ನು ಮಾಡುತ್ತದೆ. ಹಣವನ್ನು ನಾಲ್ಕು ತಿಂಗಳಿಗೊಮ್ಮೆ ರೂ.2000 ದಂತೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಪಿಎಂ-ಕಿಸಾನ್ ಒಂದು ಮಹತ್ವದ ಯೋಜನೆಯಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಧನ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲ ಆಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ತಮ್ಮ ಹೆಸರಿನಲ್ಲಿ ಸಾಗುವಳಿ ಮಾಡಲು ಭೂಮಿ ಹೊಂದಿರುವ ಎಲ್ಲಾ ಭೂ ಹಿಡುವಳಿ ಕುಟುಂಬಗಲು ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ ಇದೆ. ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ,ಎಲ್ಲಿ ಸಲ್ಲಿಸಬೇಕು. ಬೇಕಾಗುವ ಅಗತ್ಯ ದಾಖಲೆಗಳು ಯಾವುವು, ಅರ್ಹತೆ, ಏನು ಪ್ರಯೋಜನ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
pm kisan yojana : ಪ್ರಧಾನಮಂತ್ರಿ ಕಿಸಾನ್ ಯೋಜನೆ ಸಂಪೂರ್ಣ ಮಾಹಿತಿ.

pm kisan yojana : ಪ್ರಧಾನಮಂತ್ರಿ ಕಿಸಾನ್ ಯೋಜನೆಯು ರೈತರ ಅಭಿವೃದ್ಧಿಗೋಸ್ಕರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
- ಯೋಜನೆ ಹೆಸರು : pm kisan yojana : ಪ್ರಧಾನಮಂತ್ರಿ ಕಿಸಾನ್ ಯೋಜನೆ.(pm-kisan).
- ಯೋಜನಾ ಜಾರಿಗೆ ಬಂದ ವರ್ಷ : 2018.
- ಉದ್ದೇಶ : ರೈತರಿಗೆ ಆರ್ಥಿಕ ಸಹಾಯ ಮಾಡುವುದು.
- ಪ್ರಯೋಜನ : ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.6000 ಧನ ಸಹಾಯ. (ಮೂರು ಕಂತು).
- ಪಾವತಿ ವಿಧಾನ : ಆನ್ಲೈನ್(online).
- ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್ (Aadhar Card).
- ಭೂ ಹಿಡುವಳಿ ಪತ್ರ.
- ಬ್ಯಾಂಕ್ ಖಾತೆ ವಿವರ(Bank Account Details).
- ಮೊಬೈಲ್ ನಂಬರ್ (Mobile number).
ಹೆಚ್ಚಿನ ಮಾಹಿತಿಯನ್ನು ಪಡೆಯಲು ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಲು ಅವಕಾಶ ಇರುತ್ತದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
pm kisan yojana : ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು.
pm kisan yojana : ಭಾರತ ದೇಶದ ಆರ್ಥಿಕತೆಯ ಪ್ರಮುಖ ಭಾಗವೆಂದರೆ ಅದು ಕೃಷಿ. ರೈತರು ನಮ್ಮ ದೇಶದ ಬೆನ್ನೆಲುಬು. ಹಾಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮ ಸರ್ಕಾರದಲ್ಲಿ ಇರಬೇಕು. ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಬೇಕು.
- ಆಧಾರ್ ಕಾರ್ಡ್ (Aadhar Card).
- ಭೂ ಹಿಡುವಳಿ ಪತ್ರ.
- ಮೊಬೈಲ್ ನಂಬರ್ (Mobile Number).
- ಬ್ಯಾಂಕ್ ಖಾತೆ ವಿವರ (Bank Account Details).
ಇವೆಲ್ಲಾ ದಾಖಲೆ ಹೊಂದಿರುವ ರೈತರು ಪಿಎಂ ಕಿಸಾನ್ ಯೋಜನಾ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಹ ಪಲಾನುಭವಿ ರೈತರಿಗೆ ವಾರ್ಷಿಕ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ವಿಳಾಸ ಇಲ್ಲಿ ಕ್ಲಿಕ್ ಮಾಡಿ
pm kisan yojana : ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.
pm kisan yojana : ಭಾರತ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm kisan) ಯೋಜನೆಯು ರೈತರ ಅಭಿವೃದ್ಧಿಗೋಸ್ಕರ, ಹಣಕಾಸಿನ ಸಹಾಯ ಮಾಡಲು ಜಾರಿಗೆ ತರಲಾಗಿದೆ. ಭೂ ಹಿಡುವಳಿದಾರರ ಕುಟುಂಬಕ್ಕೆ ವರ್ಷಕ್ಕೆ 6000 ಸಹಾಯ ಮಾಡುತ್ತದೆ. ಈ ಯೋಜನಾ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಆನ್ಲೈನ್ ಕೇಂದ್ರಕ್ಕೆ (CSC) ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ಮೂಲಕ ರಿಜಿಸ್ಟರ್ ಆಗಬೇಕು.
- ರಿಜಿಸ್ಟರ್ ಮಾಡಲು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು.
- ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು.
- ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿ.
- ರಿಜಿಸ್ಟರ್ ಮಾಡುವಾಗ ಪಾಸ್ ವರ್ಡ್ ಸೆಟ್ ಮಾಡಬೇಕು.
- ಆಮೇಲ್ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಿ.
- ಅಪ್ಲಿಕೇಶನ್ ಓಪನ್ ಆದಮೇಲೆ ನಿಮ್ಮ ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಿ.
- ನಂತರ ಭೂಮಿಯ ಎಲ್ಲಾ ಮಾಹಿತಿಯನ್ನು ಎಂಟ್ರಿ ಮಾಡಬೇಕು.
- ಆಮೇಲೆ ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿ ನಮೂದಿಸಿ.
- ಕೇಳಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಂತರ ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.
- ನಮೂದಿಸಿದ ಎಲ್ಲಾ ಮಾಹಿತಿ ಸರಿ ಇದ್ದರೆ submit ಬಟನ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಹೀಗೆ ಅರ್ಜಿ ಸಲ್ಲಿಸಿ ಪಿಎಂ ಕಿಸಾನ್ ಯೋಜನಾ ಸೌಲಭ್ಯಗಳನ್ನು ಪಡೆಯಬಹುದು.
ಈ ಯೋಜನೆಯು ಎಲ್ಲಾ ಭೂಹಿಡುವಳಿ ಮಾಡುವ ರೈತರ ಕುಟುಂಬದ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವ ಮುಖ್ಯ ಗುರಿಯನ್ನು ಹೊಂದಿದೆ. ಸರಿಯಾದ ಬೆಳೆ ಬರದಿದ್ದಾಗ, ನಿರೀಕ್ಷಿತ ಆದಾಯ ಬರದೇ ಇದ್ದಾಗ ಈ ಯೋಜನೆ ಸಹಾಯವಾಗುತ್ತದೆ.
ಇದನ್ನೂ ಓದಿ : ಕಿಸಾನ್ ಕ್ರೆಡಿಟ್ ಕಾರ್ಡ್ ಮಾಹಿತಿ.
pm kisan yojana : ಪಿಎಂ ಕಿಸಾನ್ ಸೌಲಭ್ಯ ಇವರು ಪಡೆಯುವಂತಿಲ್ಲ.
ಪಿಎಂ ಕಿಸಾನ್ ಯೋಜನಾ ಸೌಲಭ್ಯ ಪಡೆಯಲು ಕೆಲವು ಅರ್ಹತೆ ಮತ್ತು ಮನದಂಡಗಳು ಇದೆ.
- ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳು.
- ಮಾಜಿ ಮತ್ತು ಹಾಲಿ ಸಚಿವರುಗಳು.
- ವಿಧಾನ ಪರಿಷತ್ ಸದಸ್ಯರು.
- ಮಹಾ ನಗರ ಪಾಲಿಕೆ ಅಧ್ಯಕ್ಷರು ಮತ್ತು ಸದಸ್ಯರು.
- ಜಿಲ್ಲಾ ಪಂಚಾಯತ್ ಮೆಂಬರ್ಗಳು.
- ತಾಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು.
- ನಿವೃತ್ತಿ ಹೊಂದಿದ ಪಿಂಚಣಿದಾರರು.
- ಆದಾಯ ತೆರಿಗೆ ಸಲ್ಲಿಸಿದ ಎಲ್ಲಾ ವ್ಯಕ್ತಿಗಳು.
- ವೈದ್ಯರು,ಇಂಜಿನಿಯರ್,ಚಾರ್ಟೆಡ್ ಅಕೌಂಟ್ಟೆಂಟ್ಗಳು.
ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಪ್ರಮುಖ ಹುದ್ದೆ ಹೊಂದಿರುವ ವ್ಯಕ್ತಿಗಳು. ಅತೀ ಹೆಚ್ಚಿನ ಭೂಮಿ ಹೊಂದಿರುವ ಕುಟುಂಬಗಳು.
pm kisan yojana : ಪಿಎಂ ಕಿಸಾನ್ ಸೌಲಭ್ಯ ಚೆಕ್ ಮಾಡುವ ವಿಧಾನ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm kisan) ಯೋಜನೆಯು ಅರ್ಹ ಪಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತದೆ. ವಾರ್ಷಿಕ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ಇದನ್ನೂ ಹೇಗೆ ಚೆಕ್ ಮಾಡಬೇಕು ಎಂಬುದನ್ನು ತಿಳಿಯೋಣ.
ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
ವೆಬ್ಸೈಟ್ ನಲ್ಲಿ ಮೊದಲು ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.
ಅಥವಾ ನಿಮ್ಮ ಮೊಬೈಲ್ ನಂಬರ್ ಹಾಕಿ.
ಲಾಗಿನ್ ಆದಮೇಲೆ DBT ಮೂಲಕ ಹಣ ಜಮಾ ಆಗಿರುವ ಮಾಹಿತಿಯನ್ನು ಪಡೆಯಬಹುದು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.