CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಗ್ರೂಪ್ A.B.ಮತ್ತು C ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ A,B, ಮತ್ತು C ವಿಭಾಗಗಳಲ್ಲಿ 60 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಏಪ್ರಿಲ್ 2025 ಆಗಿರುತ್ತದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಕೊನೆಯ ದಿನದಲ್ಲಿ ವೆಬ್ಸೈಟ್ ಬ್ಯುಸಿ ಅಥವಾ ತಾಂತ್ರಿಕ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಮೊದಲೇ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು cpcb ಹುದ್ದೆಗೆ ಸಂಬಂದಿಸಿದ ಎಲ್ಲಾ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಎಲ್ಲಿ, ಹೇಗೆ?, ಬೇಕಾಗುವ ದಾಖಲೆಗಳು, ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ವೇತನ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳ ಸಂಪೂರ್ಣ ವಿವರ.

CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ A, B ಮತ್ತು C ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲಸ ಹುಡುಕುತ್ತಿರುವ ಯುವಕರು ಮತ್ತು ಯುವತಿಯರು ಅದರ ಸದುಪಯೋಗ ಪಡೆಯಬಹುದು. cpcb ಹುದ್ದೆಗಳ ಸಂಪೂರ್ಣ ಮಾಹಿತಿ ನೋಡೋಣ.
- ಸಂಸ್ಥೆಯ ಹೆಸರು : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ.
- ಒಟ್ಟು ಹುದ್ದೆಗಳು :69.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
- ಹುದ್ದೆಗಳ ವಿಂಗಡಣೆ :
- ವಿಜ್ಞಾನಿ ಬಿ ಹುದ್ದೆಗಳ ಸಂಖ್ಯೆ : 22.
- ಸಹಾಯಕ ಲಾ ಅಧಿಕಾರಿ ಹುದ್ದೆ : 01.
- ತಾಂತ್ರಿಕ ಮೇಲ್ವಿಚಾರಕರು : 02.
- ಸೀನಿಯರ್ ಸೈಟಿಫಿಕ್ ಸಹಾಯಕ : 04.
- ಸಹಾಯಕ ಹುದ್ದೆಗಳು : 04.
- ಲೆಕ್ಕ ಪತ್ರ ಸಹಾಯಕ : 02.
- ಡೇಟಾ ಎಂಟ್ರಿ ಆಪರೇಟರ್ : 01.
- ಸ್ಟೇನೋಗ್ರಾಫರ್ ಗ್ರೇಡ್ II ಹುದ್ದೆಗಳು : 03.
- ಲೋವರ್ ಡಿವಿಷನ್ ಕ್ಲರ್ಕ್ : 05.
- ಮಲ್ಟಿ ಟಾಸ್ಕಿನ್ಗ್ ಹುದ್ದೆ : 03.
ಭಾರತ ಸರ್ಕಾರದ ಸೆಂಟ್ರಲ್ ಪೋಲ್ಯೂಷನ್ ಕಂಟ್ರೋಲ್ ಬೋರ್ಡ್ (cpcb) ಸಂಸ್ಥೆಯಲ್ಲಿ ಈ ಮೇಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದಕ್ಕೆ ಸಂಬಂದಿಸಿದ ಶೈಕ್ಷಣಿಕ ವಿವರಗಳನ್ನು ಮುಂದಿನ ಭಾಗದಲ್ಲಿ ನೋಡೋಣ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
ಭಾರತ ಸರ್ಕಾರದ ಸೆಂಟ್ರಲ್ ಪೋಲ್ಯೂಷನ್ ಕಂಟ್ರೋಲ್ ಬೋರ್ಡ್ (cpcb) ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ರೇಷನ್ ಕಾರ್ಡ್ (Ration Card).
- ಆದಾಯ ಪ್ರಮಾಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks Card).
- ಪಿ.ಯು.ಸಿ ಅಂಕಪಟ್ಟಿ (PUC Marks Card).
- ಪದವಿ ಸರ್ಟಿಫಿಕೇಟ್ (Degree Marks Card).
ಸಂಬಂದಿಸಿದ ಹುದ್ದೆಗಳಿಗೆ ಕೇಳಿರುವ ಇತರೆ ದಾಖಲೆಗಳು. ಈ ಎಲ್ಲಾ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು cpcb ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳ ಪ್ರಮುಖ ದಿನಾಂಕಗಳು.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 07/04/2025.
- ಕೊನೆಯ ದಿನಾಂಕ : 28/04/2025.
ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಕೊನೆಯ ದಿನದಲ್ಲಿ ವೆಬ್ಸೈಟ್ ಬ್ಯುಸಿ ಅಥವಾ ತಾಂತ್ರಿಕ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಮೊದಲೇ ಅರ್ಜಿ ಸಲ್ಲಿಸಿ.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ.
ಭಾರತ ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ತಿಳಿದುಕೊಳ್ಳೋಣ.
ಶೈಕ್ಷಣಿಕ ಅರ್ಹತೆ.(Education Qualification). ಮತ್ತು ವಯೋಮಿತಿ(Age Qualification) ವಿವರ ಹೀಗಿದೆ.
ಒಂದೊಂದು ಹುದ್ದೆಗೆ ಬೇರೆ ಬೇರೆ ವಿದ್ಯಾರ್ಹತೆ ನಿಗದಿ ಪಾಡಿಸಲಾಗಿದೆ. ಅವುಗಳನ್ನು(ಹುದ್ದೆವಾರು) ನೋಡೋಣ.
- ವಿಜ್ಞಾನಿ ಬಿ ಹುದ್ದೆಗಳಿಗೆ ಬಿಇ/ಬಿ.ಟೆಕ್ (BE/B.Tech) ಅಥವಾ ಎಂ.ಎಸ್ಸಿ(M.Sc).
- ಸಹಾಯಕ ಲಾ ಅಧಿಕಾರಿ : ಕಾನೂನು ಪದವಿ (LLB) ಮತ್ತು ಕಾನೂನು ಕ್ಷೇತ್ರದಲ್ಲಿ ಕೆಲಸದ ಅನುಭವ.
- ತಾಂತ್ರಿಕ ಮೇಲ್ವಿಚಾರಕರು : ಬಿ.ಎಸ್ಸಿ (B.Sc) ಅಥವಾ ಇಂಜಿನಿಯರಿಂಗ್ ಡಿಪ್ಲೊಮ.
- ಸೀನಿಯರ್ ಸೈಟಿಫಿಕ್ ಸಹಾಯಕ : ಎಂ.ಎಸ್ಸಿ ಪದವಿಯಲ್ಲಿ ಪರಿಸರ, ರಾಸಾಯನಶಾಸ್ತ್ರ ಮತ್ತು ಸೂಕ್ಷ್ಮ ಜೀವ ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡಿರಬೇಕು.
- ಸಹಾಯಕ ಹುದ್ದೆಗಳಿಗೆ ಯಾವುದೇ ಪದವಿ ಪಡೆದಿರಬೇಕು.
- ಲೆಕ್ಕ ಪತ್ರ ಸಹಾಯಕ : CA ಅಥವಾ ವಾಣಿಜ್ಯ ಪದವಿ.
- ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಪಿಯುಸಿ(PUC) ಮತ್ತು ಕಂಪ್ಯೂಟರ್ ಟೈಪಿಂಗ್ ಸ್ಪೀಡ್ ಕಲಿತಿರಬೇಕು.
- ಸ್ಟೇನೋಗ್ರಾಫರ್ ಗ್ರೇಡ್ II : ಪಿಯುಸಿ(PUC) ಮತ್ತು ಕಂಪ್ಯೂಟರ್ ಟೈಪಿಂಗ್ ಸ್ಪೀಡ್ ಕಲಿತಿರಬೇಕು.
- ಲೋವರ್ ಡಿವಿಷನ್ ಕ್ಲರ್ಕ್ : ಪಿಯುಸಿ(PUC) ಮತ್ತು ಕಂಪ್ಯೂಟರ್ ಇಂಗ್ಲಿಷ್ ಟೈಪಿಂಗ್ ಸ್ಪೀಡ್ ಕಲಿತಿರಬೇಕು.
- ಮಲ್ಟಿ ಟಾಸ್ಕಿನ್ಗ್ ಹುದ್ದೆಗೆ ಎಸ್.ಎಸ್.ಎಲ್.ಸಿ(SSLC) ಉತ್ತಿರ್ಣ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
- ಈ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು cpcb ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
- ವಯೋಮಿತಿ(Age Qualification) :
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಯೋಮಿತಿ ಹೊಂದಿರಬೇಕು.
- ಕನಿಷ್ಠ ವಯೋಮಿತಿ 18 ವರ್ಷಗಳು.
- ಗರಿಷ್ಠ ವಯೋಮಿತಿ 35 ವರ್ಷಗಳು.
ಹುದ್ದೆಗಳ ವಿಂಗಡಣೆಗೆ ಸಂಬಂದಿಸಿದ ಹಾಗೆ ಕೆಲವು ಹುದ್ದೆಗಳಿಗೆ ವಯೋಮಿತಿ ಬೇರೆ ಬೇರೆ ಇರುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ. CPCB ವೆಬ್ಸೈಟ್
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳ ಅರ್ಜಿ ಶುಲ್ಕ ಮತ್ತು ವೇತನ ವಿವರ ಹೀಗಿದೆ.
ಭಾರತ ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಸಂಬಂದಿಸಿದ ಅರ್ಜಿ ಶುಲ್ಕ ಮತ್ತು ವೇತನದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ A, B ಮತ್ತು C ವಿಭಾಗದ ಹುದ್ದೆಗಳಿಗೆ ಬೇರೆ ಬೇರೆ ವೇತನ ಶ್ರೇಣಿ ಇರುತ್ತದೆ. ಕನಿಷ್ಠ ವೇತನ ರೂ.18.000 ದಿಂದ ಗರಿಷ್ಠ 1.77.500 ವರೆಗೂ ವೇತನ ವ್ಯವಸ್ಥೆ ಇದೆ.
ಅರ್ಜಿ ಶುಲ್ಕ ವಿವರ ನೋಡುವುದಾದರೆ,
- ಅಭ್ಯರ್ಥಿಗಳ ಒಂದು ಗಂಟೆಗೆ ಪರೀಕ್ಷೆಗೆ ರೂ.500 ಫೀ ಇರುತ್ತದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಮಹಿಳಾ ಅಭ್ಯರ್ಥಿಗಳಿಗೂ ಸಹ ಶುಲ್ಕ ಇರುವುದಿಲ್ಲ.
- ಹಾಗೆ ವಿಕಲಚೇತನರಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.
- ಇತರೆ ಎಲ್ಲಾ ಅಭ್ಯರ್ಥಿಗಳು ರೂ.500 ಒಂದು ಗಂಟೆಗೆ ಪರೀಕ್ಷೆಗೆ ಅರ್ಜಿ ಶುಲ್ಕ ನೀಡಬೇಕು.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.
CPCB Recruitment 2025 : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ A,B, ಮತ್ತು C ವಿಭಾಗಗಳಲ್ಲಿನ 60 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸಿ.
- ಮೊದಲನೆಯದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನ್ಯೂ ರೆಜಿಸ್ಟರ್ (New Register) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಇಮೇಲ್ ಐ.ಡಿ (Email ID) ನಮೂದಿಸಬೇಕು.
- ನಂತರ ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಆಮೇಲೆ ನೀವು ನಿಮ್ಮ ಪಾಸ್ ವಾರ್ಡ್ (Password) ಅನ್ನು ಕ್ರಿಯೇಟ್ ಮಾಡಬೇಕು.
- ನಂತರ ನಿಮ್ಮ ಇಮೇಲ್ ಮತ್ತು ನೀವು ಕ್ರಿಯೇಟ್ ಮಾಡಿದ ಪಾಸ್ ವಾರ್ಡ್ ನೀಡಿ ಲಾಗಿನ್ ಮಾಡಿಕೊಳ್ಳಿ.
- ನಿಮ್ಮ ಇಮೇಲ್ ಮತ್ತು ಪಾಸ್ ವಾರ್ಡ್ ಅನ್ನು ಒಂದು ಬುಕ್ ನಲ್ಲಿ ಬರೆದು ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಮರೆಯಬಾರದು.
- ಲಾಗಿನ್ ಮಾಡಿದ ಮೇಲೆ ಕೇಳಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಎಂಟ್ರಿ ಮಾಡಿ.
- ನಂತರ ಶೈಕ್ಷಣಿಕ ವಿವರವನ್ನು ನಮೂದಿಸಿ.
- ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ಆಧಾರ್ ಕಾರ್ಡ್, ವೈಯಕ್ತಿಕ ವಿವರ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಆಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಸರಿಯಾಗಿದ್ದರೆ, ಕೊನೆಯಲ್ಲಿ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ನೀಡಿರುವ Email ID ಮತ್ತು Password ಅನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಏಕೆಂದರೆ ಮತ್ತೆ ಲಾಗಿನ್ ಆಗಲು ಇವು ಕಡ್ಡಾಯವಾಗಿ ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.