IIFCL Recruitment 2025 : ಇಂಡಿಯನ್ ಇಂಫಾಸ್ಟಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐ.ಐ.ಎಫ್.ಸಿ.ಎಲ್ (IIFCL) ಕಂಪನಿಯಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಾ ಇರುವವರಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಏಕೆಂದರೆ ಕೊನೆಯಲ್ಲಿ ಎಲ್ಲರೂ ಅರ್ಜಿ ಸಲ್ಲಿಸುವ ಕಾರಣ, ವೆಬ್ಸೈಟ್ ಬ್ಯುಸಿ, ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಬೇಗನೆ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಸಂಬಂದಿಸಿದ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಅಂದರೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಇಲ್ಲಿ. ಬೇಕಾಗುವ ದಾಖಲೆಗಳು, ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ ಮತ್ತು ವಯೋಮಿತಿ. ಹೀಗೆ ಎಲ್ಲಾ ಸಂಪೂರ್ಣ ಮಾಹಿತಿ ನೀಡಿದ್ದೇವೆ.
IIFCL Recruitment 2025 : ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

IIFCL Recruitment 2025 : ಇಂಡಿಯನ್ ಇಂಫಾಸ್ಟಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಗ್ರೇಡ್ B ಮತ್ತು ಗ್ರೇಡ್ A ಮ್ಯಾನೇಜರ್ ಹುದ್ದೆಗೆ ಅರ್ಹ ಪದವೀಧರರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಸಂಪೂರ್ಣ ವಿವರ ನೋಡೋಣ.
- ಕಂಪನಿ ಹೆಸರು : ಇಂಡಿಯನ್ ಇಂಫಾಸ್ಟಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ (IIFCL).
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 14ಮೇ 2025.
- ಒಟ್ಟು ಹುದ್ದೆಗಳು : 08.
- ಹುದ್ದೆಗಳ ವಿಂಗಡಣೆ : ಗ್ರೇಡ್ B ಮ್ಯಾನೇಜರ್ =04.
- ಗ್ರೇಡ್ A ಸಹಾಯಕ ಮ್ಯಾನೇಜರ್ =04.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (Online).
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ, ಇದರಿಂದ ಅರ್ಜಿ ನಮೂನೆ ತುಂಬಲು ಸಹಾಯವಾಗುತ್ತದೆ. ತಾಂತ್ರಿಕ ತೊಂದರೆ ಉಂಟಾದರೆ IIFCL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.
Important Message : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳ ಹಾಗೂ ಹೊಸ ಉದ್ಯೋಗ ಮಾಹಿತಿಯನ್ನು ತಿಳಿಯಲು ದಯವಿಟ್ಟು ನಮ್ಮ “Tharak7star Whatsapp gruop join now” ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
IIFCL Recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ.
ಯಾವುದೇ ಉನ್ನತ ಹುದ್ದೆ ಪಡೆಯಲು ಶಿಕ್ಷಣ ಬಹು ಮುಖ್ಯ ಆಗುತ್ತದೆ. ಒಳ್ಳೆಯ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಉನ್ನತ ಹುದ್ದೆ ಪಡೆಯಲು ಅವಕಾಶ ಇರುತ್ತದೆ. ಇಂಡಿಯನ್ ಇಂಫಾಸ್ಟಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಗ್ರೇಡ್ B ಮತ್ತು ಗ್ರೇಡ್ A ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ (Education Qualification).
- ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಬಿ.ಟೆಕ್(B.Tech), ಬಿಇ(BE), ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
- ಕಾನೂನು ಪದವಿ (LLB).
- CA ಪದವಿ.
- ಎಂ.ಬಿ.ಎ(MBA).
ಈ ಮೇಲಿನ ಕೋರ್ಸ್ಗಳನ್ನು ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ವಯೋಮಿತಿ ವಿವರ (Age, Qualification).
- ವಯಸ್ಸಿನ ಅರ್ಹತೆ ನೋಡುವುದಾದರೆ,
- ಕನಿಷ್ಠ ವಯೋಮಿತಿ 18 ವರ್ಷಗಳು.
- ಗರಿಷ್ಠ ವಯಸ್ಸು 40 ವರ್ಷಗಳು.
ಹೀಗೆ ವಿದ್ಯಾರ್ಹತೆ ಮತ್ತು ವಯೋಮಿತಿ ಇರುತ್ತದೆ.ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ, ಇದರಿಂದ ಅರ್ಜಿ ನಮೂನೆ ತುಂಬಲು ಸಹಾಯವಾಗುತ್ತದೆ. ತಾಂತ್ರಿಕ ತೊಂದರೆ ಉಂಟಾದರೆ IIFCL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
IIFCL Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
IIFCL Recruitment 2025 : ಇಂಡಿಯನ್ ಇಂಫಾಸ್ಟಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಮೊಬೈಲ್ ನಂಬರ್ (Mobile Number).
- ಅಂಕಪಟ್ಟಿಗಳು (Markscards).
- ಆದಾಯ ದೃಡೀಕರಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
ಇವೆಲ್ಲಾ ದಾಖಲೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ಓದಿಕೊಳ್ಳಿ.
IIFCL Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.
IIFCL ಐ.ಐ.ಎಫ್.ಸಿ.ಎಲ್ (IIFCL) ಕಂಪನಿಯಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ IIFCL ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
- ವೆಬ್ಸೈಟ್ ಮುಖಪುಟ ತೆರೆದ ನಂತರ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನಮೂದಿಸಿ ರಿಜಿಸ್ಟರ್ ಆಗಬೇಕು.
- ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಬೇಕು.
- ಲಾಗಿನ್ ಆಗಿ, ಅಪ್ಲಿಕೇಶನ್ ನಲ್ಲಿ ಕೇಳಿರುವ ಮಾಹಿತಿಯನ್ನು ನಮೂದಿಸಬೇಕು.
- ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಬೇಕು. ಹೆಸರು, ವಿಳಾಸ, ಸಂಪೂರ್ಣ ವಿವರ.
- ನಂತರ ಶೈಕ್ಷಣಿಕ ವಿವರವನ್ನು ಎಂಟ್ರಿ ಮಾಡಿ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
- ಅಪ್ಲಿಕೇಶನ್ ನಲ್ಲಿ ಎಲ್ಲಾ ಮಾಹಿತಿ ಭರ್ತಿ ಮಾಡಿದ ಮೇಲೆ submit ಬಟನ್ ಮೇಲೆ ಕ್ಲಿಕ್ ಮಾಡಿ.
- ಮತ್ತೊಮ್ಮೆ ನೀಡಿರುವ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಿ ನಂತರ submit ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ನೀವು ಲಾಗಿನ್ ಆಗಲು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಮರೆಯಬೇಡಿ. ಯಾವುದಾದರು ಪುಸ್ತಕದಲ್ಲಿ ಬರೆದುಕೊಳ್ಳಿ. ಏಕೆಂದರೆ ಮುಂದೆ ಪ್ರವೇಶ ಪತ್ರ (Admit Card) ಪಡೆಯಲು ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಬೇಕು. ಹಾಗಾಗಿ ಅವುಗಳನ್ನು ನೆನಪಿನಲ್ಲಿ ಅಟ್ಟುಕೊಳ್ಳಿ ಅಥವಾ ಯಾವುದಾದರು ಡೈರಿ ಒಳಗೆ ಬರೆದು ಇಟ್ಟುಕೊಳ್ಳಿ.
ವಿಶೇಷ ಸೂಚನೆ : “tharak7starnews15” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.