BPNL Recruitment 2025 : ಭಾರತೀಯ ಪಶುಪಾಲನ ಇಲಾಖೆಯಲ್ಲಿ ಖಾಲಿ ಇರುವ 12.981 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ
ಭಾರತೀಯ ಪಶು ಸಂಗೋಪನಾ ನಿಗಮ ಲಿಮಿಟೆಡ್ ನಲ್ಲಿ 12.981 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳವರು 11 ಮೇ 2025 ರ ಒಳಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನಾಂಕ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಪಂಚಾಯತ್ ಪಶು ಸೇವಕ, ತಾಲೂಕು ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳು ಸೇರಿ ಸುಮಾರು ವಿವಿಧ ಹುದ್ದೆ ಖಾಲಿ ಇದೆ. ಖುಷಿ ವಿಚಾರ ಎಂದರೇನು ಎಸ್.ಎಸ್.ಎಲ್.ಸಿ(SSLC) ಮತ್ತು ಪಿಯುಸಿ(PUC) ಪಾಸಾದವರು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಲೇಖನದಲ್ಲಿ ನಾವು ಪಶು ಪಾಲನ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ವಿಧಾನ ಹೇಗೆ?, ಬೇಕಾದ ಅಗತ್ಯ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಪ್ರಮುಖ ದಿನಾಂಕಗಳು, ವೇತನ ಶ್ರೇಣಿ ಹಾಗೂ ಅರ್ಜಿ ಶುಲ್ಕ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನ ಪೂರ್ಣ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಿ.
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆಯ ಸಂಪೂರ್ಣ ಮಾಹಿತಿ.

BPNL Recruitment 2025 : ಭಾರತೀಯ ಪಶುಪಾಲನ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರು ಈ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.
- ಇಲಾಖೆ ಹೆಸರು : ಭಾರತೀಯ ಪಶುಪಾಲನ ಇಲಾಖೆ. (Bharatiya Pashupalana Department).
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
- ಕೊನೆಯ ದಿನಾಂಕ : 11 ಮೇ 2025.
- ಒಟ್ಟು ಹುದ್ದೆಗಳು : 12.981.
- ಹುದ್ದೆಗಳ ವಿಂಗಡಣೆ :
- ಮುಖ್ಯ ಪ್ರಾಜೆಕ್ಟ್ ಅಧಿಕಾರಿಗಳು : 44 ಹುದ್ದೆ.
- ಜಿಲ್ಲಾ ಎಕ್ಸ್ ಟೆನ್ಶನ್ ಅಧಿಕಾರಿಗಳು : 440.
- ತಾಲೂಕು ಅಭಿವೃದ್ಧಿ ಅಧಿಕಾರಿಗಳು : 2.121.
- ಪಂಚಾಯತ್ ಪಶು ಸೇವಕ : 10.376.
ಈ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಬೇಕಾದ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಮುಂದಿನ ಭಾಗದಲ್ಲಿ ನೋಡೋಣ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆ ಹುದ್ದೆಯ ವಿದ್ಯಾರ್ಹತೆ ಮತ್ತು ವಯೋಮಿತಿ.
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆಯ ಸಂಪೂರ್ಣ ಮಾಹಿತಿ ತಿಳಿದ ಮೇಲೆ ಮುಖ್ಯವಾಗಿ ಬೇಕಾದ ಅರ್ಹತೆ ಎಂದರೇ ಶೈಕ್ಷಣಿಕ ವಿವರ ಮತ್ತು ವಯಸ್ಸು ಮಿತಿ ಈಗ ಇದನ್ನೂ ತಿಳಿದುಕೊಳ್ಳೋಣ.
ಶೈಕ್ಷಣಿಕ ವಿವರ(Education Qualification) :
ಯಾವುದೇ ಉದ್ಯೋಗ ಪಡೆಯಲು ಶಿಕ್ಷಣ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
- ಮುಖ್ಯ ಪ್ರಾಜೆಕ್ಟ್ ಅಧಿಕಾರಿಗಳ (Cheif Project Officer) ಹುದ್ದೆಗಳಿಗೆ CA,CS, ಸ್ನಾತಕೋತ್ತರ ಪದವಿ(Master Degree), ಎಂ.ಬಿ.ಎ(MBA), ಎಂ.ಟೆಕ್(M.Tech) ಮತ್ತು ಎಂ.ಎಸ್ಸಿ(M.Sc) ಆಗಿರುವ ಪದವೀಧರರು ಅರ್ಜಿಗಳನ್ನು ಸಲ್ಲಿಸಬಹುದು.
- ಜಿಲ್ಲಾ ಎಕ್ಸ್ ಟೆನ್ಶನ್ ಅಧಿಕಾರಿಗಳು : ಯಾವುದೇ ಪದವೀಧರ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ.
- ತಾಲೂಕು ಅಭಿವೃದ್ಧಿ ಅಧಿಕಾರಿಗಳು : ಪಿಯುಸಿ ಆಗಿರುವ ಯುವಕರು ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು.
- ಪಂಚಾಯತ್ ಪಶು ಸೇವಕ : ಎಸ್.ಎಸ್.ಎಲ್.ಸಿ(SSLC) ಮುಗಿಸಿರುವ ಯಾವುದೇ ಜನರು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಈ ವಿದ್ಯಾರ್ಹತೆ ಹೊಂದಿರುವವರು, ಕೆಲಸಕ್ಕಾಗಿ ಕಾಯುತ್ತಿರುವವರು ಇದರ ಸದುಪಯೋಗ ಪಡೆಯಬಹುದು.
ಹಾಗೆ ವಯೋಮಿತಿ ವಿಷಯಕ್ಕೆ ಬರುವುದಾದರೆ,
ವಯೋಮಿತಿ ವಿವರ(Age Qualification) :
- ಮುಖ್ಯ ಪ್ರಾಜೆಕ್ಟ್ ಅಧಿಕಾರಿಗಳ (Cheif Project Officer) ಹುದ್ದೆಗಳಿಗೆ ವಯಸ್ಸು 40 ರಿಂದ 65 ವರ್ಷಗಳು.
- ಜಿಲ್ಲಾ ಎಕ್ಸ್ ಟೆನ್ಶನ್ ಅಧಿಕಾರಿಗಳು ಕನಿಷ್ಠ 25 ವರ್ಷದಿಂದ ಗರಿಷ್ಠ 40 ವರ್ಷಗಳು.
- ತಾಲೂಕು ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ 21 ರಿಂದ 40 ವರ್ಷಗಳು.
- ಪಂಚಾಯತ್ ಪಶು ಸೇವಕರಿಗೆ 18 ವರ್ಷದಿಂದ 40 ವರ್ಷ.
ಹೀಗೆ ವಯೋಮಿತಿ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಭೇಟಿ ಮಾಡಿ BPNL ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ.https://bharatiyapashupalan.com
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆ ಹುದ್ದೆಗಳ ಅರ್ಜಿ ಶುಲ್ಕ ವಿವರ.
ಭಾರತೀಯ ಪಶುಪಾಲನ ಇಲಾಖೆ ಹುದ್ದೆಗಳ ಅರ್ಜಿ ಶುಲ್ಕ ವಿವರಗಳನ್ನು ನೋಡೋಣ. ಒಂದೊಂದು ಹುದ್ದೆಗಳಿಗೆ ಬೇರೆ ಬೇರೆ ಶುಲ್ಕ ನಿಗದಿ ಮಾಡಲಾಗಿದೆ.
- ಮುಖ್ಯ ಪ್ರಾಜೆಕ್ಟ್ ಅಧಿಕಾರಿಗಳ (Cheif Project Officer) ಹುದ್ದೆಗೆ ರೂ.1,534 ಅರ್ಜಿ ಶುಲ್ಕ ಇದೆ.
- ಜಿಲ್ಲಾ ಎಕ್ಸ್ ಟೆನ್ಶನ್ ಅಧಿಕಾರಿಗಳಿಗೆ ರೂ.1,180 ಎಲ್ಲಾ ಅಭ್ಯರ್ಥಿಗಳು ಭರಿಸಬೇಕು.
- ತಾಲೂಕು ಅಭಿವೃದ್ಧಿ ಅಧಿಕಾರಿಗಳು ರೂ.944.
- ಪಂಚಾಯತ್ ಪಶು ಸೇವಕರಿಗೆ ರೂ.708 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ವರ್ಗದ ಜನರು ಒಂದೇ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಯಾವುದೇ ವಿನಾಯಿತಿ ಇರುವುದಿಲ್ಲ.
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.
ಭಾರತೀಯ ಪಶು ಸಂಗೋಪನಾ ನಿಗಮ ಲಿಮಿಟೆಡ್ ನಲ್ಲಿ 12.981 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್ be ಭೇಟಿ ಮಾಡಬಹುದು.
- ಮೊದಲನೆಯದಾಗಿ ಭಾರತೀಯ ಪಶುಪಾಲನ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನ್ಯೂ ರೆಜಿಸ್ಟರ್ (New Register) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಇಮೇಲ್ ಐ.ಡಿ (Email ID) ನಮೂದಿಸಬೇಕು.
- ನಂತರ ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಆಮೇಲೆ ನೀವು ನಿಮ್ಮ ಪಾಸ್ ವಾರ್ಡ್ (Password) ಅನ್ನು ಕ್ರಿಯೇಟ್ ಮಾಡಬೇಕು.
- ನಂತರ ನಿಮ್ಮ ಇಮೇಲ್ ಮತ್ತು ನೀವು ಕ್ರಿಯೇಟ್ ಮಾಡಿದ ಪಾಸ್ ವಾರ್ಡ್ ನೀಡಿ ಲಾಗಿನ್ ಮಾಡಿಕೊಳ್ಳಿ.
- ನಿಮ್ಮ ಇಮೇಲ್ ಮತ್ತು ಪಾಸ್ ವಾರ್ಡ್ ಅನ್ನು ಒಂದು ಬುಕ್ ನಲ್ಲಿ ಬರೆದು ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಮರೆಯಬಾರದು.
- ಲಾಗಿನ್ ಮಾಡಿದ ಮೇಲೆ ಕೇಳಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಎಂಟ್ರಿ ಮಾಡಿ.
- ನಂತರ ಶೈಕ್ಷಣಿಕ ವಿವರವನ್ನು ನಮೂದಿಸಿ.
- ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ಆಧಾರ್ ಕಾರ್ಡ್, ವೈಯಕ್ತಿಕ ವಿವರ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಆಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಸರಿಯಾಗಿದ್ದರೆ, ಕೊನೆಯಲ್ಲಿ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ನೀಡಿರುವ Email ID ಮತ್ತು Password ಅನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಏಕೆಂದರೆ ಮತ್ತೆ ಲಾಗಿನ್ ಆಗಲು ಇವು ಕಡ್ಡಾಯವಾಗಿ ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.